ರಾಜನು ಕುಳಿತಿರುವ ಕುದುರೆಗಳಿಂದ ಅವರು ಹೇಗೆ ಮರಣಿಸಿದರೋ ತಿಳಿದುಕೊಳ್ಳಬಹುದು.! ಹೇಗೆಂದು ನಿಮಗೆ ಗೊತ್ತೆ ?

ರಾಜರಿಗೆ ಸಂಬಂಧಿಸಿದ ಬಹಳಷ್ಟು ವಿಗ್ರಹಗಳನ್ನು ನಾವೆಲ್ಲರೂ ನೋಡಿರುತ್ತೇವೆ. ರಾಜ ಕುದುರೆಯನ್ನೇರಿ ಯುದ್ಧಕ್ಕೆ ಹೋಗುತ್ತಿರುವ ಭಂಗಿಯಲ್ಲಿ ಇರುವ ವಿಗ್ರಹಗಳಲ್ಲಿ, ರಾಜ ಒಂದು ಕೈಯಲ್ಲಿ ಕತ್ತಿ,ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ರಣರಂಗದಲ್ಲಿ ಹೋರಾಡುತ್ತಿರುವ ಸಿಂಹದಂತೆ ಕಾಣಿಸುತ್ತಾನೆ. ಇನ್ನು ಮುಂದೆ ನೀವು ರಾಜರ ವಿಗ್ರಹಗಳನ್ನು ನೋಡಿದಾಗ ಅವರು ಕುಳಿತಿರುವ ಕುದುರೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ನಿಮಗೆ ಆಶ್ಚರ್ಯಕರವಾದ ಹಾಗು ಆಸಕ್ತಿಕರವಾದ ವಿಷಯಗಳು ತಿಳಿಯುತ್ತವೆ. ಅವೇನಂದರೆ…ಕುದುರೆಯ ಭಂಗಿಯನ್ನು ನೋಡಿ ರಾಜ ಹೇಗೆ ಮರಣಹೊಂದಿದರೆಂದು ತಿಳಿದುಕೊಳ್ಳಬಹುದು.ಈ ವಿಷಯವನ್ನು ತಿಳಿದುಕೊಳ್ಳುವುದು ಹೇಗೆಂದರೆ……

1.ರಾಜನು ಕುಳಿತಿರುವ ಕುದುರೆ ತನ್ನ ಮುಂದಿನ ಎರಡೂ ಕಾಲುಗಳನ್ನು ಮೇಲೆತ್ತಿದ್ದರೆ..ಆ ರಾಜನು ಯುದ್ಧದಲ್ಲಿ ಹೋರಾಡುತ್ತಾ ವೀರ ಮರಣವನ್ನಪ್ಪಿದನೆಂದು ಅರ್ಥ.


2.ಕುದುರೆ ತನ್ನ ಒಂದು ಕಾಲನ್ನು ಮಾತ್ರ ಮೇಲೆತ್ತಿದ್ದರೆ… ಆ ಕುದುರೆಯ ಮೇಲೆ ಕುಳಿತಿರುವ ರಾಜನು ಯುದ್ಧದಲ್ಲಿ ಗಾಯಗೊಂಡು,ಆ ಗಾಯಗಳು ವಾಸಿಯಾಗದೆ ಕೆಲವು ದಿನಗಳ ನಂತರ ಮರಣಹೊಂದಿದ್ದಾರೆಂದು ಅರ್ಥ.


3.ರಾಜನು ಕುಳಿತಿರುವ ಕುದುರೆಯ ಎರಡು ಕಾಲುಗಳು ಮಾತ್ರ ಭೂಮಿಯ ಮೇಲಿದ್ದರೆ,ಆ ರಾಜನು ಸಹಜವಾಗಿ ಮರಣಹೊಂದಿದ್ದಾನೆಂದು ಅರ್ಥ.

ಉದಾಹರಣೆಗೆ ರಾಣಿ ರುದ್ರಮ ದೇವಿಯ ವಿಗ್ರಹಗಳನ್ನು ಪರಿಶೀಲಿಸಿ.ಅವರು ಕುಳಿತಿರುವ ಕುದುರೆಯು ಒಂದು ಕಾಲನ್ನು ಮಾತ್ರ ಮೇಲೆತ್ತಿರುತ್ತದೆ.ಅಂದರೆ…ಅವರು ಯಾವುದೋ ಒಂದು ಯುದ್ಧದಲ್ಲಿ ಗಾಯಗೊಂಡು…. ಆಗಾಯಗಳಿಂದಲೇ ಮರಣ ಹೊಂದಿದರೆಂದು ಅರ್ಥ.ಇದು ವಾಸ್ತವದ ಸಂಗತಿಯೂ ಸಹ.ರುದ್ರಮದೇವಿ ಅಂಬದೇವನೊಂದಿಗೆ ಯುದ್ಧ ಮಾಡುವಾಗ ತೀವ್ರವಾಗಿ ಗಾಯಗೊಂಡು ನಂತರ ಮರಣಹೊಂದಿದರು.ಈ ರೀತಿಯಾಗಿ ಕುದುರೆಯ ಮೇಲೆ ರಾಜ ಕುಳಿತಿರುವ ವಿಗ್ರಹದಲ್ಲಿ ,ಕುದುರೆಯ ಕಾಲುಗಳ ಸ್ಥಿತಿಯನ್ನು ನೋಡಿ ರಾಜ ಹೇಗೆ ಮರಣ ಹೊದಿಂದನೆಂಬುದನ್ನು ಹೇಳಬಹುದು.


Click Here To Download Kannada AP2TG App From PlayStore!

Share this post

scroll to top