ತಾರಸಿ ತೋಟದಲ್ಲಿ 50 ಕೆಜಿ ಭತ್ತ ಬೆಳೆದು ದಾಖಲೆ ಸೃಷ್ಟಿಸಿದ ಕ್ರಿಷ್ಣಪ್ಪ..!!!

ನಗರಗಳು ಬೆಳೆದಂತೆ ಕೃಷಿ ಜಾಗವೂ ಕಡಿಮೆಯಾಗುತ್ತಿದೆ. ಏನನ್ನಾದರೂ ಮಾಡಬೇಕೆಂಬ ಛಲದಿಂದ ಕೆಲವರು ತಮ್ಮ ಮನೆಯ ತಾರಸಿ(ಟೆರೇಸ್) ಯಲ್ಲಿಯೇ ಹಣ್ಣು ತರಕಾರಿಗಳನ್ನು ಬೆಳೆದು ಭೇಷ್ ಎನಿಸಿಕೊಂಡಿದ್ದರೆ.

ಅಂತಹವರಿಗೆ ಸುಳ್ಯದ ಪಡ್ಡಂಬೈಲು ಕ್ರಿಷ್ಣಪ್ಪ ಮಾದರಿಯಾಗಿ ನಿಲ್ಲುತ್ತಾರೆ. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಕ್ರಿಷ್ಣಪ್ಪ, ಮಂಗಳೂರಿನ ಮರೋಳಿಯಲಿರುವ ತನ್ನ ಮನೆಯ 1200 ವಿಸ್ತೀರ್ಣದ ತಾರಸಿಯಲ್ಲಿ ಪ್ರತೀ ವರ್ಷ 30 ರಿಂದ 50 ಕೇಜಿ ಭತ್ತ ಬೆಳೆಯುತ್ತಿದ್ದಾರೆ.
ಇಷ್ಟಕ್ಕೂ ಅವರು ಈ ರೀತಿ ಭತ್ತವನ್ನು ಹೇಗೆ ಬೆಳೆಯುತ್ತಾರೆಂಬ ಅನುಮಾನವೇ? ಬನ್ನಿ ಅದನ್ನೀಗ ನೋಡೋಣ.

ಈ ರೀತಿ ಭತ್ತವನ್ನು ಬೆಳೆಯಲು ಅವರು 200 ಚೀಲಗಳನ್ನು ಉಪಯೋಗಿಸುತ್ತಿದ್ದಾರೆ. ಮಣ್ಣುರಹಿತವಾಗಿರುವ ಈ ಕೃಷಿಯಲ್ಲಿ, ಕೇವಲ ಕಸ,ಕಡ್ಡಿ, ನಾರು, ಕೊಳೆತ ಮರದ ಹುಡಿ, ಮನೆಯ ಹಸಿರು ತ್ಯಾಜ್ಯಗಳನ್ನು ಮಾತ್ರ ಈ ಚೀಲಗಳಲ್ಲಿ ತುಂಬಿ ಕೃಷಿಮಾಡುತ್ತಾರೆ.

ಇವರು ಭತ್ತವನ್ನಲ್ಲದೇ ಮನೆಗೆ ಬೇಕಾಗುವ ಸೀಬೆ,ದಾಳಿಂಬೆ ಮೊದಲಾದಲಾದ ಹಣ್ಣುಗಳನ್ನು ಹಾಗು ಹಲವು ರೀತಿಯ ತರಕಾರಿಗಳನ್ನು ಹೀಗೆ ತಮ್ಮ ಮನೆಯ ಟೆರೇಸ್ ನಲ್ಲೇ ಬೆಳೆಯುತ್ತಾರೆ.ಈ ಬೆಳೆಗಳಿಗಾಗಿ ಇವರು ಅತೀಕಡಿಮೆ ನೀರನ್ನು ಬಳಸುತ್ತಾರೆ.

120 ದಿನಗಳ ಅವಧಿಯಲ್ಲಿ ಕಟಾವಿಗೆ ಬರುವ ಭತ್ತದ ತಳಿಯನ್ನು ಇವರು ಆರಿಸಿಕೊಂಡಿದ್ದು , ಏಪ್ರಿಲ್ -ಮೇ ತಿಂಗಳ ನಡುವೆ ಬೆಳೆಯನ್ನು ಪ್ರಾರಂಭಿಸುತ್ತಾರೆ. ಹೀಗೆ ವರ್ಷದಲ್ಲಿ ಕೇವಲ ಒಂದು ಭತ್ತದ ಬೆಳೆಯನ್ನು ಬೆಳೆದು ಉಳಿದ ದಿನಗಳಲ್ಲಿ, ಅದೇ ಚೀಲಗಳನ್ನು ಉಪಯೋಗಿಸಿಕೊಂಡು ತರಕಾರಿಗಳನ್ನು ಬೆಳೆಯುತ್ತಾರೆ. ಬೆಳೆ ಬಂದ ನಂತರ ತಮ್ಮ ಗೆಳೆಯರಿಗೆ, ನೆಂಟರಿಗೆ ಹಂಚಿ ಸಂತೋಷಪಡುತ್ತಾರೆ. ಇವರು ಕೈಗೊಳ್ಳುವ ಕೃಷಿ ಉತ್ಪನ್ನಗಳನ್ನು ಮಾರಾಟಮಾಡುವುದಿಲ್ಲ. ಕಳೆದ ವರ್ಷ10 ಕೆಜಿ ಕ್ಯಾರೆಟ್ ಬೆಳೆಸಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿನೀಡಿ ಗೌರವಿಸುವೆ.

 


Click Here To Download Kannada AP2TG App From PlayStore!