ಜ್ಞಾಪಕಶಕ್ತಿ ಮಹಿಳೆಯರಲ್ಲಿ ಹೆಚ್ಚೋ, ಪುರುಷರಲ್ಲಿ ಹೆಚ್ಚೋ?

ಹೆಣ್ಣು, ಗಂಡು… ಈ ಇಬ್ಬರಲ್ಲಿ ಜ್ಞಾಪಕಶಕ್ತಿ ಯಾರಿಗೆ ಹೆಚ್ಚು ಎಂದು ಹೇಳುವುದು ಕಷ್ಟ. ಪ್ರಕೃತಿ ಇಬ್ಬರಿಗೂ ಸಮನಾಗಿ ಜ್ಞಾಪಕಶಕ್ತಿಯನ್ನು ನೀಡಿದೆ. ಆದರೆ ಮಹಿಳೆಯರಿಗೆ ಇರುವ ವಿಶೇಷ ಜವಾಬ್ದಾರಿಯನ್ನು ಅವಲಂಭಿಸಿ ಅವರಲ್ಲಿ ಜ್ಞಾಪಕಶಕ್ತಿ ಅಧಿಕವಾಗಿದೆಯೇನೋ ಎಂಬ ಅನುಮಾನ ತಜ್ಞರನ್ನು ನಿರಂತರವಾಗಿ ಕಾಡುತ್ತಿದೆ. ಅದು ನಿಜವೋ ಅಲ್ಲವೋ ಎಂಬುದನ್ನು ಸಂಶೋಧನೆಯೊಂದರಲ್ಲಿ ಗೊತ್ತಾಯಿತು.

BRAIN FOG

ಸಾಮಾನ್ಯವಾಗಿ ಮಹಿಳೆಯರಲ್ಲಿ ಮೆನೋಪಾಸ್ ಹಂತ ದಾಟುವ ಸಮಯದಲ್ಲಿ ಅನೇಕ ದೈಹಿಕ, ಮಾನಸಿಕ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಹಾರ್ಮೋನ್‌ಗಳಲ್ಲಿ ಆಗುವ ಅಸಮತೋಲನದಿಂದ ಈ ತೊಂದರೆ ಉಂಟಾಗುತ್ತದೆಂದು ಹೇಳುತ್ತಿರುತ್ತಾರೆ. ಜ್ಞಾಪಕಶಕ್ತಿಯಲ್ಲಿ ತೊಂದರೆ ಉಂಟಾಗುವುದು ಈ ಸಮಸ್ಯೆಗಳಲ್ಲಿ ಒಂದು. ಅಯೋಮಯ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕೊರತೆ, ಆಲೋಚನೆಯಲ್ಲಿ ಸ್ಪಷ್ಟತೆ ಇಲ್ಲದಿರುವಂತಹ ಸಮಸ್ಯೆಗಳು ತಲೆಯೆತ್ತುವ ಅಪಾಯ ಇದೆ. ಈ ತರಹ ಪರಿಸ್ಥಿತಿಯನ್ನು ‘Brain Fog’ ಎಂದು ಕರೆಯುತ್ತಾರೆ.

ಗಂಡಸರಿಗೆ ಹೋಲಿಸಿದರೆ
ಮಹಿಳೆಯರಲ್ಲಿ ಋತುಚಕ್ರ ನಿಂತುಹೋಗುವ ಮೆನೋಪಾಸ್ ಹಂತದಲ್ಲಷ್ಟೇ ಅಲ್ಲ, ಆ ಬಳಿಕ ಸಹ ಅವರಲ್ಲಿ ಜ್ಞಾಪಕಶಕ್ತಿ ಸ್ವಲ್ಪ ಕ್ಷೀಣಿಸುತ್ತದೆ ಎಂಬುದು ಈಗಾಗಲೆ ಬೆಳಕುಕಂಡಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಡಿಮೆನ್ಷಿಯಾ ಎಂಬ ಜ್ಞಾಪಕಶಕ್ತಿ ಸಮಸ್ಯೆ ಅಧಿಕ. ನಡುವಯಸ್ಸಿನ ಮಹಿಳೆಯಲ್ಲಿ ವ್ಯತಿರಿಕ್ತವಾಗಿ ಇಷ್ಟು ತೊಂದರೆಗಳಿದ್ದಾಗ್ಯೂ, ಗಂಡಸರಿಗೆ ಹೋಲಿಸಿದರೆ ಅವರ ಜ್ಞಾಪಕಶಕ್ತಿ ಸ್ವಲ್ಪ ಹೆಚ್ಚು ಎಂಬುದು ಸಾಬೀತಾಗಿದೆ. The North American Menopause Society ಎಂಬ ಸಂಸ್ಥೆ ನೇತೃತ್ವದಲ್ಲಿ ಈ ಸಂಶೋಧನೆ ನಡೆಯಿತು.

ತಪ್ಪೆಲ್ಲಾ ಈಸ್ಟ್ರೋಜನ್‌ದೇ
ಪ್ರಯೋಗದ ಭಾಗವಾಗಿ ಸಂಶೋಧಕರು 45 ರಿಂದ 55 ವಯಸ್ಸಿನ ನಡುವಿನ 212 ಮಂದಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇವರಿಗೆ ಹಲವಾರು ವಿಧದ ಪರೀಕ್ಷೆಗಳನ್ನು ನಿರ್ವಹಿಸಿದರು. ಇವರಲ್ಲಿ ತಾತ್ಕಾಲಿಕ ಹಾಗೂ ದೀರ್ಘಕಾಲದ ನೆನಪಿನ ಶಕ್ತಿ ಹೇಗಿದೆ ಎಂದು ಪರೀಕ್ಷಿಸಿದರು. ಮೆನೋಪಾಸ್ ದಾಟಿದ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಕಡಿಮೆಯಾಗಿದ್ದು ಅವರ ನೆನಪಿನ ಶಕ್ತಿ ಮೇಲೆ ಪ್ರಭಾವ ಬೀರುತ್ತದೆಂದು ಗೊತ್ತಾಗಿದೆ. ಒಂದು ವಿಷಯವನ್ನು ಕಲಿಯಲು, ಕಲಿತ ವಿಷಯವನ್ನು ನೆನಪು ಮಾಡಿಕೊಳ್ಳಲು ಇವರು ತೊಂದರೆ ಅನುಭವಿಸುತ್ತಿರುವುದಾಗಿ ಗಮನಿಸಿದರು.

ಆದರೂ ಸಹ!
ಅಚ್ಚರಿ ಸಂಗತಿ ಏನೆಂದರೆ ಮಹಿಳೆಯರು ಯಾವುದೇ ವಯಸ್ಸಿನಲ್ಲಿದ್ದರೂ, ತನ್ನ ಜತೆಯ ಗಂಡಸರಿಗೆ ಹೋಲಿಸಿದರೆ ಅವರಲ್ಲಿ ಜ್ಞಾಪಕಶಕ್ತಿ ಹೆಚ್ಚಾಗಿ ಇರುತ್ತದೆ ಎಂಬುದು ಗೊತ್ತಾಗಿದೆ. ಕೊನೆಗೆ ಮೆನೋಪಾಸ್ ಹಂತ ದಾಟಿದರೂ ಸಹ ಗಂಡಸರಿಗಿಂತ ಹೆಂಗಸರಲ್ಲಿ ಜ್ಞಾನಪಕಶಕ್ತಿ ಹೆಚ್ಚು ಎಂಬುದು ಗೊತ್ತಾಗಿದೆ. ಆದರೆ ಜ್ಞಾಪಕಶಕ್ತಿ ಯಾರಲ್ಲಿ ಹೆಚ್ಚು ಎಂಬುದನ್ನು ತಿಳಿದುಕೊಳ್ಳುವುದು ತಮ್ಮ ಉದ್ದೇಶವಲ್ಲ ಎಂದಿದ್ದಾರೆ ಸಂಶೋಧಕರು.

ಮೆನೋಪಾಸ್ ಹಂತದ ದಾಟಿದ ಮಹಿಳೆಯರಲ್ಲಿ Brain Fog ಸಮಸ್ಯೆಗಳು ಕಾಣಿಸಿಕೊಂಡರೆ ಅವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕೆಂದು ಸೂಚಿಸಿದ್ದಾರೆ. ಅದೇ ರೀತಿ ಗಂಡಸರು ಸಹ, ತಮ್ಮ ನಿತ್ಯದ ಜೀವನಕ್ಕೆ ಅಡ್ಡಿಯಾಗುವಂತಹ ಜ್ಞಾಪಕಶಕ್ತಿ ಸಮಸ್ಯೆಗಳು ಎದುರಾದರೆ ನಿರ್ಲಕ್ಷಿಸಬಾರದು ಎಂದೂ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕೆಂದು ಸೂಚಿಸುತ್ತಿದ್ದಾರೆ.


Click Here To Download Kannada AP2TG App From PlayStore!