ಆಸ್ಟ್ರೇಲಿಯಾದಲ್ಲಿ ಚಾಯ್ ವಾಲಿಯಾಗಿ ಈಕೆ ಸಿಕ್ಕಾಪಟ್ಟೆ ಜನಪ್ರಿಯಳು

ಮೈ ಬಿಸಿಯಾದರೆ ಜೀರಾ ಚಾಯ್. ಮೈ ತಣ್ಣಗಿದ್ದರೆ ಗರಂ ಚಾಯ್! ಮನಸ್ಸು ಚೆನ್ನಾಗಿಲ್ಲ ಎಂದರೆ ಮಸಾಲಾ ಚಾಯ್. ತಲೆನೋವಿದ್ದರೆ ಶುಂಠಿ ಚಾಯ್. ಬೋರ್ ಆದರೆ ಚಾಕೊಲೇಟ್ ಚಾಯ್. ಹೀಗೆ ಟೀ ಬಗ್ಗೆ ಹೇಳುತ್ತಾ ಹೋದರೆ ಅದೊಂದು ದೊಡ್ಡ ರಾಮಕೋಟಿ ಆಗುತ್ತದೆ. ಅಂತಹ ಭಾರತೀಯ ಬ್ರಾಂಡ್ ಟೀ ವಿದೇಶಗಳಲ್ಲೂ ಸಿಕ್ಕಾಪಟ್ಟೆ ಕ್ರೇಜ್ ಸಂಪಾದಿಸಿಕೊಂಡಿದೆ. ಆಸ್ಟ್ರೇಲಿಯಾದಲ್ಲಾದರೆ ನಮ್ಮ ಟಿಪಿಕಲ್ ಇಂಡಿಯನ್ ಸ್ಟೈಲ್‌ನಲ್ಲಿ ಟೀಗೆ ದೊಡ್ಡ ಕ್ಯೂ ಲೈನೇ ಇದೆ. ಇಷ್ಟಕ್ಕೂ ಯಾರದು ಚಾಯ್ ವಾಲಾ ಎಂಬುದು ತಾನೆ ನಿಮ್ಮ ಡೌಟ್. ಚಾಯ್ ವಾಲಾ ಅಲ್ಲ ಆಕೆ ಚಾಯ್ ವಾಲಿ. ಆಕೆ ತಯಾರಿಸಿದ ಟೀ ಆಸ್ಟ್ರೇಲಿಯಾ ಜನರಿಗೆ ಸಿಕ್ಕಾಪಟ್ಟೆ ಇಷ್ಟ. ಆ ಕಥೆ ಏನು ಎಂದು ಒಮ್ಮೆ ನೋಡೋಣ ಬನ್ನಿ.

ಉಪ್ಮಾ ವಿರ್ದಿ. ಪಂಜಾಬ್‌ನ ಜಲಂಧರ್ ಮೂಲದವರು. ಸದ್ಯಕ್ಕೆ ಮೆಲ್‍ಬೋರ್ನ್‌ನಲ್ಲಿ ಇದ್ದಾರೆ. ಆಸ್ಟ್ರೇಲಿಯಾದಲ್ಲಿ ವಿರ್ದಿ ಅನ್ನುವುದಕ್ಕಿಂತ ಚಾಯ್ ವಾಲಿ ಎಂದೇ ಆಕೆ ಖ್ಯಾತರು. ನಾಲಗೆಯನ್ನು ಚಪ್ಪರಿಸಿಕೊಳ್ಳುವಂತೆ ಮಾಡುವ ಭಾರತೀಯ ಟೀಯನ್ನು ಆಸ್ಟ್ರೇಲಿಯಾಗೆ ಪರಿಚಯಿಸಿದ ಖ್ಯಾತಿ ಅವರದು. ತಾತ ಆಗ ಆಯುರ್ವೇದ ಡಾಕ್ಟರ್. ಅವರಿಂದ ಆರೋಗ್ಯಕರವಾದ ಹರ್ಬಲ್ ಟೀ ಮಾಡುವುದನ್ನು ಹೇಗೋ ಕಲಿತುಕೊಂಡರು. ಕೇವಲ ಎರಡು ವರ್ಷಗಳಲ್ಲೇ ವಿರ್ದಿ ಬ್ರಾಂಡ್ ಎಂಬ ಟೀಗೆ ಅಲ್ಲಿ ವಿಪರೀತ ಕ್ರೇಜ್ ಶುರುವಾಯಿತು. ಸಾಮಾಜಿಕ ಸರ್ಕಲ್ ಮೂಲಕ ಆಕೆ ಮಾಡಿದ ಚಹಾಗೆ ಎಲ್ಲರೂ ಫಿದಾ ಆದರು. ವಿರ್ಧಿ ಎಲ್ಲೇ ಹೋದರೂ ಒಂದು ಕಪ್ ಟೀ ಮಾಡಿಕೊಡ್ತೀರಾ ಎಂದು ಕೇಳುತ್ತಿದ್ದರಂತೆ. ಒಮ್ಮೆ ತನ್ನ ಸಹೋದರನ ಮದುವೆಗೆ ಬಂದಿದ್ದ ಸಾವಿರಾರು ಮಂದಿ ಅತಿಥಿಗಳಿಗೆ ವಿರ್ದಿ ತನ್ನ ಮಾರ್ಕ್ ಟೀ ಮಾಡಿಕೊಟ್ಟಿದ್ದಕ್ಕೆ ಎಲ್ಲರೂ ಖುಷಿಯಾಗಿದ್ದರು.

ಸದ್ಯಕ್ಕೆ ವಿರ್ದಿ ಚಹಾ ಬಿಝಿನೆಸ್ ಒಂದು ರೇಂಜ್‌ನಲ್ಲಿದೆ. ಇತ್ತೀಚಿಗೆ ಸಿಡ್ನಿ ಟೀ ಫೆಸ್ಟಿವಲ್‌ನಲ್ಲಿ ವಿರ್ದಿ ತನ್ನ ಬ್ರಾಂಡ್ ಟೀಯನ್ನು ಪರಿಚಯಿಸಿದರು. ಅಷ್ಟೇ ಅಲ್ಲ.. ಅದ್ಭುತವಾದ ಟೀ ಹೇಗೆ ತಯಾರಿಸಬೇಕು ಎಂದು ಅಲ್ಲಿಗೆ ಬಂದವರಿಗೆಲ್ಲಾ ಕಲಿಸಿದರು. ಕೇವಲ ಟೀ ತಯಾರಿಸುವುದಷ್ಟೇ ಅಲ್ಲ. ಆನ್‌ಲೈನ್ ಟೀ ಸ್ಟೋರ್ ಸಹ ನಡೆಸುತ್ತಿದ್ದಾರೆ. ವೆರೈಟಿ ಟೀ ಪ್ರಾಡಕ್ಟ್ಸ್, ಕ್ಯಾಂಡಿಲ್ಸ್, ಪಾಟ್ಸ್, ಕೆಟಲ್ಸ್, ಸ್ಟೆಯಿನರ್ಸ್ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಚಾಕೋಲೇಟ್ ಟೀ ತುಂಬಾ ವಿಶೇಷ. ಇವಿಷ್ಟೇ ಅಲ್ಲದೆ ಆಗಾಗ ಟೀ ಮಾಡುವ ಬಗ್ಗೆ ವರ್ಕ್‌ಶಾಪ್ ಸಹ ನಡೆಸುತ್ತಿರುತ್ತಾರೆ. ಉತ್ಸಾಹಿಗಳಿಗೆ ಏಲಕ್ಕಿಯಂತಹ ಸುಗಂಧ ದ್ರವ್ಯಗಳನ್ನು ಹಾಕಿ ಪರಿಮಳಭರಿತವಾದ ಚಹಾ ತಯಾರಿಸುವ ವಿಧಾನವನ್ನೂ ಕಲಿಸುತ್ತಾರೆ.

ವಿರ್ದಿ ಚಹಾ ಆಸ್ಟ್ರೇಲಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದು ಆಕೆಗೆ 2016ರಲ್ಲಿ ಬಿಜಿನೆಸ್ ವುಮೆನ್ ಆಫ್ ದ ಇಯರ್ ಪ್ರಶಸ್ತಿಯನ್ನೂ ನೀಡಿ ಸನ್ಮಾನಿಸಲಾಗಿದೆ. ಅಷ್ಟು ಇಷ್ಟದಿಂದ ಕುಡಿಯುವ ಟೀ ಇನ್ನಷ್ಟು ಚೆನ್ನಾಗಿರಬೇಕು ಎಂಬುದೇ ಉಪ್ಮಾ ವಿರ್ದಿ ಗುರಿ.ಇವಿಷ್ಟೇ ಅಲ್ಲದೆ ಆಗಾಗ ಟೀ ಮಾಡುವ ಬಗ್ಗೆ ವರ್ಕ್‌ಶಾಪ್ ಸಹ ನಡೆಸುತ್ತಿರುತ್ತಾರೆ.

 


Click Here To Download Kannada AP2TG App From PlayStore!