ಕನ್ನಡಿಗರ ಪರವಾಗಿ ನಿಂತ ಮಹೇಂದ್ರ ಸಿಂಗ್ ಧೋನಿ..!

ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಕೂಲ್ ಎಂದು ಹೆಸರು ಮಾಡಿರುವ ಭಾರತೀಯ ಕಂಡ ಶ್ರೇಷ್ಠ ನಾಯಕ. ಭಾರತ ಕ್ರಿಕೆಟ್ ತಂಡಕ್ಕೆ ಎರಡು ಬಾರಿ ವಿಶ್ವಕಪ್ಗಳನ್ನು ತಂದು ಕೊಟ್ಟಿರುವ ಯಶಸ್ವಿ ನಾಯಕ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಷ್ಟೇ ಅಲ್ಲದೆ ಐಪಿಎಲ್ ನಲ್ಲೂ ಸಹ ಧೋನಿ ಯಶಸ್ವಿ ನಾಯಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇನ್ನು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಧೋನಿ ಆಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಧೋನಿ ಚೆನ್ನೈ ಪರ ಆಟವಾಡುತ್ತಿರುವ ಅನೇಕ ಕನ್ನಡಿಗರು ಅವರನ್ನು ವಿರೋಧಿಸಲು ಶುರು ಮಾಡಿದ್ದಾರೆ. ಆದರೆ ನಿಜಕ್ಕೂ ನಿಜ ಸಂಗತಿ ಅರಿತರೆ ಧೋನಿ ಅವರನ್ನು ಎಲ್ಲ ಕನ್ನಡಿಗರು ಗೌರವದಿಂದ ಕಾಣುವುದಂತೂ ನಿಜ.

ಮೊನ್ನೆಯಷ್ಟೇ ರಜನಿಕಾಂತ್ ಅವರ ಹೇಳಿಕೆಯಿಂದ ತಮಿಳುನಾಡಿನಾದ್ಯಂತ ಕಾವೇರಿ ಗಲಾಟೆ ಆಗಿದ್ದ ವಿಚಾರ ನಿಮಗೆಲ್ಲರಿಗೂ ತಿಳಿದಿರಬೇಕು. ತಮಿಳುನಾಡಿನಾದ್ಯಂತ ಕಾವೇರಿ ಗಲಾಟೆ ಎಷ್ಟರ ಮಟ್ಟಿಗೆ ತಿರುವು ಪಡೆದುಕೊಂಡು ತಿಂದರೆ ಚೆನ್ನೈಯಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳೆಲ್ಲವೂ ಪುಣೆಗೆ ಶಿಫ್ಟ್ ಆಗುವ ಮಟ್ಟಕ್ಕೆ ನಡೆದಿತ್ತು.

ಅಷ್ಟಕ್ಕೂ ಈ ಪರಿಯ ಗಲಾಟೆ ನಡೆಯಲು ಕಾರಣ ರಜನಿಕಾಂತ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡದ ಕಾರಣ ಆಟಗಾರರೆಲ್ಲರೂ ಕಪ್ಪು ಪಟ್ಟಿ ಧರಿಸಿ ಕಾವೇರಿ ನೀರು ಬಿಡುದಿರುವುದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಹೇಳಿದ್ದರು.

ಆದರೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ರಜನಿಕಾಂತ್ ಅವರ ಈ ಹೇಳಿಕೆಗೆ ಮನ್ನಣೆ ನೀಡದೆ ತಿರಸ್ಕರಿಸಿದರು. ‘ನಾವಿಲ್ಲಿ ಬಂದಿರೋದು ಕ್ರಿಕೆಟ್ ಆಡುವುದಕ್ಕೆ ಒಬ್ಬರಿಗೆ ಸಪೋರ್ಟ್ ಮಾಡಿ ಇನ್ನೊಬ್ಬರ ವಿರುದ್ಧ ಹೋರಾಡುವುದಕ್ಕಲ್ಲ. ಅವರು ಕೂಡ ಜನರೇ ಅವರ ಕಷ್ಟಗಳನ್ನು ಅರಿತುಕೊಳ್ಳದೆ ನಾವು ಅವರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಆಡುವುದು ಎಷ್ಟು ಸರಿ’ ಎಂದು ಹೇಳಿದ್ದರು.

ಈ ವಿಷಯದ ಕುರಿತಾಗಿ ತಮಿಳುನಾಡಿನ ಜನತೆ ರೊಚ್ಚಿಗೆದ್ದು ಚೆನ್ನೈನಲ್ಲಿ ನಡೆಯುತ್ತಿದ್ದ ಒಂದು ಪಂದ್ಯದ ವೇಳೆ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದರು. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಿಜಕ್ಕೂ ಧೋನಿ ಅವರು ತೆಗೆದುಕೊಂಡ ನಿರ್ಧಾರದ ಮೇಲೆ ಪ್ರತಿಯೊಬ್ಬ ಕನ್ನಡಿಗನಿಗೂ ಗೌರವ ಹುಟ್ಟುತ್ತದೆ.


Click Here To Download Kannada AP2TG App From PlayStore!