ಸಿನಿಮಾ ಹಾಲ್‌ನಲ್ಲಿ ತಂದೆಗೆ ಸಿಕ್ಕಿಬಿದ್ದ ಲವರ್ಸ್.. ಮಗಳನ್ನು ತಂದೆ ಏನು ಮಾಡಿದ ಅಂತ ನೋಡಿದರೆ…

ಓದಿಕೊಳ್ಳಲು ಕಳುಹಿಸಿದರೆ ಪ್ರಿಯಕರನ ಜತೆ ಸಿನಿಮಾಗೆ ಬಂದಳು ಓರ್ವ ಯುವತಿ. ಅಚಾನಕ್ ಆಗಿ ತಂದೆಗೆ ಸಿಕ್ಕಿಬಿದ್ದಳು. ಇದರಿಂದ ತಂದೆಗೆ ಮೈಯಲ್ಲಾ ಉರಿದು ಹೋಯಿತು. ಈ ಘಟನೆ ಆಂಧ್ರಪದೇಶದ ವಾರಂಗಲ್‌ನಲ್ಲಿ ನಡೆದಿದೆ. ಫೆಸ್ಟಿವಲ್ ಮೂಡ್… ಮಿಗಿಲಾಗಿ ಸಂಡೆ.. ಆದಕಾರಣ ಪ್ರೇಮಿಗಳಿಬ್ಬರೂ ಜಾಲಿಯಾಗಿ ಸಿನಿಮಾ ನೋಡಲು ಬಂದಿದ್ದರು. ಟಿಕೆಟ್ ತೆಗೆದುಕೊಂಡು ಸಿನಿಮಾ ಹಾಲ್‍ ಒಳಕ್ಕೆ ಹೋದರು. ಆದರೆ ಅಷ್ಟರಲ್ಲಿ ಸೀನ್ ಸ್ವಲ್ಪ ರಿವರ್ಸ್ ಆಯಿತು.

ಬ್ಯಾಡ್ ಲಕ್ ಹಿಂದೆಯೇ ಇತ್ತು. ಅದೇ ಸಿನಿಮಾಗೆ ಯುವತಿಯ ತಂದೆ ಅದೇ ಸಿನಿಮಾ ಹಾಲ್‌ನಲ್ಲಿ ಹಿಂಬದಿಯಲ್ಲೇ ಕುಳಿತಿದ್ದ. ಆದರೆ ಸ್ವಲ್ಪ ಹೊತ್ತಿನ ಬಳಿಕ ಮುಂದೆ ಕುಳಿತಿರುವ ಯುವತಿ ತನ್ನ ಮಗಳು ಎಂಬುದನ್ನು ಗ್ರಹಿಸಿದ್ದಾರೆ ತಂದೆ.

ಆದರೆ ತನ್ನ ಮಗಳು ಪ್ರಿಯಕರನ ಜತೆಗೆ ಸಿನಿಮಾಗೆ ಬಂದಿದ್ದಾಳೆ ಎಂಬ ಕೋಪವನ್ನು ಆ ತಂದೆ ಕೈಲಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೂಡಲೆ ಮಗಳನ್ನು ಹೊರಗೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಓದಿಕೊಳ್ಳಲು ಕಳುಹಿಸಿದರೆ ಲವರ್ ಜತೆಗೆ ಸಿನಿಮಾಗೆ ಬರುತ್ತೀಯಾ ಎಂದು ಬೆಂಡೆತ್ತಿ ಬ್ರೇಕ್ ಹಾಕಿದ. ಈ ಘಟನೆಯಲ್ಲಿ ತಡೆಯಲು ಬಂದ ಪ್ರಿಯಕರನಿಗೂ ಸರಿಯಾಗಿ ಒದೆ ಬಿದ್ದಿವೆ.

ಈಗ ಕಾಲೇಜು ಯುವಕರು ಎಷ್ಟೆಲ್ಲಾ ಬದಲಾಗಿದ್ದರೆ ಅಂತ ನೋಡಿ. ತಮ್ಮ ಮಕ್ಕಳು ಓದಿಕೊಳ್ಳುತ್ತಿದ್ದಾರೆ ಎಂದು ಅದೆಷ್ಟೋ ಪೋಷಕರು ಭ್ರಮಿಸಿರುತ್ತಾರೆ. ಆದರೆ ಕೊನೆಗೆ ಮದುವೆ, ಪ್ರೀತಿ ಪ್ರೇಮ ಎಂದು ತಂದೆತಾಯಿಯನ್ನು ಬೀದಿಗೆ ತರುತ್ತಾರೆ. ಆಗ ಅಂತಹ ತಂದೆತಾಯಿಗೆ ಆಗುವ ನೋವು ಅಷ್ಟಿಷ್ಟಲ್ಲ. ಇಂತಹ ಮಕ್ಕಳನ್ನು ಯಾಕಾದರೂ ಹೆತ್ತೆವೋ ಎನ್ನಿಸಿಬಿಡುತ್ತದೆ.

ಕಾಲೇಜು ಯುವಕ/ಯುವತಿಯರು ಈ ರೀತಿ ಲವ್ ಡವ್ ಎಂದು ಓಡಾಡದೆ ಚೆನ್ನಾಗಿ ಓದಿಕೊಂಡು ಒಳ್ಳೆಯ ಉದ್ಯೋಗ ಸಂಪಾದಿಸಿಕೊಂಡು ತಮ್ಮ ಕಾಲ ಮೇಲೆ ತಾವು ನಿಂತರೆ ಆಗ ಪ್ರೀತಿಸಿದ ಹುಡುಗಿಯನ್ನೋ ಅಥವಾ ಹಿರಿಯರು ನೋಡಿದ ಸಂಬಂಧವನ್ನೋ ವರಿಸಿದರೆ ಅದಕ್ಕೊಂದು ಅರ್ಥ ಇರುತ್ತದೆ. ಇಲ್ಲದಿದ್ದರೆ ಜೀವನ ಹಳಿ ತಪ್ಪಿದ ರೈಲಿನಂತಾಗುತ್ತದೆ. ತಂದೆ ತಾಯಿ ಸಹ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಒಂದು ಕಣ್ಣಿಟ್ಟಿದ್ದರೆ ಉತ್ತಮ.


Click Here To Download Kannada AP2TG App From PlayStore!

Share this post

scroll to top