ತಮಾಷೆ ಹೋಗಿ ಅಮಾಸೆ ಎಂದರೆ ಇದೆ… ಮದುವೆಯಲ್ಲಿ ತಮಾಷೆ ಕಾಮೆಂಟ್‌ಗೆ ವರ ಬೇಸರಗೊಂಡು ಏನು ಮಾಡಿದ ಗೊತ್ತಾ..?

ಕನ್ನಡದಲ್ಲಿ ಒಂದು ಮಾತಿದೆ ತಮಾಷೆ ಹೋಗಿ ಅಮಾಸೆ ಆಯ್ತು ಅಂತ. ಇದರ ಅರ್ಥ ಏನೆಂದರೆ ತಮಾಷೆಗೆ ಮಾಡುವ ಕೆಲಸ ಮಿತಿ ಮೀರಿದರೆ ಜಗಳಕ್ಕೆ ಆಸ್ಪದ ಆಗುತ್ತದೆ ಎಂದರ್ಥ. ಇನ್ನೂ ಕ್ಲಿಯರ್ ಆಗಿ ಹೇಳಬೇಕೆಂದರೆ ನಗುತ್ತಾ ಮಾತನಾಡುತ್ತಾ ಒಬ್ಬರಿಗೊಬ್ಬರು ಹೊಡೆದುಕೊಳ್ಳುವುದು. ಇದೇ ರೀತಿಯ ಘಟನೆ ಕೇರಳದ ಮದುವೆಯೊಂದರಲ್ಲಿ ನಡೆಯಿತು. ಮದುಮಗನನ್ನು ಮಿತ್ರರು ತಮಾಷೆಗೆ ಆಟ ಆಡಿಸುತ್ತಿದ್ದರೆ ಆ ಮದುಮಗ ಸೀರಿಯಸ್ ಆದ. ಮದು ಮಗಳು ಅತಿ ಉತ್ಸಾಹದಲ್ಲಿ ಸ್ವಲ್ಪ ಕಾಮಿಡಿ ಮಾಡಬೇಕು ಎಂದುಕೊಂಡರೆ ಅದು ಸ್ವಲ್ಪ ಉಲ್ಟಾ ಆಗಿ ಬದಲಾಯಿತು.

ಸಾಮಾನ್ಯವಾಗಿ ಮದುವೆಗಳಲ್ಲಿ ವಧು ವರರನ್ನು ಮಿತ್ರರು ಮತ್ತು ಬಂಧುಗಳು ಆಟ ಆಡಿಸುತ್ತಿರುತ್ತಾರೆ. ಕೇರಳದಲ್ಲಿ ಸಂಪ್ರದಯದಂತೆ ಮದುವೆ ಬಳಿಕ ಒಂದೇ ಎಲೆಯಲ್ಲಿ ವಧು ವರರು ಜತೆಯಾಗಿ ಊಟ ಮಾಡಬೇಕಾಗಿರುತ್ತದೆ. ಆ ಸಮಯದಲ್ಲಿ ವಧುವಿಗೆ ಮೈದುನ, ನಾದಿನಿ ಆಗುವವರು ಮತ್ತು ವರನಿಗೆ ಭಾವ, ನಾದಿನಿ, ಭಾವ ಮೈದುನ ಆಗುವವರು ಆಟ ಆಡಿಸುತ್ತಿರುತ್ತಾರೆ. ಅದೇ ರೀತಿ ಮದುವೆಯಲ್ಲಿ ಸಹ ವಧು ವರರು ಇಬ್ಬರೂ ಸಹ ಭೋಜನಕ್ಕೆ ಕುಳಿತಿದ್ದಾರೆ. ಇಬ್ಬರೂ ಜತೆಯಾಗಿ ಭೋಜನ ಮಾಡಲು ಸಿದ್ಧವಾಗುವ ಸಮಯದಲ್ಲಿ ವರನ ಕಡೆಯವರು ವಧುವಿಗೆ ಗ್ಲಾಸ್ ನೀಡದೆ ಆಕೆಗೆ ನೀರು ಕೊಡದೆ ಆಟ ಆಡಿಸಿದರು. ತನಗೆ ನೀರು ಕೊಡದೆ ಇದ್ದದ್ದಕ್ಕೆ ವರನಿಗೆ ಊಟ ಹಾಕದೆ ನಾನೊಬ್ಬನೇ ತಿನ್ನುತ್ತೇನೆ ಎಂದು ಸ್ವಲ್ಪ ಕೋಪದಲ್ಲಿ ಉತ್ತರ ನೀಡಿದಳು.

ಎಲೆ ನಡುವೆ ಇಟ್ಟಿದ್ದ ಊಟವನ್ನು ತನ್ನ ಕಡೆಗೆ ಎಳೆದುಕೊಂಡಳು. ಊಟವನ್ನು ವಧು ಸೆಳೆದುಕೊಂಡ ಕಾರಣ ವಧು ಕಡೆಯವರು ಎಲ್ಲರೂ ಸೇರಿಕೊಂಡು ವರನಿಗೆ ಗೇಲಿ ಮಾಡುವಂತೆ ಕಾಮೆಂಟ್ ಮಾಡಿದರು. ನಗುತ್ತಿರುವಂತೆ ಅನ್ನಿಸಿದ ವರ ನೋಡ ನೋಡುತ್ತಿದ್ದಂತೆ ಸೀರಿಯಸ್ ಆದ. ಮುಂದಿನ ಟೇಬಲ್‌ಗೆ ಜೋರಾಗಿ ಹೊಡೆದು ಹೊರಟು ಹೋದ. ಈ ಘಟನೆ ಯಾವಾಗ, ಎಲ್ಲಿ ನಡೆಯಿತೋ ಗೊತ್ತಿಲ್ಲದಿದ್ದರೂ, ಸದ್ಯಕ್ಕೆ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯಾವುದೇ ಆಗಲಿ ಹದ್ದು ಮೀರಿದರೆ ಇದೇ ರೀತಿ ಇರುತ್ತದೆ ಎನ್ನಲು ಇದೊಂದು ನಿದರ್ಶನ. ಮದುವೆ ದಿನವೆ ಇಷ್ಟೆಲ್ಲಾ ಕೋಪ ತೋರಿಸಿದರೆ ಆ ವಧುವಿನ ಪರಿಸ್ಥಿತಿ ಏನು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೆಲ್ಲಾ ಕೋಪ ತಾಪದ ಬಳಿಕ ಏನಾಯಿತು ಎಂಬುದು ವೀಡಿಯೋದಲ್ಲಿ ಇಲ್ಲ. ಆ ಬಳಿಕ ಏನಾಗಿರುತ್ತದೆ ಎಂದು ತಮಗೆ ತೋಚಿದ ರೀತಿಯಲ್ಲಿ ಅವರವರ ಊಹೆಯಲ್ಲಿ ವೀಡಿಯೋ ನೋಡಿದವರು ಇದ್ದಾರೆ.

watch video :

അന്തസില്ലാത്ത കൂട്ടുകാർക്കൊരു പാഠാമാണിത്… ക്ലൈമാക്സ് കാണാതെ പോകരുത്… 😲😲

Posted by Orange Media Entertainment on Wednesday, 9 January 2019


Click Here To Download Kannada AP2TG App From PlayStore!

Share this post

scroll to top