ನಿಮ್ಮ ಹೆಸರುಗಳಲ್ಲಿ A E I O U ಸ್ವರಗಳನ್ನು ಲೆಕ್ಕ ಮಾಡಿ ನೋಡಿ! ಕೊನೆಯ ನಂಬರ್’ನಿಂದ ನೀವು ಯಾವ ತರಹದ ವ್ಯಕ್ತಿತ್ವ ಹೊಂದಿದವರು ಎಂಬುದು ತಿಳಿದುಕೊಳ್ಳಿ…

ಈಗ ಇದೊಂದು ಒಳ್ಳೆಯ ಟ್ರೆಂಡಿಂಗ್ ಟಾಫಿಕ್. ಹೆಸರುಗಳಲ್ಲಿನ ಕೆಲವು ಅಕ್ಷರಗಳನ್ನು ತೆಗೆದುಹಾಕುವುದು ಅಥವಾ ಹೊಸ ಅಕ್ಷರಗಳನ್ನು ಸೇರಿಸುವುದೋ ನಡೆಯುತ್ತಿದೆ. ಆದ್ದರಿಂದ ಈಗ ನಾವು ‘O’  ಎಂದರೆ ನ್ಯೂಮರಲಜಿಯಲ್ಲಿ ಏನೆಂದು ತಿಳಿಸಿದ್ದಾರೆಂಬುದನ್ನು ಚರ್ಚಿಸೋಣ. ನಿಮ್ಮ ಹೆಸರುಗಳಲ್ಲಿ ಇಂಗ್ಲೀಷ್ ಸ್ವರಗಳಾದ A E I O U ಗಳ ಪ್ರಕಾರ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ. ಇದಕ್ಕಾಗಿ ಕೆಲವು ಸ್ಟೆಪ್ಸ್ ಇವೆ. ಅವುಗಳನ್ನು ಈ ವಿಧಾನವಾಗಿಯೇ ಫಾಲೋ ಆಗಬೇಕು..!

Step-01: ಮನೆಯ ಹೆಸರ ಜೊತೆಗೆ ನಿಮ್ಮ ಪೂರ್ತಿ ಹೆಸರನ್ನು ಇಂಗ್ಲೀಷ್ ನಲ್ಲಿ ಬರೆಯಿರಿ Ex: Konidela chiranjeevi .

Step-02: ಈ ಹೆಸರಿನಲ್ಲಿ ಇರುವ ಸ್ವರಗಳನ್ನು ಅಂದರೆ A E I O U ಮಾತ್ರವೇ ಒಂದು ಕಡೆ ಬರೆದಿಟ್ಟುಕೊಳ್ಳಿ Ex: ಮೇಲೆ ತಿಳಿಸಿದ ಹೆಸರಿನಲ್ಲಿನ ಸ್ವರಗಳನ್ನು ಬೇರೆಯಾಗಿ ಬರೆದರೆ, O I E A I A E E I.ಆಗುತ್ತದೆ.

Step-03 : ಸಾಲಾಗಿ ಕ್ರಮಾನು ಸಾರವಾಗಿ ಈ ಸ್ವರಗಳಿಗೆ ನಂಬರ್ ಗಳನ್ನು ಕೊಡಿ, ಅಂದರೆ A=1 E=2 I=3 O=4 U=5 Ex= ಮೇಲಿನ ಹೆಸರಿಗೆ ತಕ್ಕಂತೆ O=4 I=3 E=2 A=1 I=3 A=1 E=2 E=2 I=3.

Step-04 : ಎಲ್ಲವನ್ನು ಕೂಡಿರಿ. Ex=ಮೇಲಿನ ಹೆಸರು: ಎಲ್ಲವನ್ನು ಕೂಡಿದಾಗ 4+3+2+1+3+1+2+2+3=21 ಬರುವುದು.

Step-05: ಸಿಂಗಲ್ ನಂಬರ್ ಬರುವ ಹಾಗೇ ಫೈನಲ್ ನಂಬರ್ ನ್ನು ಕೂಡಬೇಕು. Ex=2+1=3 ಈಗ ಫೈನಲ್ ಆಗಿ ಬಂದ ನಂಬರ್ ನಿಂದ ಅವರ ವ್ಯಕ್ತಿತ್ವವನ್ನು ಈ ವಿಧವಾಗಿ ಅಂದಾಜು ಮಾಡಿ.

NUMBERS:

  • ಬರ್ತ್ ನಂಬರ್ -01, ಹುಟ್ಟಿದಾಗಿನಿಂದಲೂ ನೀವು ನಾಯಕತ್ವ ಲಕ್ಷಣಗಳನ್ನು ಹೊಂದಿರುತ್ತೀರಾ. ಯಾವಾಗಲೂ ಹಠ ಸ್ವಭಾವ ,ಆತ್ಮವಿಶ್ವಾಸವನ್ನು ಹೊಂದಿರುತ್ತೀರ. ನಾಲ್ವರಲ್ಲಿ, ಒಬ್ಬರಂತೆ ಅಲ್ಲದೆ ಅವರಲ್ಲಿ ವೈಶಿಷ್ಟ್ಯತೆ ಇರಬೇಕೆಂದು ಬಯಸುತ್ತೀರಾ. ಇವರಲ್ಲಿ ಸೃಜನಾತ್ಮಕ ಶಕ್ತಿ ಅಧಿಕವಾಗಿರುತ್ತದೆ. ಆದರೆ ಕೆಲವು ಸರಿ ಬರುವಂತಹ ಈಗೋ (ಅಹಂಕಾರ) ಸಮಸ್ಯೆಗಳಿಂದ ತೊಂದರೆ ಎದುರಿಸಬೆಕಾಗಿರುತ್ತದೆ.
  • ಬರ್ತ್ ನಂಬರ್ -02, ಇವರು ತಮ್ಮ ಸ್ವಂತ ನೈಪುಣ್ಯತೆಗಳಿಂದ ಜೀವನದಲ್ಲಿ ಮೇಲೆಬರುತ್ತಾರೆ. ಲಕ್ಷ್ಯಸಾಧನದ ದಿಕ್ಕಿಗೆ ನಡೆಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕೆಲವು ಸಾರಿ ಎಮೋಷನ್ (ಭಾವುಕರು)ಆಗುತ್ತಾರೆ.ಈಸಂದರ್ಭದಲ್ಲೇಹೀಗೆಎಮೋಷನ್ಆಗಿಇತರರನ್ನು ತೊಂದರೆಗೀಡುಮಾಡುತ್ತಾರೆ.
  • ಬರ್ತ್ ನಂಬರ್ -03,ಇವರು ಯಾವಾಗಲೂ ಸಾಹಸಗಳನ್ನು ಮಾಡಬೇಕೆಂದು ಬಯಸುತ್ತಾರೆ. ಇತರರೊಂದಿಗೆ ಉತ್ತಮವಾದ ಸಂವಹನ(ಕಮ್ಯುನಿಕೇಷನ್) ಹೊಂದಿರುತ್ತಾರೆ. ಇತರರನ್ನು ಸಕಾರಾತ್ಮಕತೆಯ(ಫಾಸಿಟೀವ್) ಕಡೆಗೆ ನಡೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರನ್ನು ಇತರರು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.
  • ಬರ್ತ್ ನಂಬರ್-04,ಇವರಲ್ಲಿ ಅನಂತವಾದ ಶಕ್ತಿ ಇರುತ್ತದೆ. ಆದರೆ ಅದರ ಬಗ್ಗೆ ಅವರಿಗೆ ತಿಳಿಯುವುದಿಲ್ಲ. ಆ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ,  ಆಗಾಗ ವಿಫಲವಾಗುತ್ತಿರುತ್ತಾರೆ.
  • ಬರ್ತ್ ನಂಬರ್ -05, ಇವರು ಹೆಚ್ಚಾಗಿ ಸ್ವೇಚ್ಚೆಯನ್ನು(ಸ್ವತಂತ್ರವನ್ನು) ಬಯಸುತ್ತಾರೆ. ಆದರೆ ಕೆಲವುಸಾರಿ ಇವರಲ್ಲಿನ ತಾಳ್ಮೆ ನಶಿಸುತ್ತದೆ. ತಾಳ್ಮೆಯನ್ನು ಗೆದ್ದೂ, ಕಷ್ಟಪಟ್ಟರೆ ಯಶಸ್ವಿಯಾಗುತ್ತಾರೆ.
  • ಬರ್ತ್ ನಂಬರ್ -06,ಇವರು ಯಾವಾಗಲೂ ತಾವು ಮಾಡಿದ ಕೆಲಸದಲ್ಲಿ ಖಚಿತತೆಯನ್ನು ಬಯಸುತ್ತಾರೆ. ಇದು ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಆದರೆ ಇವರು ಇತರರೊಂದಿಗೆ ಸ್ನೇಹಯುತವಾದ ಸಂಬಂಧಗಳನ್ನು ಮುಂದುವರೆಸುತ್ತಾ, ಅವರಿಗೆ ಸಹಯ ಮಾಡುತ್ತಾರೆ. ಇದು ಅವರಿಗೆ ಇನ್ನಷ್ಟು ಉಪಯುಕ್ತವಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಹಠಕ್ಕೆ ಹೊಗುತ್ತಾರೆ.
  • ಬರ್ತ್ ನಂಬರ್ -07, ಇವರು ಒಳ್ಳೆಯ ಆಲೋಚನಾ ಶಕ್ತಿಯನ್ನು ಹೊಂದಿರುತ್ತಾರೆ. ಬುದ್ದಿವಂತಿಕೆಯ ನಿರ್ಣಯ ತೆಗೆದುಕೊಳ್ಳುತ್ತಾರೆ. ವಿಶ್ಲೇಷಣಾತ್ಮಕವಾದ ಮನಸ್ಸು ಹೊಂದಿರುತ್ತಾರೆ. ಯಾವ ವಿಷಯದಲ್ಲಾದರೂ, ಹಿಂಜರಿಯುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಇವರು ಸ್ವಾರ್ಥಪೂರಿತವಾಗಿರುತ್ತಾರೆ
  • ಬರ್ತ್ ನಂಬರ್ -08, ವ್ಯಾಪಾರದ ಮೇಲೆ ಉತ್ತಮವಾದ ಚತುರತೆ ಇರುತ್ತದೆ. ಯಾವಾಗಲೂ ಅದೇ ಚಿಂತೆಯಲ್ಲಿರುತ್ತಾರೆ. ಇವರು ಒಳ್ಳೆಯ ಪರಿಪಾಲನ ನೈಪುಣ್ಯತೆಯನ್ನೊಂದಿರುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ, ಮಿತಿ ಮೀರಿದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಅದು ಅವರನ್ನು ಪೂರ್ತಿಯಾಗಿ ಅಧಮ ಮಟ್ಟಕ್ಕಿಳಿಸುತ್ತದೆ.
  • ಬರ್ತ್ ನಂಬರ್ -09, ಇವರು ಸೃಜನಾತ್ಮಕವಾದ, ಊಹಾಲೋಕದಲ್ಲಿ ತೇಲುತ್ತಿರುತ್ತಾರೆ. ಇತರರಿಗೆ ಇವರು ಪ್ರೇರಣೆಯಾಗಿ ನಿಲ್ಲುತ್ತಾರೆ. ಆದರೆ ಸ್ವಂತ ವಿಷಯಗಳಲ್ಲಿ ಮಾತ್ರ ಅಷ್ಟೊಂದು ಗಮನ ಹರಿಸುವುದಿಲ್ಲ.

Click Here To Download Kannada AP2TG App From PlayStore!