ಚಲಿಸುತ್ತಿರುವ ರೈಲಿನಲ್ಲಿ ವಾಟ್ಸಾಪ್ ಸೂಚನೆಗಳ ಮೂಲಕ ಆತ ಒಬ್ಬ ಗರ್ಭಿಣಿಗೆ ಹೆರಿಗೆ ಮಾಡಿಸಿದ ಗೊತ್ತಾ..!

ಅಮೀರ್ ಖಾನ್ ನಟಿಸಿದ ’3 ಈಡಿಯಟ್ಸ್’ ಸಿನಿಮಾ ನೆನಪಿದೆಯಾ..? ಅದರಲ್ಲಿ ಒಬ್ಬ ಗರ್ಭಿಣಿಗೆ ಅಮೀರ್ ತನ್ನ ಗೆಳೆಯರ ಸಹಾಯದಿಂದ ಡೆಲಿವರಿ ಮಾಡುತ್ತಾನೆ. ಮುಖ್ಯವಾಗಿ ಅಮೀರ್ ಖಾನ್ ಆಕೆಗೆ ಡೆಲಿವರಿ ಮಾಡಲು ತುಂಬಾ ಕಷ್ಟಪಡುತ್ತಾನೆ. ವಿಡಿಯೋಕಾಲ್‌ನಲ್ಲಿ ಮಾತನಾಡುತ್ತಾ ವೈದ್ಯರು ಕೊಡುವ ಸೂಚನೆಗಳನ್ನು ಪಾಲಿಸುತ್ತಾ ಅಮೀರ್ ಆ ಮಹಿಳೆಗೆ ಡೆಲಿವರಿ ಮಾಡುತ್ತಾರೆ. ಇದರಿಂದ ಮಗು ಆರೋಗ್ಯವಾಗಿ ಜನಿಸುತ್ತದೆ. ಆದರೆ ಇಂತಹ ಘಟನೆಗಳು ಸಿನಿಮಾದಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ನಡೆಯುತ್ತವೆ. ಅದಕ್ಕೆ ಉದಾಹರಣೆ ನಾವೀಗ ಹೇಳಲಿರುವ ಘಟನೆ. ರೈಲಿನಲ್ಲಿ ನಡೆದದ್ದು. ಹೆರಿಗೆ ನೋವಿನಿಂದ ನರಳುತ್ತಿರುವ ಗರ್ಭಿಣಿಗೆ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಡೆಲಿವರಿ ಮಾಡಿದ. ಆದರೆ ಮಗು ಜನಿಸಿದ ಕೂಡಲೆ ಉಸಿರಾಡಲಿಲ್ಲ. ಆದರೂ ವಾಟ್ಸಾಪ್‌ನಲ್ಲಿ ಸೀನಿಯರ್ ವೈದ್ಯರು ಕೊಡುತ್ತಿದ್ದ ಸೂಚನೆಗಳಿಂದ ಆ ಮಗುವಿಗೆ ಪ್ರಾಣ ಕೊಟ್ಟ.

ಆತನ ಹೆಸರು ವಿಪಿನ್ ಖಡ್ಸೆ. ವಯಸ್ಸು 24 ವರ್ಷಗಳು. ನಾಗಪುರದಲ್ಲಿನ ಒಂದು ಸರಕಾರಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೊನೆಯ ವರ್ಷ ಓದುತ್ತಿದ್ದಾನೆ. ಆತ ಒಬ್ಬ ಹೌಸ್ ಸರ್ಜನ್. ಆದರೆ ಈ ವರ್ಷ ಏಪ್ರಿಲ್ 7ನೇ ತಾರೀಖು ಅಕೋಲಾದಿಂದ ನಾಗಪುರಕ್ಕೆ ಅಹಮದಾಬಾದ್ ಪೂರಿ ಎಕ್ಸ್‌ಪ್ರೆಸ್‌ನಲ್ಲಿ ಆತ ಪ್ರಯಾಣಿಸುತ್ತಿದ್ದ. ಅದೇ ರೈಲಿನ ಇನ್ನೊಂದು ಬೋಗಿಯಲ್ಲಿ ಇರುವ ಒಬ್ಬ ತುಂಬು ಗರ್ಭಿಣಿಗೆ ಹೆರಿಗೆ ನೋವು ಆರಂಭವಾಯಿತು. ಇದರಿಂದ ವಿಷಯ ತಿಳಿದುಕೊಂಡ ಟಿಸಿ ಆ ರೈಲಿನಲ್ಲಿ ಯಾರಾದರೂ ವೈದ್ಯರು ಇದ್ದಾರಾ ಎಂದು ಹುಡುಕಾಡಿದರು. ಆದರೆ ವೈದ್ಯರು ಸಿಗಲಿಲ್ಲ. ಆದರೆ ಅದೇ ರೈಲಿನಲ್ಲಿ ವಿಪಿನ್ ಇದ್ದ ಕಾರಣ ಟಿಸಿ ಮೂಲಕ ಆ ವಿಷಯ ತಿಳಿದುಕೊಂಡು ಮಹಿಳೆಗೆ ಡೆಲಿವರಿ ಮಾಡಲು ಸಿದ್ಧನಾದ. ಸ್ವತಃ ಹೌಸ್ ಸರ್ಜನ್ ಆದ ಕಾರಣ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಗೆ ಉಪಯೋಗವಾಗುವ ಸಲಕರಣೆಗಳು ಆತನ ಬಳಿ ಇದ್ದವು. ಇದರಿಂದ ಮಹಿಳೆಗೆ ಡೆಲಿವರಿ ಮಾಡಲು ತೊಂದರೆಯೇನು ಆಗಲಿಲ್ಲ.

ಆದರೆ ಆ ಮಹಿಳೆಗೆ ಡೆಲಿವರಿ ಮಾಡುವ ಸಮಯದಲ್ಲಿ ಶಿಶುವಿನ ತಲೆ ಮೊದಲು ಬರಲಿಲ್ಲ. ಅದಕ್ಕೆ ಬದಲಾಗಿ ಭುಜವೊಂದು ಹೊರಗೆ ಬಂದಿದೆ. ಇದರಿಂದ ಆತ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲಿಂಗ್, ಮೆಸೇಜ್ ಮೂಲಕ ಸೀನಿಯರ್ ವೈದ್ಯರನ್ನು ಸಂಪರ್ಕಿಸಿದರು. ಅವರು ಆತನಿಗೆ ಸೂಚನೆಗಳನ್ನು ನೀಡಿದರು. ಈ ಹಿನ್ನೆಲೆಯಲ್ಲಿ ವಿಪಿನ್ ಆ ಮಹಿಳೆಗೆ ಯಶಸ್ವಿಯಾಗಿ ಡೆಲಿವರಿ ಮಾಡಿದರು. ಆದರೆ ಮಗು ಹುಟ್ಟಿದ ಕೂಡಲೆ ಉಸಿರಾಡಲಿಲ್ಲ. ಇದರಿಂದ ಮತ್ತೆ ವಾಟ್ಸಾಪ್ ಮೂಲಕ ಸೀನಿಯರ್ ವೈದ್ಯರನ್ನು ಸಂಪರ್ಕಿಸಿ ಅವರ ಸೂಚನೆಗಳನ್ನು ತೆಗೆದುಕೊಂಡರು. ಆ ರೀತಿ ಅವರ ಸೂಚನೆಗಳ ಸಹಾಯದಿಂದ ಆ ಮಗುವಿಗೆ ಪ್ರಾಣ ನೀಡಿದರು. ಶಿಶು ಉಸಿರಾಟವನ್ನು ಆರಂಭಿಸಿದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಘಟನೆ ನಡೆದ 5 ತಿಂಗಳಾಗಿದ್ದರೂ ವಿಪಿನ್‍ಗೆ ಇನ್ನೂ ಶುಭಾಶಯಗಳು ಹರಿದು ಬರುತ್ತಲೇ ಇವೆ. ಆದರೆ ಸದ್ಯಕ್ಕೆ ಆತ ಎಂಬಿಬಿಎಸ್ ಕೊನೆಯ ವರ್ಷದಲ್ಲಿ ಓದುತ್ತಿರುವ ಕಾರಣ ತಾನು ಶೀಘ್ರದಲ್ಲೇ ನ್ಯೂರಾಲಜಿಯಲ್ಲಿ ಸ್ಪೆಷಾಲಿಟಿ ಮಾಡುತ್ತೇನೆ ಎನ್ನುತ್ತಿದ್ದಾನೆ. ಚಲಿಸುತ್ತಿರುವ ರೈಲಿನಲ್ಲಿ ವಾಟ್ಸಾಪ್ ಮೂಲಕ ಸೂಚನೆಗಳನ್ನು ತೆಗೆದುಕೊಳ್ಳುತ್ತಾ ಗರ್ಭಿಣಿಗೆ ಡೆಲಿವರಿ ಮಾಡಿದ್ದಕ್ಕೆ ಶೀಘ್ರದಲ್ಲೇ ಈ ಸಂಗತಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಲಿದೆಯಂತೆ. ಅಷ್ಟೇ ಅಲ್ಲದೆ ವಿಪಿನ್‌ರ ಕಥೆಯನ್ನು ಫೇಸ್‌ಬುಕ್ ಕಥೆಯ ರೂಪದಲ್ಲಿ ತರಲಿದೆಯಂತೆ. ಅದಕ್ಕಾಗಿ ನ್ಯೂಯಾರ್ಕ್ ನಿಂದ ಫೇಸ್‌ಬುಕ್ ಪ್ರತಿನಿಧಿಗಳು ಬರಲಿದ್ದಾರೆ. ಏನೇ ಆಗಲಿ ವಿಪಿನ್ ಆ ರೀತಿ ಎರಡು ಪ್ರಾಣಗಳನ್ನು ಕಾಪಾಡಿದ್ದಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ..!

 


Click Here To Download Kannada AP2TG App From PlayStore!