ಈ ಫೋಟೋ ನೋಡಿದ್ರಾ..? ಇದರಲ್ಲಿ ಇರುವ ನಾಲ್ಕು ಮಂದಿಯಲ್ಲಿ ನೀವ್ಯಾರು..? ಜೀವನ ಸತ್ಯ ತಿಳಿದುಕೊಳ್ಳಿ.!

ಕೆಳಗೆ ಕೊಟ್ಟಿರುವ ಫೋಟೋವನ್ನು ನೀವು ಈಗಾಗಲೆ ಫೇಸ್‍ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನೊಡಿಯೇ ಇರುತೀರ. ಅನೇಕ ಲಕ್ಷ ಸಲ ಈ ಫೋಟೋ ಶೇರ್ ಆಗುತ್ತಿದೆ ಸಹ. ಆದರೆ ಈ ಫೋಟೋದಲ್ಲಿರುವ ನಾಲ್ಕು ಮಂದಿಯಲ್ಲಿ ಅತ್ಯಂತ ಮೂರ್ಖ ವ್ಯಕ್ತಿ ಯಾರು ಎಂಬುದು ಈ ಫೋಟೋ ಉದ್ದೇಶ. ಇದಕ್ಕೆ ಬೇರೆಬೇರೆ ಉತ್ತರ ನೀಡುತ್ತಾರೆ. ಆದರೆ ನಾವೀಗ ಹೇಳಲಿರುವುದು ಇವರಲ್ಲಿ ಮೂರ್ಖ ಯಾರು ಎಂಬುದಲ್ಲ. ನಾಲ್ಕು ಮಂದಿಯಲ್ಲಿ ನೀವು ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಅದನ್ನು ಅವಲಂಭಿಸಿ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದನ್ನು ಕೆಳಗೆ ಕೊಟ್ಟ ಒಂದು ಪಾಯಿಂಟ್ ಹೇಳುತ್ತದೆ. ಉದಾಹರಣೆಗೆ ನೀವು ನಾಲ್ಕು ಮಂದಿಯಲ್ಲಿ 3ನೇ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದುಕೊಳ್ಳೋಣ. ಆಗ ನೀವು ನೇರವಾಗಿ ಮೂರನೇ ಪಾಯಿಂಟ್ ಸೆಲೆಕ್ಟ್ ಮಾಡಿಕೊಳ್ಳಿ. ಎರಡನೇ ವ್ಯಕ್ತಿ ಆಯ್ಕೆ ಮಾಡಿಕೊಂಡರೆ ಎರಡನೇ ಪಾಯಿಂಟ್ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದರ್ಥ. ಆ ನಾಲ್ಕು ಮಂದಿ ವ್ಯಕ್ತಿತ್ವಗಳನ್ನು ಕೆಳಗೆ ತಿಳಿದುಕೊಳ್ಳೋಣ..

1. ಚಿತ್ರದಲ್ಲಿರುವ ಮೊದಲನೇ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಇದು ನಿಮಗಾಗಿ. ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆಂದರೆ…. ಚಿತ್ರದಲ್ಲಿರುವ ಮೊದಲ ವ್ಯಕ್ತಿಯನ್ನು ಅದಕ್ಕೆ ಉದಾಹರಣೆಯಾಗಿ ನೀಡಬಹುದು. ನೀವು ತುಂಬಾ ಮೃದು ಸ್ವಭಾವದವರಾಗಿರುತ್ತೀರ. ಯಾರೊಂದಿರೂ ಅಷ್ಟು ಸುಲಭವಾಗಿ ಗಲಾಟೆ ಮಾಡಿಕೊಳ್ಳಲ್ಲ. ಯಾವಾಗಲೂ ಸಮಸ್ಯೆಯನ್ನು ಶಾಂತಿಯಿಂದ ಪರಿಹರಿಸಿಕೊಳ್ಳಬೇಕೆಂದು ನೋಡುತ್ತಾರೆ. ನಿಮ್ಮ ಒಳ್ಳೆಯತನವನ್ನು ಬೇರೆಯವರು ಬಳಸಿಕೊಳ್ಳುತ್ತಾರೆ.

2. ಚಿತ್ರದಲ್ಲಿನ ಎರಡನೇ ವ್ಯಕ್ತಿಯನ್ನು ನೀವು ಆಯ್ಕೆ ಮಾಡ್ದಿಕೊಂಡಿದ್ದೇ ಆದರೆ ನಿಮ್ಮ ವ್ಯಕ್ತಿತ್ವ ಈ ರೀತಿ ಇರುತ್ತದೆ…. ನಿಮಗೆ ಆತುರ ಜಾಸ್ತಿ. ಪ್ರತಿ ವಿಚಾರದಲ್ಲೂ ಆತುರ ತೋರುತ್ತೀರ. ಕಾದುನೋಡುವ ಸ್ವಭಾವ ಯಾವುದೇ ಕಾರಣಕ್ಕೂ ಇರಲ್ಲ. ಏನೇ ಆಗಲಿ ಬೇಗ ನಡೆಯಬೇಕೆಂದು ಬಯಸುತ್ತೀರ. ಎಳ್ಳಷ್ಟೂ ಸಹನೆ ಇರಲ್ಲ. ಇದರಿಂದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೀರ. ಇತರರು ಹೆಣೆದ ಬಲೆಗೆ ಬೀಳುತ್ತೀರ. ಇತರರು ಹೇಳುವ ಒಳ್ಳೆಯ ಮಾತನ್ನು ಕೇಳಿಸಿಕೊಳ್ಳಲ್ಲ. ನೀವು ಯಾವುದೇ ಕೆಲಸವನ್ನೂ ಆಲೋಚಿಸದೆ ಕಣ್ಣುಮುಚ್ಚಿಕೊಂಡು ಫಾಲೋ ಆಗುತ್ತೀರ.

3. ಚಿತ್ರದಲ್ಲಿನ ಮೂರನೇ ವ್ಯಕ್ತಿಯನ್ನು ನೀವು ಆಯ್ಕೆ ಮಾಡ್ದಿಕೊಂಡಿದ್ದೇ ಆದರೆ ನಿಮ್ಮ ವ್ಯಕ್ತಿತ್ವ ಈ ರೀತಿ ಇರುತ್ತದೆ. ನೀವು ಯಾವಾಗಲೂ ಕೋಪದಿಂದ ಇರುತ್ತೀರ. ನಿಮಗೆ ಜೀವನದ ಬಗ್ಗೆ ಸಂಪೂರ್ಣ ಅರಿವಿರುತ್ತದೆ. ಯಾವ ಗುರಿಯನ್ನು ತಲುಪಬೇಕು ಎಂಬ ಬಗ್ಗೆ ಕ್ಲಿಯರ್ ಆಗಿ ಇರುತ್ತೀರ. ಜೀವನದ ಬಗ್ಗೆ ನಿರ್ದಿಷ್ಟವಾದ ಅಭಿಪ್ರಾಯ ಇರುತ್ತದೆ. ಯಾರೊಂದಿಗೇ ಆಗಲಿ, ಯಾವುದೇ ಸಂದರ್ಭದಲ್ಲಾಗಲಿ ಹೋರಾಡಲು ಸಿದ್ಧರಿರುತ್ತೀರ. ಗೆಲುವಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತೀರ. ಗೆಲುವು ಸಾಧಿಸುವವರೆಗೂ ಯಾವ ಕೆಲಸವನ್ನೂ ಬಿಡಲ್ಲ.

4. ಚಿತ್ರದಲ್ಲಿನ 4ನೇ ವ್ಯಕ್ತಿಯನ್ನು ನೀವು ಆಯ್ಕೆ ಮಾಡ್ದಿಕೊಂಡಿದ್ದೇ ಆದರೆ ನಿಮ್ಮ ವ್ಯಕ್ತಿತ್ವ ಈ ರೀತಿ ಇರುತ್ತದೆ. ನೀವು ಯಾರ ಮಾತನ್ನೂ ಕೇಳಲ್ಲ. ಮೂರ್ಖರಂತೆ ಮುನ್ನುಗ್ಗುತ್ತೀರ. ಕಡೆಗೆ ಬೋರಲು ಬೀಳುತ್ತೀರ. ಕೆಲವು ಸಂದರ್ಭಗಳಲ್ಲಿ ಯಾರೊಂದಿಗಾದರೂ ಫೈಟ್ ಮಾಡಲು ಸಿದ್ಧವಾಗಿರುತ್ತೀರ. ಆದರೆ ಯಾಕೋ ಗೊತ್ತಿಲ್ಲ. ಕಣ್ಣುಮುಚ್ಚಿಕೊಂಡು ಮುಂದೆ ಸಾಗುತ್ತೀರ.