ಕೊಹ್ಲಿ ಸಹ ಸಂಕ್ರಾಂತಿ ಹೀರೋ… ಮೂರು ವರ್ಷಗಳಿಂದ ಸೆಂಚುರಿಗಳನ್ನು ಒಂದೇ ದಿನಾಂಕ ಬಾರಿಸಿದ ಹ್ಯಾಟ್ರಿಕ್ ಕ್ರಿಕೆಟರ್!!

ದಾಖಲೆಗಳ ವೀರ ವಿರಾಟ್ ಕೊಹ್ಲಿ ಇನ್ನೊಂದು ಅಪರೂಪದ ದಾಖಲೆ ಸೃಷ್ಟಿಸಿದ್ದಾರೆ. ಸತತ ಮೂರು ವರ್ಷಗಳು ಒಂದೇ ದಿನಾಂಕದಂದು ಸೆಂಚುರಿ ಬಾರಿಸಿದ್ದಾನೆ. ಆ ರೀತಿ ಮೂರು ವರ್ಷಗಳು ಮೂರು ಸೆಂಚುರಿಗಳು ಒಂದೇ ದಿನಾಂಕದಂದು ಬಾರಿಸಿದ ಹ್ಯಾಟ್ರಿಕ್ ಕ್ರಿಕೆಟರ್ ಎನ್ನಿಸಿಕೊಂಡಿದ್ದಾರೆ ಕೊಹ್ಲಿ. ಅಡಿಲೈಡ್‍ನಲ್ಲಿ ಆಸ್ಟ್ರೇಲಿಯಾದೊಂದಿಗೆ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಈ ದಾಖಲೆ ಮಾಡಿದರು.

2017 ಜನವರಿ 15ನೇ ತಾರೀಖು ಭಾರತ, ಇಂಗ್ಲೆಂಡ್ ನಡುವೆ ಪುಣೆಯಲ್ಲಿ ಏಕ ದಿನ ಪಂದ್ಯ ನಡೆಯಿತು. ಈ ಮ್ಯಾಚ್‍ನಲ್ಲಿ ಕೊಹ್ಲಿ 105 ಚೆಂಡುಗಳಲ್ಲಿ 122 ರನ್ ಮಾಡಿ, ಟೀಂ ಇಂಡಿಯಾಗೆ ಗೆಲುವನ್ನು ತಂದುಕೊಟ್ಟ. 2018, ಜನವರಿ 13ನೇ ತಾರೀಖು ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ, ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಆರಂಭವಾಯಿತು. ಆ ಮ್ಯಾಚ್ ಮೂರನೇ ದಿನ ಎಂದರೆ ಜನವರಿ 15ನೇ ತಾರೀಖು ಕೊಹ್ಲಿ ಸೆಂಚುರಿ ಬಾರಿಸಿದ. 153 ರನ್ ಗಳಿಸಿದರು. ಆದರೆ ಆ ಪಂದ್ಯದಲ್ಲಿ ಭಾರತ ಸೋತಿತು. 2019 ಜನವರಿ 15ರಂದು ಆಡಿಲೆಡ್‌ನಲಿ ಆಸ್ಟ್ರೇಲಿಯಾದೊಂದಿಗೆ ನಡೆದ ಮ್ಯಾಚ್‌ನಲ್ಲಿ 104 ರನ್ ಮಾಡಿ ಭಾರತ್ ಬಿಗ್ ವಿಕ್ಟರಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೀಗೆ ಮೂರು ವರ್ಷಗಳಿಂದ ಜನವರಿ 15ರಂದು ಕಡ್ಡಾಯವಾಗಿ ಸೆಂಚುರಿ ಹೊಡೆಯುತ್ತಾ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾನೆ. ಈ ಮೂಲಕ ರನ್‍ಗಳ ಯಂತ್ರ ಎನ್ನಿಸಿಕೊಂಡಿದ್ದಾರೆ. ಈ ವರ್ಷ ಮೊದಲ ಸೆಂಚುರಿಯೊಂದಿಗೆ ಕೊಹ್ಲಿ ತನ್ನ ವೃತ್ತಿ ಬದುಕಿನಲ್ಲಿ 39ನೇ ಸೆಂಚುರಿ ಸಾಧಿಸಿದ್ದಾರೆ. ಈ ಅಪರೂಪದ ದಾಖಲೆ ಸೃಷ್ಟಿಸಿದ ಕೊಹ್ಲಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಸಾಮಾನ್ಯವಾಗಿ ಸಂಕ್ರಾಂತಿಗೆ ಸಿನಿಮಾ ಹೀರೋಗಳು ಹಿಟ್ ಹೊಡೀತಾರೆ. ಬಾಕ್ಸ್ ಆಫೀಸ್‌ ದಾಖಲೆಗಳು ಉಡೀಸ್ ಆಗುತ್ತವೆ. ಈಗ ವಿರಾಟ್ ಸಹ ಸಂಕ್ರಾಂತಿ ಸೆಂಚುರಿಗಳಿಂದ ಧೂಳೆಬ್ಬಿಸುತ್ತಿದ್ದಾರೆ. ಈ ವರಸೆ ಹೀಗೇ ಮುಂದುವರೆಯಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇದಿಷ್ಟೇ ಅಲ್ಲದೆ ಕ್ರಿಕೆಟ್​ ಇತಿಹಾಸದಲ್ಲೇ 39 ಏಕದಿನ ಶತಕ ಬಾರಿಸಿದ ಎರಡು ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಸಚಿನ್​ ತೆಂಡೂಲ್ಕರ್ ಬಳಿಕ 39 ಶತಕ ಸಿಡಿಸಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳಿಸಿರುವ ಸಚಿನ್​ (49)ಗಿಂತ ಕೊಹ್ಲಿ 10 ಶತಕಗಳ ಹಿಂದಿದ್ದು, ಈ ಹಿಂದೆ ಸಚಿನ್ ನುಡಿದಂತೆ ಕ್ರಿಕೆಟ್​ ದೇವರ ದಾಖಲೆಗಳನ್ನು ಕೊಹ್ಲಿ ಮುರಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.


Click Here To Download Kannada AP2TG App From PlayStore!

Share this post

scroll to top