“ಲಕ್ಷ್ಮಿದೇವಿ” ಅನುಗ್ರಹ ಸಿಕ್ಕಿ…ಧನಪ್ರಾಪ್ತಿಯಾಗಬೇಕೆಂದರೆ.. ಮನೆಯಲ್ಲಿ ಈ 5 ವಸ್ತುಗಳು ಕಡ್ಡಾಯವಾಗಿ ಇರಬೇಕು ಗೊತ್ತಾ?

ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣದೊಂದಿಗೆ ಶುಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಯಾಕೆಂದರೆ ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆಂದು, ಹಣ ಹರಿದುಬರುತ್ತದೆಂದು ಬಹಳಷ್ಟು ಮಂದಿಯ ನಂಬಿಕೆ. ವ್ಯಾಪಾರಿಗಳಾದರೆ ತಮ್ಮ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ, ಇತರೆ ಪ್ರದೇಶಗಳಲ್ಲಿ ಲಕ್ಷ್ಮಿದೇವಿಯ ಫೋಟೋವನ್ನು ಇಟ್ಟೇ ಇರುತ್ತಾರೆ. ಆ ರೀತಿ ಮಾಡಿದರೆ ವ್ಯಾಪಾರದಲ್ಲಿ ಚೆನ್ನಾಗಿ ಹಣ ಸಂಪಾದಿಸಬಹುದು ಎಂಬುದು ಅವರ ನಂಬಿಕೆ. ಆದರೆ ಲಕ್ಷ್ಮಿ ಅನುಗ್ರಹ ಸಿದ್ದಿಸಬೇಕೆಂದರೆ ಪೂಜೆ ಮಾತ್ರವಲ್ಲ, ಇನ್ನೂ ಕೆಲವು ಕೆಲಸಗಳನ್ನೂ ಮಾಡಬೇಕಾಗಿರುತ್ತವೆ. ಆಗ ಆ ದೇವಿ ಕಟಾಕ್ಷ ಇನ್ನೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿಕಟಾಕ್ಷಕ್ಕಾಗಿ ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

laxmi-please-things

ನವಿಲು ಗರಿ…
ಒಂದು ನವಿಲು ಗರಿ ತಂದುಕೊಂಡು ಅದನ್ನು ನೀವು ಲಕ್ಷ್ಮಿ ದೇವಿಯನ್ನು ಪೂಜಿಸುವ ಬಳಿ ಇಡಬೇಕು. ಇದರಿಂದ ಆ ದೇವಿ ಅನುಗ್ರಹ ಸಿಗುತ್ತದೆ. ಯಾಕೆಂದರೆ ಸರಸ್ವತಿ ದೇವಿ ಕುಳಿತುಕೊಳ್ಳುವುದು ನವಿಲಿನ ಮೇಲೆ ಅಲ್ಲವೆ. ಅಷ್ಟೇ ಅಲ್ಲದೆ, ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೆಗಟೀವ್ ಶಕ್ತಿ ಎಲ್ಲಾ ದೂರವಾಗುತ್ತದೆ. ಪಾಸಿಟೀಟ್ ಎನರ್ಜಿ ಬರುತ್ತದೆ. ಇದರಿಂದ ನಮಗೆ ಸಾಕಷ್ಟು ಒಳಿತಾಗುತ್ತದೆ.

ಬಂಗಾರ ಅಥವಾ ಬೆಳ್ಳಿ ನಾಣ್ಯ…
ಬಂಗಾರ ಅಥವಾ ಬೆಳ್ಳಿಯಿಂದ ಮಾಡಿದ ನಾಣ್ಯವನ್ನು ಪೂಜಾಕೋಣೆಯಲ್ಲಿ ಇಡಬೇಕು. ಆ ನಾಣ್ಯದ ಮೇಲೆ ಲಕ್ಷ್ಮಿದೇವಿ, ವಿನಾಯಕ ಇದ್ದರೆ ಇನ್ನೂ ಒಳಿತು. ಇದರಿಂದ ಅಪಾರ ಸಂಪತ್ತು ಉಂಟಾಗುತ್ತದೆ.

ತಾವರೆ ಹೂವು…
ತಾವರೆ ಹೂವು ಎಂದರೆ ಲಕ್ಷ್ಮಿದೇವಿಗೆ ಎಷ್ಟೋ ಇಷ್ಟ. ಆ ದೇವಿ ತಾವರೆ ಹೂವಿನ ಮೇಲೆ ಕುಳಿತುಕೊಳ್ಳುತ್ತದೆ ಆದಕಾರಣ ಇದರಿಂದ ಆಕೆಯನ್ನು ಪೂಜಿಸಿದರೆ ಎಲ್ಲಾ ಲಾಭಗಳೇ ಉಂಟಾಗುತ್ತವೆ. ಹಣ ಚೆನ್ನಾಗಿ ಕೈಸೇರುತ್ತದಂತೆ.

ಲಕ್ಷ್ಮಿದೇವಿ ಪ್ರತಿಮೆ…
ಲಕ್ಷ್ಮಿದೇವಿ ತಾವರೆಹೂವಿನ ಮೇಲೆ ಕುಳಿತು ಸಂಪತ್ತು ಕರುಣಿಸುತ್ತಿರುವಂತೆ ಚಿತ್ರಪಟದಲ್ಲಿ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಬೇಕು. ಇದರಿಂದ ಸಂಪತ್ತು ಸಿಗುತ್ತದಂತೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಒಳಿತೆ ಆಗುತ್ತದಂತೆ.

ಅಲಂಕರಣ ವಸ್ತುಗಳು…
ಮಹಿಳೆಯರು ಹಣೆಗೆ ಧರಿಸುವ ಕುಂಕುಮ, ಕೈಗಳಿಗೆ ಧರಿಸುವ ಬಳೆ, ಗೋರಂಟಿಯಂತಹ ಹಲವು ವಿಧದ ಅಲಂಕರಣ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಇದರಿಂದ ಅವರಿಗೆ ಒಳಿತಾಗಿ ಸಂಪತ್ತು ಸಿದ್ಧಿಸುತ್ತದೆ.


Click Here To Download Kannada AP2TG App From PlayStore!