ಪ್ರತಿದಿನ ಮೊಸರನ್ನು ಏಕೆ ಸೇವಿಸಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…

ಮೊಸರಿಲ್ಲದ ಊಟ ಊಟವೇ ಅಲ್ಲ… ಆರೋಗ್ಯ ದೃಷ್ಟಿಯಿಂದ ಮೊಸರು ಬಹಳ ಉಪಯೋಗ. ಒಳ್ಳೆಯ ಮೊಸರು ಸಿಗುವುದು ಕಷ್ಟ. ಆದರೆ ನಿಮ್ಮ ಮನೆಯಲ್ಲಿನ ಹಿರಿಯರನ್ನು ಕೇಳಿ ನೋಡಿ ಮೊಸರು ಇಲ್ಲದೆ ಎಂದಾದರೂ ಊಟ ಮಾಡಿದ್ದಿರಾ..? ಎಂದು…ಖಂಡಿತ ಇಲ್ಲ ಎಂದು ಹೇಳುತ್ತಾರೆ. ಅಂದಿನ ದಿನಗಳಲ್ಲಿ ಊಟದಲ್ಲಿ ಮೊಸರು ಇರಲೇಬೇಕು. ಮೊಸರು ಇಲ್ಲದೇ ಊಟ ಮಾಡುತ್ತಿರಲಿಲ್ಲ. ಆದರೆ ಈಗ..? ವಾರದಲ್ಲಿ ಎಷ್ಟು ದಿನ ಮೊಸರು ಸೇವಿಸುತ್ತವೆ…? ಅಷ್ಟಕ್ಕೂ ಮೊಸರಿನೊಂದಿಗೆ ಊಟವನ್ನು ಮುಗಿಸುವುದು ನೂರಾರು ವರ್ಷಗಳಿಂದ ಇವರು ಪದ್ದತಿ. ಮೊಸರನ್ನು ಬಳಸುವುದರಿಂದ ಅರೋಗ್ಯಕ್ಕೆ ಎಷ್ಟೋ ಅನುಕೂಲಗಳಿವೆ. ಪ್ರತಿದಿನ ಮೊಸರು ಯಾಕೆ ಸೇವಿಸಬೇಕು ಎಂಬುದಕ್ಕೆ ಇಲ್ಲಿದೆ ಉತ್ತರ ಓದಿ…

  • ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್, ಗಟ್ ಬ್ಯಾಕ್ಟೀರಿಯಾ ಇರುತ್ತವೆ. ಬೇರೆ ಆಹಾರಗಳಿಂದ ವಿಟಮಿನ್ಸ್ ಮತ್ತು ಮಿನರಲ್ಸ್ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ.
  • ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಲಸ್ಸಿ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಶಾಖ ಕಡಿಮೆಯಾಗುತ್ತದೆ. ಹೊಟ್ಟೆ ನೋಯುತ್ತಿದ್ದು, ಅನೇಕ ಬಾರಿ ಶೌಚಾಲಯಕ್ಕೆ ಹೋಗಬೇಕೆನಿಸಿದರೆ ಮೊಸರಿಗೆ ಇಸಬ್ ಗೋಲ್ ಹಾಕಿ ಕುಡಿಯಬೇಕು.
  • ಬಿರಿಯಾನಿ ಸೆಂಟರ್’ನಲ್ಲಿ ಮೊಸರು ಯಾಕೆ ಕೊಡುತ್ತಾರೆ ಗೊತ್ತಾ…? ಮಸಾಲೆ ಆಹಾರದಿಂದ ದೇಹದಲ್ಲಿ ಜನರೇಟ್ ಆಗುವ
    ಹೀಟ್ ಅನ್ನು ಮೊಸರು ನ್ಯೂಟ್ರಲೈಜ್ ಮಾಡುತ್ತದೆ. ಪೆಪ್ಟಿಕ್ ಅಲ್ಸರ್ ಅನ್ನು ಟ್ರಿಟ್ ಮಾಡಲು ಉಪಯೋಗವಾಗುತ್ತದೆ.
  • ಮೊಸರಿನಲ್ಲಿ ಗಟ್ ಬ್ಯಾಕ್ಟೀರಿಯಾ ಇರುವುದರಿಂದ, ಕ್ರಿಮಿಗಳ ಜೊತೆಗೆ ಹೋರಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುಸುವಲ್ಲಿ ಇದು ಸಹಾಯ ಮಾಡುತ್ತದೆ. ಈಸ್ಟ್ ಇನ್ಫೆಕ್ಷನ್ಸ್’ನಿಂದ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಇದು ಎಷ್ಟೋ ಉಪಯೋಗಕಾರಿ.
  • ಮೊಸರಿನಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮೂಳೆಗಳ ಆರೋಗ್ಯ ತುಂಬಾ ಒಳ್ಳೆಯದು. ನಿಯಮಿತವಾಗಿ ಮೊಸರನ್ನು ಸೇವಿಸುವವರಿಗೆ ಕೀಲುಗಳ ನೋವು, ಹಲ್ಲು ನೋವು ಬರುವುದು ಕಡಿಮೆ.
  • ಮೊಸರು ಸೇವಿಸುವುದರಿಂದ ಹೃದಯ ಸಂಬಂಧಿ ಖಾಯಿಲೆ ಗುಣವಾಗುತ್ತದೆ. ರಕ್ತದೊತ್ತಡ, ಮೂತ್ರಪಿಂಡ ಖಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಮೊಸರಿಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುವುದಲ್ಲದೇ, ಹೃದಯ ಬಡಿತವನ್ನು ನಿಯಂತ್ರಿಸುತ್ತದೆ.
  • ವಿಟಮಿನ್ ಇ, ಜಿಂಕ್, ಫಾಸ್ಫರಸ್ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಸಹ ಸಹಕಾರಿ. ಹಾಗೆಯೇ ಸ್ಟ್ರಾಸ್’ನಿಂದ ನೊಂದಿರುವವರು ಮೊಸರನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

Click Here To Download Kannada AP2TG App From PlayStore!

Share this post

scroll to top