ಮನೆ ಮಾಳಿಗೆ ಮೇಲೆ ಲ್ಯಾಂಡ್ ಆದ ಮಾರುತಿ ಕಾರು..! ಹೇಗೆ ಸಾಧ್ಯವಾಯಿತು ಅಂತ ಗೊತ್ತಾದರೆ ಶಾಕ್ ಆಗ್ತೀರ..!

ಇಂದು ನಮ್ಮ ದೇಶದಲ್ಲಷ್ಟೇ ಅಲ್ಲ, ಯಾವ ದೇಶದಲ್ಲಾದರೂ ರಸ್ತೆ ಅಪಘಾತಗಳು ಹೇಗೆ ನಡೆಯುತ್ತಿವೆ ಎಂದು ಎಲ್ಲರಿಗೂ ಗೊತ್ತು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ನಿರ್ಲಕ್ಷವಾಗಿ ಡ್ರೈವಿಂಗ್ ಮಾಡುವುದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವಂತಹ… ಅನೇಕ ಕಾರಣಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿರುತ್ತವೆ. ಆದರೆ ಅಪಘಾತ ನಡೆದಾಗ ಪ್ರಾಣ ನಷ್ಟ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಅದರಲ್ಲೂ ಯಾವುದೇ ಗಾಯಗಳು ಇಲ್ಲದಂತೆ ಅಪಘಾತದಿಂದ ಸೇಫ್ ಆಗಿ ಹೊರಬೀಳುವುದು ಎಂದರೆ.. ಅದು ತುಂಬಾ ಅಪರೂಪಕ್ಕೆ ನಡೆಯುತ್ತದೆ. ಆ ರಹದಾರಿ ಮೇಲೆ ನಡೆದ ಒಂದು ಆಘಾತಕಾರಿ ಅಪಘಾತ ಸಹ ಇಂತಹದ್ದೇ ಆಗಿದೆ. ಅದರಲ್ಲಿ ಪ್ರಾಣನಷ್ಟ ಬಿಡಿ, ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಒಂದು ಸಣ್ಣ ಗಾಯ ಸಹ ಆಗಲಿಲ್ಲ. ಆದರೆ ಅಪಘಾತ ಮಾತ್ರ ತೀವ್ರವಾಗಿ ಆದಂತೆ ನಮಗೆ ಗೊತ್ತಾಗುತ್ತದೆ. ಇಷ್ಟಕ್ಕೂ ಏನು ನಡೆಯಿತೆಂದರೆ…

ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಇರುವ ಸರ್ಕಾಘಾಟ್ ನಲ್ಲಿ ಇತ್ತೀಚೆಗೆ ಒಂದು ರಸ್ತೆ ಅಪಘಾತ ನಡೆಯಿತು. ಮಾರುತಿ ಬಲೆನೋ ಕಾರೊಂದು ಆ ರಸ್ತೆ ಬಳಿ ಒಂದು ಕಡೆ ತಿರುವಿನ ಬಳಿ ರಸ್ತೆಯಿಂದ 20 ಅಡಿ ದೂರದಲ್ಲಿರುವ ಒಂದು ಮನೆ ಮಾಳಿಗೆ ಮೇಲೆ ನುಗ್ಗಿ ಬಂತು. ಆದರೆ ಕಾರು ಮನೆ ಮಾಳಿಗೆ ಮೇಲೆ ಅಲ್ಲೇ ನಿಂತುಕೊಂಡಿತು. ಡ್ರೈವರ್ ಚಾಕಚಕ್ಯತೆಯಿಂದ ಬ್ರೇಕ್ ಹಾಕಿದ. ಯಾವುದೋ ವಿಡಿಯೋ ಗೇಮ್ ನಡೆದಂತೆ ಆ ಕಾರು ಮನೆ ಮೇಲೆ ನಿಂತಿಕೊಂಡಿತು. ಅಲ್ಲಿಂದ ಕೇವಲ 4 ಅಡಿ ಮುಂದೆ ಹೋಗಿದ್ದರೆ ಕಂದಕಕ್ಕೆ ಬೀಳುತ್ತಿತ್ತು. ಆದರೆ ಆ ರೀತಿ ಆಗಲಿಲ್ಲ. ನಿಜವಾಗಿ ಆ ಕಾರಿನಲ್ಲಿ ಪ್ರಯಾಣಿಸುತ್ತಿರುವವರ ಅದೃಷ್ಟ ಚೆನ್ನಾಗಿತ್ತು ಎಂದೇ ಹೇಳಬೇಕು.

ಆದರೆ ಆ ಕಾರು ಮನೆ ಮಾಳಿಗೆ ಮೇಲೆ ಹೇಗೆ ಹೋಯಿತು ಎಂಬುದು ಗೊತ್ತಿಲ್ಲವಾದರೂ.. ಈ ಸುದ್ದಿ ಮಾತ್ರ ಅಲ್ಲಿ ಸಂಚಲನ ಸೃಷ್ಟಿಸಿತು. ಕಾರು ಮನೆ ಮೇಲೆ ಬಿದ್ದ ಕಾರಣ ಅದನ್ನು ಮತ್ತೆ ರಸ್ತೆಗೆ ತರಲು ಹರಸಾಹಸ ಮಾಡಬೇಕಾಯಿತು. ಮನೆ ಮಾಳಿಗೆಯಿಂದ ರಸ್ತೆವರೆಗೂ ಕಬ್ಬಿಣದ ಸ್ತಂಭಗಳನ್ನು ಹಾಕಿ ಅವುಗಳ ಮೇಲೆ ಐರನ್ ಪ್ಲೇಟ್‌ಗಳನ್ನು ಹಾಕಿ ಅದರ ಮೇಲಿಂದ ಕಾರನ್ನು ಹಿಂದಕ್ಕೆ ತಂದರು. ಆದರೆ ಆ ರಸ್ತೆ ಅಪಘಾತದಲ್ಲಿ ಮಾತ್ರ ಯಾರಿಗೂ ಗಾಯಗಳಾಗಿಲ್ಲ. ಅದು ನಿಜವಾಗಿ ಅವರ ಅದೃಷ್ಟ. ಏನೇ ಆಗಲಿ ಈ ಆಕ್ಸಿಡೆಂಟ್ ಸುದ್ದಿ ಮಾತ್ರ ಈ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ..!


Click Here To Download Kannada AP2TG App From PlayStore!