ನಮ್ಮವರಿಗೆ ಲೇಡಿ ಮ್ಯಾನೇಜರ್ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ.! ಈ ದುರಂತದಿಂದ ಪಾರಾಗುವುದು ಹೇಗೆ?

ನನಗೆ ಮದುವೆಯಾಗಿ 6 ತಿಂಗಳು.. ಆರಂಭದಲ್ಲಿ ಅನ್ಯೋನ್ಯವಾಗಿ ಇದ್ದೆವು.. ಆದರೆ ಬರುಬರುತ್ತಾ ಅವರು ನನ್ನನ್ನು ದೂರ ಇಡಲು ಶುರು ಮಾಡಿದರು. ಹೊರಗೆ ಹೋಗಿ ಫೋನಲ್ಲಿ ಮಾತನಾಡುವುದು, ಫೋನ್‌ಗೆ ಕೀ ಲಾಕ್ಸ್ ಹಾಕಿಕೊಳ್ಳುವುದು…. ಏನೋ ಮುಚ್ಚಿಡುತ್ತಿದ್ದಾರೆಂದು ಕ್ಲಿಯರ್ ಆಗಿ ಅರ್ಥವಾಗುತ್ತಿತ್ತು! ಒಂದು ಸಲ ನಮ್ಮ ಮನೆಯಿಂದ ಕರೆ ಬಂದಕಾರಣ ಫೋನ್ ನನಗೆ ಕೊಟ್ಟು ಸ್ನಾನಕ್ಕೆ ಹೋದರು..ಫೋನ್ ಕಟ್ ಮಾಡಿದ ಮೇಲೆ ನೋಡಿದರೆ.. ಕೆಲವು ವಾಟ್ಸಾಫ್ ಮೆಸೇಜ್‌ಗಳು ಇದ್ದರು.. ಓಪನ್ ಮಾಡಿ ನೋಡಿದೆ.. ಕಣ್ಣು ಸುತ್ತುವಂತಾಯಿತು. ಸುನೀತ್ ಹೆಸರಿನಲ್ಲಿ ಮೆಸೇಜ್.. ಈ ದಿನ ರಾತ್ರಿ 8 ಗಂಟೆಯ ತನಕ ಪ್ಲಾನ್ ಮಾಡಿದ್ದೇನೆ! ಮಸ್ಟ್ ಬರಬೇಕು.!! ಅಪಾರ್ಟ್‍ಮೆಂಟ್ ಕೀ ನನ್ನ ಬಳಿಯೇ ಇವೆ.! ಎಂದು ಅರ್ಧಂಬರ್ಧ ಮೆಸೇಜ್‌ಗಳು ಇವೆ.. ಅಂದರೆ ಇದಕ್ಕೂ ಮೊದಲು ಸಾಕಷ್ಟು ಮೆಸೇಜ್‌ಗಳು ಇರುತ್ತವೆ.. ಇವರು ಡಿಲೀಟ್ ಮಾಡಿರುತ್ತಾರೆ ಎಂಬ ಸಂಗತಿ ಅರ್ಥವಾಯಿತು.!

ಅಷ್ಟರಲ್ಲಿ ಅವರು ಬಾತ್‍ರೂಮ್‌ನಿಂದ ಬಂದರು. ಫೋನ್ ನೋಡಿದರು, ಟಿಫಲ್ ಮಾಡಿದರು.. ಈ ದಿನ ಆಫೀಸಲ್ಲಿ ಸ್ವಲ್ಪ ಹೆಚ್ಚಿಗೆ ಕೆಲಸ ಇದೆ..! ಬರುವುದು ರಾತ್ರಿ 10 ಆಗಬಹುದು, ನೀನು ತಿಂದು ಮಲಗು ಎಂದರು.! ಇನ್ನು ಕೋಪ ತಡೆಯಲಾರದೆ ನಾನು… ಅವರನ್ನು ತರಾಟೆಗೆ ತೆಗೆದುಕೊಂಡೆ.? ಈ ರೀತಿಯ ಯಾಕೆ ಮಾಡುತ್ತಿದ್ದೀರಾ? ಎಂದು ಕಾಲರ್ ಸಹಿತ ಹಿಡಿದು ಕೇಳಿದೆ.!

ಸ್ವಲ್ಪ ಹೊತ್ತು ಅತ್ತ ಅವರು.. ಬಳಿಕ ಸ್ಟೋರಿ ಹೇಳುವುದನ್ನು ಆರಂಭಿಸಿದರು. ಈಗವರು ಕೆಲಸ ಮಾಡುತ್ತಿರುವ ಆಫೀಸ್ ಮ್ಯಾನೇಜರ್‌ಗೂ ಇವರಿಗೂ ಲವ್ ಇತ್ತಂತೆ.! ಮದುವೆವರೆಗೂ ಹೋಗಿತ್ತು, ಆದರೆ ಕೆಲವು ಇಗೋ ಪ್ರಾಬ್ಲಂಸ್‍ನಿಂದ ಅದು ಕ್ಯಾನ್ಸಲ್ ಆದಕಾರಣ ನನ್ನ ವರಿಸಿದ್ದರು..! ಆದರೆ ಮದುವೆಯಾದ ಬಳಿಕ ಇವರು ಮರೆತುಹೋಗಿ, ಹಾಯಾಗಿ ಇದ್ದರೆ… ಆಕೆ ಮಾತ್ರ ಜಲಸಿ ಫೀಲಾಗುತ್ತಿದ್ದಾರಂತೆ.! ಆಕೆಗಿಂತಲೂ ನಾನು ಸುಂದರವಾಗಿರುವುದು, ಬ್ರೇಕ್ ಅಪ್ ಬಳಿಕ ಮದುವೆಯಾಗಿ ನಮ್ಮವರು ಸಂತೋಷವಾಗಿರುವುದು ಆಕೆಗೆ ಇಷ್ಟವಿಲ್ಲವಂತೆ.! ಹಾಗಾಗಿ ನೀನು ಈ ಹಿಂದೆ ನನ್ನೊಂದಿಗೆ ಇದ್ದಂತೆ ಇರಬೇಕು, ಇಲ್ಲದಿದ್ದರೆ ನಾವಿಬ್ಬರೂ ಕ್ಲೋಸ್ ಆಗಿ ಇರುವ ಫೋಟೋಗಳು, ವಿಡಿಯೋಗಳನ್ನು.. ನಿಮ್ಮಾಕೆಯ ಜತೆ ಬಾಸ್‌ಗೂ ತೋರಿಸುತ್ತೇನೆ.. ನಿಮ್ಮ ಅತ್ತೆಮಾವಂದಿರಿಗೂ ತೋರಿಸುತ್ತೇನೆ, ನನ್ನ ಫೇಸ್‌ ಬ್ಲರ್ ಮಾಡಿ ಯೂಟ್ಯೂಬ್‌ನಲ್ಲಿ ಹಾಕುತ್ತೇನೆ ಎಂದು ಎಚ್ಚರಿಸಿದಳಂತೆ.!

ಈ ವಿಷಯ ನನಗೆ ಗೊತ್ತಾದರೆ ಎಲ್ಲಿ ದೂರವಾಗುತ್ತೇನೋ ಎಂದು ಇಷ್ಟು ದಿನ ಆಕೆ ಕೊಡುತ್ತಿರುವ ನರಕಯಾತನೆಯನ್ನು ಭರಿಸುತ್ತಿದ್ದಾನಂತೆ.! ಆ ಆಫೀಸ್‍ನಲ್ಲಿ ಕೆಲಸ ರಿಸೈನ್ ಮಾಡಿ ಬೇರೆ ಕಡೆಗೆ ಹೋಗೋಣ ಎಂದರೆ… ಅಗ್ರಿಮೆಂಟ್ ಪ್ರಕಾರ ಇನ್ನೂ ಆರು ತಿಂಗಳು ಆಫೀಸ್‌ನಲ್ಲೇ ವರ್ಕ್ ಮಾಡಬೇಕಂತೆ..! ಇದೆಲ್ಲಾ ನಾವಿಬ್ಬರೂ ಏಕಾಂತವಾಗಿ ಇರಬಾರದು ಎಂಬ ಉದ್ದೇಶದಿಂದ ಮಾಡುತ್ತಿದ್ದಾಳಂತೆ.! ಹಾಗಾಗಿ ಅವರನ್ನು ಆ ಕೆಲಸ ಈ ಕೆಲಸ ಎಂದು ಆಕೆಯ ಸುತ್ತ ಸುತ್ತಾಡಿಸುತ್ತಿದ್ದಾಳೆ.! ಈ ಒಂದು ವಿಚಾರದಲ್ಲಿ ಬಿಟ್ಟರೆ ನಮ್ಮವರು ಪ್ರತಿ ವಿಷಯದಲ್ಲೂ ಬೆಸ್ಟ್.. ಆದರೆ ಆ ಮ್ಯಾನೇಜರ್ ರಾಕ್ಷಸಿಯಿಂದ ಹೊರಬೀಳುವುದು ಹೇಗೆ ಎಂದು ಅರ್ಥವಾಗುತ್ತಿಲ್ಲ.! ಇದರಿಂದ ಹೊರಬೀಳುವ ಸಲಹೆ ನೀಡಿ ಫ್ರೆಂಡ್ಸ್..!


Click Here To Download Kannada AP2TG App From PlayStore!