ಚೆನ್ನೈನಲ್ಲಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪೊಲೀಸ್ ಅಧಿಕಾರಿ, ಆರಂಭದಲ್ಲಿ ಆಟೋಡ್ರೈವರ್!!

ಇವರು ಹುಟ್ಟಿದ್ದು ಪ್ರದೀಪ್ ಕುಮಾರ್ ಆಗಿ. ಆಗ ಆಟೋ ಚಾಲಕ. ಇದೀಗ ಲಿಂಗ ಬದಲಾವಣೆ ಮೂಲಕ ಹೆಣ್ಣಾಗಿ ಬದಲಾಗಿದ್ದಾರೆ. ಇನ್ನೂ 25 ಹರೆಯದ ಇವರದು ಮೂಲತಃ ಸೇಲಂ. ಇದೀಗ ಚೆನ್ನೈನ ಚೂಲೈಂಬೇಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗ ತಮ್ಮ ಹೆಸರನ್ನು ಕೆ ಪ್ರೀತಿಕಾ ಯಾಶಿನಿ ಎಂದು ಬದಲಾಯಿಸಿಕೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ 111 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳಲ್ಲಿ ಇವರೂ ಒಬ್ಬರು.

2011ರಲ್ಲಿ ತಮ್ಮ ದೇಹದಲ್ಲಿ ಆಗುತ್ತಿದ್ದ ಬದಲಾವಣೆಗಳಿಂದ ಇವರು ಮನೆ ಬಿಟ್ಟು ಓಡಿ ಹೋದರು. ನಾನಾ ಕೆಲಸಗಳನ್ನು ಮಾಡುತ್ತಾ ಲೇಡೀಸ್ ಹಾಸ್ಟೆಲ್‌ನ ವಾರ್ಡನ್ ಆಗಿಯೂ ಕೆಲಸ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಆಗಬೇಕೆಂಬ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಕಷ್ಟು ಸಲ ಪ್ರಯತ್ನಿಸಿದ್ದರು. ಆದರೆ ರಾಜ್ಯ ಪೊಲೀಸ್ ಇಲಾಖೆ ಇವರ ಅರ್ಜಿಯನ್ನು ತಿರಸ್ಕರಿಸಿತ್ತು. ತೃತೀಯ ಲಿಂಗಿಗಳನ್ನು ಆಯ್ಕೆ ಮಾಡುವ ನಿಯಮಗಳು, ಕಾನೂನುಗಳು ಇಲ್ಲದಿದ್ದ ಕಾರಣ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ.

ಆದರೆ 2015ರಲ್ಲಿ ಮದ್ರಾಸ್ ಹೈಕೋರ್ಟ್ ಕೊಟ್ಟ ತೀರ್ಪು ಇವರಿಗೆ ಅನುಕೂಲವಾಯಿತು. 2016ರಲ್ಲಿ ಅವರನ್ನು ದೈಹಿಕ ತರಬೇತಿಗಾಗಿ ಧರ್ಮಪುರಿಗೆ ಕಳುಹಿಸಲಾಯಿತು. ಇದೀಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ತಾನು ಜನರ ಸೇವೆ ಸಲ್ಲಿಸುತ್ತೇನೆ ಎನ್ನುತ್ತಿದ್ದಾರೆ.


Click Here To Download Kannada AP2TG App From PlayStore!