ರೈಲಿನ ಹಾರನ್ ಒಮ್ಮೆಲೆ 4 ಸಲ ಮೊಳಗಿದರೆ…ಅರ್ಥ ಏನು ಗೊತ್ತಾ??

ಕೂ…ಚುಕ್..ಚುಕ್… ಎನ್ನುತ್ತಾ ಸಾಗುವ ರೈಲಿನ ಹಾರನ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದು ಹಳೆ ರೈಲಾದರೆ ಹಾರನ್ ಆ ರೀತಿ ಇರುತ್ತದೆ. ಅದೇ ಹೊಸ ರೈಲಾದರೆ ಅದರ ಹಾರನ್ ಬೇರೆ ರೀತಿ ಇರುತ್ತದೆ. ಆದರೆ ನಿಜವಾಗಿ ನಾವು ಗಮನಿಸಿದರೆ ಪ್ರತಿ ಸಂಗತಿಯಲ್ಲೂ ಹೊಸ ವಿಷಯ ಗೊತ್ತಾಗುತ್ತದೆ. ಸರಿ ಹಾಗಿದ್ದರೆ ರೈಲಿನ ಹಾರನ್‌ನಿಂದ ನಾವೇನು ತಿಳಿದುಕೊಳ್ಳಬಹುದೋ ಗೊತ್ತಾ..? ಅದರಲ್ಲೇನಿದೆ ವಿಶೇಷ….ಹೇಗೇ ಹಾಕಿದರೂ ರೈಲಿನ ಹಾರನ್ ಹಾರನೇ ಅಲ್ಲವೇ. ಇದರಲ್ಲಿ ತಿಳಿದುಕೊಳ್ಳುವಂತಹದ್ದೇನಿದೆ..? ಎಂದುಕೊಂಡಿರುತ್ತೀರ. ಆದರೆ..ಅದರಲ್ಲೇ ಇರೋದು ವಿಶೇಷ. ರೈಲಿನ ಹಾರನ್‌ಗೂ ಕೆಲವು ಅರ್ಥಗಳಿರುತ್ತವೆ. ಅವೇನೆಂದರೆ…

1. ಒಂದು ಶಾರ್ಟ್ ಹಾರನ್
ಟ್ರೈನ್ ಮುಂದಿನ ಟ್ರಿಪ್‌ಗೆ ಸಿದ್ದವಾಗುತ್ತಿದೆ ಎಂದರ್ಥ. ಸ್ಟೇಷನ್‌ನಲ್ಲಿ ನಿಲ್ಲಿಸಿ ಹೊರಡುತ್ತಿದ್ದರೆ ಟ್ರೈನ್ ಒಂದು ಸಲ ಶಾರ್ಟ್ ಹಾರನ್ ಹಾಕುತ್ತದೆ. ಅಂದರೆ ಪ್ರಯಾಣಕ್ಕೆ ಸಿದ್ಧವಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

2. ಎರಡು ಶಾರ್ಟ್ ಹಾರನ್‌ಗಳು
ರೈಲು ಇಂಜಿನ್‌ನಲ್ಲಿ ಇರುವ ಮೋಟಾರ್ ಮ್ಯಾನ್ ಗಾರ್ಡ್‌ಗೆ ಸಂಕೇತವಾಗಿ ಎರಡು ಶಾರ್ಟ್ ಹಾರನ್ ಮೊಳಗಿಸುತ್ತಾರೆ. ಇದರಿಂದ ಗಾರ್ಡ್ ಸಿಗ್ನಲ್ ಕ್ಲಿಯರ್‌ ಆಗಿರುವುದು, ಇಲ್ಲದಿರುವುದನ್ನು ಮೋಟಾರ್ ಮ್ಯಾನ್‌ಗೆ ಹೇಳುತ್ತಾನೆ.

3. ಮೂರು ಶಾರ್ಟ್ ಹಾರನ್
ರೈಲು ಮೂರು ಸಲ ಶಾರ್ಟ್ ಹಾರನ್ ಮೊಳಗಿಸಿದೆ ಎಂದರೆ ರೈಲು ಮೋಟಾರ್ ಮ್ಯಾನ್ ಕಂಟ್ರೋಲ್ ತಪ್ಪಿದೆ ಎಂದರ್ಥ. ಇದರಿಂದ ಗಾರ್ಡ್ ಹಿಂದಿನಿಂದ ವ್ಯಾಕ್ಯೂಮ್ ಬ್ರೇಕ್ ಎಳೆಯುತ್ತಾನೆ. ಟ್ರೇನ್ ನಿಲ್ಲುತ್ತದೆ.

4. ನಾಲ್ಕು ಶಾರ್ಟ್ ಹಾರನ್
ರೈಲು ನಾಲ್ಕು ಸಲ ಶಾರ್ಟ್ ಹಾರನ್ ಮೊಳಗಿಸಿದರೆ ಆ ರೈಲಿನಲ್ಲಿ ಏನೋ ತಾಂತ್ರಿಕ ಸಮಸ್ಯೆ ಇದೆ ಎಂದರ್ಥ. ಹಾಗಾಗಿ ರೈಲು ಮುಂದೆ ಚಲಿಸಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು.

5. ಒಂದು ಲಾಂಗ್, ಒಂದು ಶಾರ್ಟ್ ಹಾರನ್
ರೈಲು ಈ ರೀತಿ ಹಾರನ್ ಮೊಳಗಿಸಿದೆ ಎಂದರೆ ಗಾರ್ಡ್ ಬ್ರೇಕ್ ಪೈಪ್ ಸಿಸ್ಟಮನ್ನು ಸೆಟ್ ಮಾಡಬೇಕಾಗುತ್ತದೆ. ಆ ಬಳಿಕ ಮೋಟಾರ್ ಮ್ಯಾನ್ ರೈಲು ಇಂಜಿನನ್ನು ಆನ್ ಮಾಡುತ್ತಾನೆ.

6. ಎರಡು ಲಾಂಗ್, ಎರಡು ಶಾರ್ಟ್ ಹಾರನ್
ಈ ಹಾರನ್‌ನಿಂದ ಗಾರ್ಡ್ ರೈಲು ಇಂಜಿನನ್ನು ತನ್ನ ಅಧೀನಕ್ಕೆ ಪಡೆಯುತ್ತಾನೆ. ರೈಲು ಮೋಟಾರ್ ಮ್ಯಾನ್ ಕಂಟ್ರೋಲ್‌ನಲ್ಲಿ ಇಲ್ಲ ಎಂದು ತಿಳಿದುಕೊಳ್ಳಬೇಕು.

7. ಕಂಟಿನ್ಯೂ ಆಗಿ ಹಾರನ್
ರೈಲು ಕಂಟಿನ್ಯೂ ಆಗಿ ಹಾರನ್ ಮೋಳಗಿಸುತ್ತಿದ್ದರೆ ಆ ರೈಲು ಆ ಸ್ಟೇಷನ್‌ನಲ್ಲಿ ನಿಲ್ಲಲ್ಲ ಎಂದು ತಿಳಿದುಕೊಳ್ಳಬೇಕು.

8. ಎರಡು ಸಲ ನಿಲ್ಲಿಸಿ ಎರಡು ಹಾರನ್ ಮೊಳಗಿದರೆ
ರೈಲು ರೈಲ್ವೆ ಕ್ರಾಸಿಂಗ್ ದಾಡುತ್ತಿದೆ ಎಂದು ತಿಳಿದುಕೊಳ್ಳಬೇಕು.

9. ಎರಡು ಲಾಂಗ್, ಎರಡು ಶಾರ್ಟ್ ಹಾರನ್
ರೈಲಿನ ಟ್ರ್ಯಾಕ್‌ಗಳು ಚೇಂಜ್ ಆಗುತ್ತಿವೆ ಎಂದು ತಿಳಿದುಕೊಳ್ಳಬೇಕು.

10. ಎರಡು ಶಾರ್ಟ್ ಒಂದು ಲಾಂಗ್ ಹಾರನ್
ಪ್ಯಾಸೆಂಜರ್ ಚೈನ್ ಎಳೆದರೂ, ಗಾರ್ಡ್ ವ್ಯಾಕ್ಯೂಮ್ ಬ್ರೇಕ್ ಎಳೆದರೂ ಈ ರೀತಿ ಹಾರನ್ ಹಾಕುತ್ತಾರೆ.

11. ಆರು ಸಲ ಶಾರ್ಟ್ ಹಾರನ್
ರೈಲಿಗೆ ಏನಾದರೂ ಅಪಾಯ ಎದುರಾದರೆ ಈ ರೀತಿ ಹಾರನ್ ಮೊಳಗಿಸುತ್ತಾರೆ.

More Info CLICK :HERE


Click Here To Download Kannada AP2TG App From PlayStore!