ಈ ಬಾಲಕಿಗೆ ಕಿವಿ ಕೇಳಿಸುವುದಿಲ್ಲ, ಮಾತು ಬರುವುದಿಲ್ಲ…. ಆದರೂ ಯಾರೂ ಮಾಡದ ಸಾಧನೆ ಮಾಡಿದ್ದಾಳೆ.

ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಿದರು ಔಟ್ ಡೋರ್ ಗೇಮ್ಸ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸುವುದು ಬಹಳ ಕಷ್ಟವಾಗಿರುತ್ತದೆ. ಇನ್ನೂ ಅಂಗಗಳು ಸರಿಯಾಗಿ ಇಲ್ಲದೇ, ಅಂಗವೈಕಲ್ಯಕ್ಕೆ ಗುರಿಯಾಗಿದ್ದರೆ ಅಂಥವರು ಸಾಧಾರಣ ಕ್ರೀಡಾಕಾರರ ಜೊತೆ ಪೈಪೋಟಿ ಕೊಡುವುದು ಬಹಳ ಕಷ್ಟಕರವಾಗಿರುತ್ತದೆ. ಅಂಗವೈಕಲ್ಯ ಇದ್ದವರು ಆಟ ಆಡುವುದೇ ಬಹಳ ಕಷ್ಟವಾಗಿರುತ್ತದೆ. ಆದರೆ ಆ ಬಾಲಕಿ ಹಾಗಲ್ಲ. ಒಂದು ಕಡೆ ಮಾತುಗಳು ಬರುವುದಿಲ್ಲ, ಇನ್ನೊಂದು ಕಡೆ ಕಿವಿ ಕೇಳಿಸುವುದಿಲ್ಲ. ಆದರೂ ಸಾಧಾರಾಣ ಕ್ರೀಡಾಕಾರರಕ್ಕೂ ಹೆಚ್ಚಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಅಷ್ಟಕ್ಕೂ ಆಕೆ ಆಡುತ್ತಿರುವ ಆಟ ಯಾವುದು ಗೊತ್ತೇ..? ಕ್ರಿಕೆಟ್!

ಛತ್ತಿಸಗಢ್ ದ ಬಿಲಾಸ್’ಪುರ್ ನಗರದ ಬಾಲಕಿ ಶ್ರದ್ಧಾ. ಹುಟ್ಟಿಂದಲ್ಲೇ ಕಿವಿ ಕೇಳಿಸುವುದಿಲ್ಲ, ಮಾತು ಬರುವುದಿಲ್ಲ. 13 ನೇ ವಯಸ್ಸಿನಲ್ಲಿ ಒಂದು ದಿನ ತನ್ನ ಅಣ್ಣನ ಜೊತೆ ಸೇರಿ ಟಿವಿ ಯಲ್ಲಿ ಕ್ರಿಕೇಟ್ ನ್ನು ವೀಕ್ಷಿಸುತ್ತಾಳೆ. ಇದರಿಂದ ಅವಳು ಸಹ ಕ್ರಿಕೆಟ್ ಆಡಬೇಕೆಂದುಕೊಳ್ಳುತ್ತಾಳೆ. ಆದರೆ ಅವರ ಅಣ್ಣ, ಪೋಷಕರು ಮೊದಲು ಮೊದಲು ಏನೆಂದುಕೊಂಡರೆಂದರೆ..? ಕ್ರಿಕೆಟ್ ಅಂದರೆ ಇಷ್ಟವಾಗಿ ಏನೋ ಸ್ವಲ್ಪ ಹೊತ್ತು ಖುಷಿಯಿಂದ ಆಟವಾಡಿ ಸಮ್ನನಾಗುತ್ತಾಳೆ ಎಂದು ಅವರು ಭಾವಿಸಿದ್ದರು. ಆದರೆ ಆಕೆ ಪ್ರತಿದಿನ ಆಸಕ್ತಿಯಿಂದ ಕ್ರಿಕೆಟ್ ಆಡುವುದನ್ನು ಗಮನಿಸಿದ ಮನೆಯವರು ಸ್ಥಳೀಯ ಕ್ರಿಕೆಟ್ ಕೋಚಿಂಗ್ ಸೆಂಟರ್ ಗೆ ಅವಳನ್ನು ಸೇರಿಸಿದರು.

ಬಿಲಾಸ್’ಪುರ್ ದಲ್ಲಿ ಚಾಂಪಿಯನ್ಸ್ ಅಕಾಡೆಮಿ ಎನ್ನುವ ಹೆಸರಿನ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯಲ್ಲಿ ಮೋಹನ್ ಸಿಂಗ್ ಠಾಕೂರ್’ರವರ ಬಳಿ ಶ್ರದ್ಧಾ ನಿತ್ಯ ಕೋಚ್ ತೆಗೆದುಕೊಳ್ಳುತ್ತಿದ್ದಳು. ಹೀಗೆ ದಿನ ಕಳೆದಂತೆ ಅವಳಲ್ಲಿರುವ ಸಾಮರ್ಥ್ಯವನ್ನು ಕಂಡ ಕೋಚ್ ಮೋಹನ್ ಸಿಂಗ್ ಮೊದಲು ಪ್ರಾಂತೀಯ ಕ್ರಿಕೇಟ್ ಮ್ಯಾಚ್ ಗಳನ್ನು ಆಡುವುದಕ್ಕೆ ಅವಕಾಶ ನೀಡಲು ಪ್ರಯತ್ನಪಟ್ಟರು. ನಂತರ ಅವಳ ಪ್ರತಿಭೆಯನ್ನು ನೋಡಿ ಸಾಧಾರಣ ಕ್ರಿಕೇಟಿಗರ ಜೊತೆ ಆಡುವುದಕ್ಕೆ ತಯಾರಿ ನೀಡುತ್ತಿದ್ದಾರೆ. ಇದರಿಂದ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ವಿಕಲಚೇತನ ಮಹಿಳೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ….!
ಏನೇ ಆಗಲಿ ಆ ಬಾಲಕಿಗೆ ಶುಭವಾಗಲಿ ಎಂದು ಹಾರೈಸೋಣ….


Click Here To Download Kannada AP2TG App From PlayStore!