ಕುಡಿತಕ್ಕೆ ದಾಸರಾದವರ ಆರೋಗ್ಯವನ್ನು ಕಾಪಾಡುವ, ಅಂತಹ ಅಭ್ಯಾಸವನ್ನು ದೂರ ಮಾಡುವ ಅದ್ಭುತವಾದ ಒಂದು ಐಡಿಯಾ….!

ಮಾನವ ಶರೀರದಲ್ಲಿರುವ ವಿಷ ಪದಾರ್ಥಗಳನ್ನು (ಟಾಕ್ಸಿನ್’ಗಳು) ಹೊರಗೆ ಕಳಿಸುವುದರಲ್ಲಿ, ಮಾನವ ಶರೀರವನ್ನು ಯಾವಾಗಲೂ ಆರೋಗ್ಯವಾಗಿ ಇರಿಸುವಲ್ಲಿ, ಮೆಂತ್ಯೆಕಾಳು ತುಂಬಾ ಉಪಯೋಗವಾಗುತ್ತದೆ. B P, ಷುಗರ್, ಅಧಿಕತೂಕನಂತಹ ಅನಾರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲದೆ, ಕುಡಿತಕ್ಕೆ ಒಳಗಾದವರ ಆರೋಗ್ಯವನ್ನು ಕಾಡುವುದರೊಂದಿಗೆ, ಆ ಅಭ್ಯಾಸವನ್ನು ದೂರ ಮಾಡುವುದರಲ್ಲಿಯೂ ಮೆಂತ್ಯೆಕಾಳು ಉಪಯುಕ್ತವಾಗಿವೆ. ಮಧ್ಯಪಾನವನ್ನು ಅಧಿಕವಾಗಿ ಸೇವಿಸುವುದರಿಂದ ವ್ಯಕ್ತಿಯ ಪಿತ್ತಕೋಶವು ಪೂರ್ತಿಯಾಗಿ ಕೆಡುತ್ತದೆ. ಆಲ್ಕೊಹಾಲ್ ಕಾರಣದಿಂದ ರಕ್ತನಾಳಗಳು ಅಸ್ಥವ್ಯಸ್ಥವಾಗುತ್ತವೆ. ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಕರುಳಿನಲ್ಲಿ ಹುರಿ ಬರುತ್ತದೆ. ಹಾಗೂ ಕಿಡ್ನಿ(ಮೂತ್ರ ಪಿಂಡ) ಸಮಸ್ಯೆಯೂ ತಲೆದೊರುತ್ತದೆ.

ಕುಡಿತಕ್ಕೆ ಒಳಗಾದವರನ್ನು ಈ ಮೆಂತ್ಯೆಕಾಳುಗಳಿಂದ ಹೇಗೆ ರಕ್ಷಿಸಿಕೊಳ್ಳಬಹುದು:

ಕುಡಿತದ ಅಭ್ಯಾಸಕ್ಕೊಳಗಾದವರಿಗೆ ಒಂದು ಚಮಚದಷ್ಟು ಮೆಂತ್ಯೆಕಾಳುಗಳನ್ನು ತೆಗೆದು ಕೊಂಡು ಸುಮಾರು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಅವುಗಳನ್ನು ಅದೇ ನೀರಿನಿಂದ ಬೇಯಿಸಿ, ಶೋದಿಸಿ, ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುವಂತೆ ಹೇಳಬೇಕು. ಇದರಿಂದ ಕೆಟ್ಟಂತಹ ಪಿತ್ತ ಕೋಶವು ರಕ್ಷಣೆಯಾಗುತ್ತದೆ. ಹಾಗೆಯೇ ಇದನ್ನು ಪ್ರತಿನಿತ್ಯ ಬಿಡದಂತೆ ಸೇವಿಸಿದರೆ, ಮೆಂತ್ಯೆಕಾಳಿನಲ್ಲಿರುವ ಕಹಿ ಹಾಗೂ ವಗುರು ಗುಣಗಳಿಂದ, ಮಧ್ಯಪಾನವೆಂದರೆ ಒಂದು ರೀತಿಯ ಅಸಹ್ಯವೆಂದೆನಿಸುತ್ತದೆ. ಆದ್ದರಿಂದ ಎಂತಹ ಮಧ್ಯಪಾನ ಪ್ರಿಯರಾದರೂ ಈ ಮಿಶ್ರಣವನ್ನು ತಿಂದನಂತರ ಅದರ ಸುದ್ದಿಗೆ ಹೋಗುವುದಿಲ್ಲ. ಈ ಮಿಶ್ರಣವನ್ನು ನೀಡುವುದರ ಜೊತೆಗೆ, ಆ ವ್ಯಕ್ತಿಗೆ ತನ್ನ ಅವಶ್ಯಕತೆ ಆ ಕುಟುಂಬಕ್ಕೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ವಿವರಿಸಿ ಹೇಳಬೇಕು. ಆ ಮಾತುಗಳು ಆತನ ಮಾನಸಿಕ ಸ್ಥಿತಿಯನ್ನು ಬದಲಿಸಿ ಮತ್ತೆ ಅದರ ಸುದ್ದಿಗೆ ಹೋಗದಂತೆ ಮಾಡುತ್ತವೆ. ಮಧ್ಯಪಾನ ಮಾಡಬೇಕೆಂದು ಪ್ರೇರಣೆಯಾದಾಗ ಮೆಂತ್ಯೆಸೊಪ್ಪಿನಿಂದ ಮಾಡಿದ ಡಿಕಾಷನ್ ಅನ್ನು ಕುಡಿಸಬೇಕು. ಹೀಗೆ ಮೆಂತ್ಯೆಕಾಳು+ಮೆಂತ್ಯೆಸೊಪ್ಪು ಸೇರಿ ಕುಡಿತಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯವನ್ನು ಉತ್ತಮಗೊಳಿಸಿ, ಅವರನ್ನು ಕುಡಿತದ ಅಭ್ಯಾಸದಿಂದ ದೂರ ಮಾಡುತ್ತವೆ.


Click Here To Download Kannada AP2TG App From PlayStore!

Share this post

scroll to top