ಬಾಳ ಸಂಗಾತಿಯನ್ನು ಆರಿಸಿಕೊಳ್ಳುವುದಕ್ಕೆ ಮೊದಲು ಗಮನಿಸಬೇಕಾದ 4 ವಿಷಯಗಳು.!

ವಿವಾಹವೆಂದರೆ ಎರಡು ಶರೀರಗಳು ಒಂದಾಗುವುದಲ್ಲ.ಎರಡು ಮನಸುಗಳ ಒಂದಾಗುವಿಕೆ. ಎರಡು ಮನಸುಗಳು ಒಂದಾದರೆ ಮಾತ್ರ ಆ ದಂಪತಿಗಳ ಜೀವನದಲ್ಲಿ ಕಷ್ಟಗಳು ಬಾರದೆ ಸುಗಮವಾಗಿ ಸಾಗುತ್ತದೆ. ಒಂದು ವೇಳೆ ಕಷ್ಟಗಳು ಬಂದರೂ ಇಬ್ಬರೂ ಅನುಸರಿಸಿಕೊಂಡು ಹೋದರೆ ಮಾತ್ರ ಅಂತಹವರ ದಾಂಪತ್ಯ ಸುಖಮಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ವಿಚ್ಛೇದನಗಳ ಸಂಖ್ಯೆ ಅಧಿಕವಾಗುತ್ತಿದೆ. ದಾಂಪತ್ಯ ಪಾರಂಭವಾದ ಕೆಲವು ದಿನಗಳಲ್ಲೇ ವಿಚ್ಛೇದನಕ್ಕಾಗಿ ನ್ಯಾಯಾಲಯಗಳ ಮೊರೆಹೋಗುತ್ತಿದ್ದಾರೆ. ಆದರೆ, ಮದುವೆಗೆ ಮುಂಚೆಯೇ ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳುವುದರಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ಹೆಣ್ಣಾಗಲಿ,ಗಂಡಾಗಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದು ಹೇಗೆಂದು ತಿಳಿದುಕೊಳ್ಳೋಣ.

ಸ್ತ್ರೀ ಪುರುಷರಿಬ್ಬರೂ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಾಗ ಮುಖ್ಯವಾಗಿ ಗಮನಿಸ ಬೇಕಾದ ಕೆಲವು ಅಂಶಗಳನ್ನು ವಿಷ್ಣು ಪುರಾಣದಲ್ಲಿ ವಿವರಿಸಿದ್ದಾರೆ. ಆ ವಿಷಯಗಳು ಯಾವುವೆಂದು ನೋಡೋಣ.


1.ಸ್ರ್ತೀ ಪುರುಷರಿಬ್ಬರೂ ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವಾಗ ಗಮನಿಸಬೇಕಾದ ವಿಷಯಗಳಲ್ಲಿ ಮುಖ್ಯವಾದದ್ದು ಅವರುಗಳ ಮಿತ್ರರು,ಅವರ ಅಭ್ಯಾಸಗಳು ಹಾಗು ಮನಸ್ತತ್ವಗಳು. ಒಳ್ಳೆಯವರೊಡನೆ ಸ್ನೇಹ ಬೆಳೆಸಿದರೆ ಯಾರಾದರೂ ಒಳ್ಳೆಯವರೇ ಆಗುತ್ತಾರೆ. ಅದೇ ಒಂದು ವೇಳೆ ಕೆಟ್ಟವರೊಂದಿಗೆ ಸ್ನೇಹ ಬೆಳೆಸಿದರೆ ಇತರರಿಗೂ ಕೆಟ್ಟ ಅಭ್ಯಾಸಗಳೇ ಬರುತ್ತವೆ. ಆದುದರಿಂದ ಮೊದಲಿಗೆ ಬಾಳ ಸಂಗಾತಿಯ ಬಗ್ಗೆ ,ಅವರ ಸ್ನೇಹಿತರ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳುವುದರಿಂದ ನಿಮ್ಮ ಬಾಳ ಸಂಗಾತಿ ಒಳ್ಳೆಯವರೋ ಕೆಟ್ಟವರೋ ಎಂಬುದು ತಿಳಿಯುತ್ತದೆ. ಇದರಿಂದ ನೀವು ಮುಂದುವರಿಯಲು ಅನುಕೂಲವಾಗುತ್ತದೆ.

2. ನೀವು ಆರಿಸಿಕೊಳ್ಳ ಬಯಸುವ ಬಾಳ ಸಂಗಾತಿಯ ಬಗ್ಗೆ ಪರಿಶೀಲಿಸಬಹುದಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಅವರು ಮಾತನಾಡುವ ವಿಧಾನ. ಇತರರನ್ನು ಆಕರ್ಷಿಸುವ ಹಾಗೆ ಮೃದುವಾಗಿ,ಸುಕೋಮಲವಾಗಿ ಮನಸ್ಸನ್ನಿಗೆ ಹಿಡಿಸುವಂತೆ ಮಾತನಾಡುತ್ತಾರೋ ಇಲ್ಲವೋ ಎನ್ನುವುದನ್ನು ಗಮನಿಸಬೇಕು. ಇತಹವರನ್ನೇ ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ ಇಂತಹವರಲ್ಲಿ ಹೊಂದಾಣಿಕೆಯ ಸ್ವಭಾವವಿರುತ್ತದೆ.

3. ಬಾಳ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಅವರ ರಕ್ತ ಸಂಬಂಧ. ರಕ್ತ ಸಂಬಂಧಗಳಲ್ಲಾದರೆ ಆರಿಸಿಕೊಳ್ಳದಿರುವುದೇ ಉತ್ತಮ. ಹಾಗೆ ಆರಿಸಿಕೊಳ್ಳುವುದರಿಂದ ಮುಂದೆ ಹುಟ್ಟಲಿರುವ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿರುತ್ತವೆ. ಇದನ್ನೇ ಇಂದಿನ ವೈದ್ಯರು ಕೂಡ ಹೇಳುತ್ತಾರೆ. ತಾಯಿಯ ಕಡೆ ಸಂಬಂಧವಾದರೆ ಕನಿಷ್ಟ 5 ತಲೆಮಾರುಗಳ,ತಂದೆಯ ಕಡೆಯಾದರೆ 7 ತಲೆಮಾರುಗಳ ಅಂತರವಿರುವ ಸಂಬಂಧಗಳು ಉತ್ತಮ.

4.ಬಾಳ ಸಂಗಾತಿಯನ್ನು ಆರಿಸಿಕೊಳ್ಳುವ ವಿಷಯದಲ್ಲಿ ಕೊನೆಯದಾಗಿ ಗಮನಿಸಬೇಕಾದ ಅಂಶವೆಂದರೆ, ಬಾಳ ಸಂಗಾತಿಯ ನಿದ್ರಾ ಸಮಯ. ಅವಳು ಅಥವ ಅವನು ನಿದ್ರಿಸುವ ಸಮಯ ಮತ್ತು ನಿದ್ರಿಸುವ ಅವಧಿ, ಬೇಗನೆ ಮಲಗಿ ಬೇಗನೆ ಏಳುವವರಾದರೆ ಉತ್ತಮ.ಅಂತಹವರೇ ಹೆಚ್ಚು ಆರೋಗ್ಯವಂತರಾಗಿರುತ್ತಾರೆ .ಆದುದರಿಂದ ಅಂತಹವರಿಗೇ ಪ್ರಾಶಸ್ತ್ಯ ನೀಡಬೇಕು.


Click Here To Download Kannada AP2TG App From PlayStore!