ಹೇರ್ ಪಿನ್ ಬಳಸಿ ಬೀಗ ತೆಗೆಯುವುದು ಹೇಗೆಂದು ಗೊತ್ತಾ..!

ಸಿನಿಮಾಗಳಲ್ಲಿ ನಟ ನಟಿಯರು ಹೇರ್ ಪಿನ್ ಉಪಯೋಗಿಸಿ ಡೋರ್ ಲಾಕ್ ತೆರೆಯುವುದನ್ನು ನಾವೆಲ್ಲರೂ ನೊಡಿರುತ್ತೇವೆ. ಅಚ್ಚರಿಯ ವಿಷಯವೆಂದರೆ…ಹೇರ್ ಪಿನ್ ಬೀಗದ ಒಳಗಿಟ್ಟು ತಿರುಗಿಸಿದರೆ ಸಾಕು ಬೀಗ ತೆರೆದುಕೊಳ್ಳುತ್ತದೆ. ಆದರೆ, ಇದು ಸಿನಿಮಾದಲ್ಲಿ ಮಾತ್ರ ಸಾಧ್ಯ. ನಮ್ಮಿಂದ ಹಾಗೆ ಮಾಡಲಾಗುವುದಿಲ್ಲ ಎಂದು ನಾವಂದುಕೊಳ್ಳುತ್ತೆವೆ. ಆದರೆ, ಹೇರ್ ಪಿನ್ ಉಪಯೋಗಿಸಿ ಯಾರು ಬೇಕಾದರೂ ಬೀಗ ತೆಗೆಯಬಹುದು. ಇದು ಬಹಳ ಸುಲಭ. ಬನ್ನಿ ಆತಂತ್ರದ ಬಗ್ಗೆ ತಿಳಿದುಕೊಳ್ಳೋಣ.

door-lock
ಮೊದಲಿಗೆ ಎರಡು ಹೇರ್ ಪಿನ್ ಗಳನ್ನು ತೆಗೆದುಕೊಳ್ಳಿ. ಪಿನ್ನನ್ನು ಬಗ್ಗಿಸಿರುವ ಗುಂಡುಗಿರುವ ಭಾಗವನ್ನು ಸ್ವಲ್ಪ ಬಗ್ಗಿಸಿ. ಈಗ ಇದು ಎಲ್ ಆಕಾರದಲ್ಲಿರುತ್ತದೆ. ನಂತರ ಇನ್ನೊಂದು ಪಿನ್ನನ್ನು ಸಂಪೂರ್ಣ ಬಿಡಿಸಿ. ಎಲ್ ಆಕಾರವಿರುವ ಭಾಗವನ್ನು ನೀವು ಓಪನ್ ಮಾಡಬೇಕಾದ ಲಾಕ್ ಒಳಗೆ ಸೇರಿಸಿ. ನಂತರ ಬಿಡಿಸಿಟ್ಟಿರುವ ಪಿನ್ನಿನ ಕೊನೆಯನ್ನು ಬೀಗದೊಳಗೆ ಸೇರಿಸಿ, ಚಿತ್ರದಲ್ಲಿ ತೋರಿಸಿದ ಹಾಗೆ ಲಿವರ್ ಗಳನ್ನು ಮೇಲೆತ್ತುತ್ತಾ ಬನ್ನಿ. ಹೀಗೆ ಮಾಡುವುದರಿಂದ ಒಳಗೆ ಹಿಡಿದಿಟ್ಟುಕೊಂಡಿರುವ ಲಿವರ್ ಗಳು ಮೇಲಕ್ಕೆ ಹೋಗುತ್ತವೆ. ಈ ರೀತಿ ಲಾಕ್ ಓಪನ್ ಆಗುತ್ತದೆ.

hair-pins
ಮೇಲೆ ತಿಳಿಸಿರುವ ವಿಧಾನವನ್ನು ಕಳ್ಳರೂ ಸಹ ಉಪಯೋಗಿಸುತ್ತಾರೆ. ( ದಯವಿಟ್ಟು ಈ ವಿಧಾನದಿಂದ ನಿಮ್ಮ ಮನೆಯ ಬೀಗಗಳನ್ನು ಮಾತ್ರ ತೆರೆಯಿರಿ…ಪಕ್ಕದ ಮನೆಯ ಬೀಗ ತೆರೆದಿರೆಂದರೆ… ಏನಾಗುತ್ತೆಂದು ನಿಮಗೆ ಗೊತ್ತೇ ಇದೆಯಲ್ಲಾ ..?)

Bobby-Pin-Lock-Picking

 

ಮೇಲೆ ತಿಳಿಸಿರುವ ತಂತ್ರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ವೀಡಿಯೋ ನೋಡಿ.

 

 


Click Here To Download Kannada AP2TG App From PlayStore!