ಹಾಲನ್ನು ಪದೇ ಪದೇ ಕಾಯಿಸುತ್ತಿದ್ದರೆ ಏನಾಗುತ್ತೆಂದು ನಿಮಗೆ ಗೊತ್ತಾ?!!!

ನಾವು ಹಾಲು ಉಕ್ಕಿದ ನಂತರ ಸ್ವಲ್ಪ ಸಮಯ ಕಾಯಿಸುವುದು ರೂಢಿಯಲ್ಲಿರುವ ಪದ್ಧತಿ. ಹಸು, ಎಮ್ಮೆಗಳಿಂದ ಹಿಂಡಿದ ಹಾಲನ್ನು ಹೀಗೆ ಮಾಡಿದರೆ ಸರಿ… ಆದರೆ ಪ್ಯಾಕೆಟ್ ಹಾಲನ್ನು ಈ ರೀತಿ ಮಾಡುವುದು ಒಳ್ಳೆಯದಲ್ಲವೆಂದು ಹೇಳುತ್ತಾರೆ ನಿಪುಣರು. ತಾಂತ್ರಿಕ ಯುಗದಲ್ಲಿ ಹಳೇ ವಿಧಾನವನ್ನು ಅನುಸರಿಸಬೇಕಿಲ್ಲ ಎನ್ನುತ್ತಿದ್ದಾರೆ. ನೀವು ಬಳಸುತ್ತಿರುವ ಪ್ಯಾಕೆಟ್ ಅನ್ನು ಗಮನಿಸಿ ನೋಡಿ. ಅದರ ಮೇಲೆ ಪಾಶ್ಚರೈಸ್ಡ್ ಎಂದು ಇದೆಯಲ್ಲವೆ? ಹಾಗಿದ್ದಲ್ಲಿ ಆ ಹಾಲನ್ನು ಕಾಯಿಸುವಂತಿಲ್ಲ ಎಂದರ್ಥ. ಅಧಿಕ ಉಷ್ಣೋಗ್ರತೆಯಿಂದ ಹಾಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆಯುವ ವಿಧಾನವನ್ನು ಫ್ರಾನ್ಸ್ ನ ಲೂಯಿಸ್ ಪಾಶ್ಚರ್ ಕಂಡುಹಿಡಿದಿದ್ದಾರೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ಪಾಶ್ಚುರೈಜೇಷನ್ ಎನ್ನುತ್ತಾರೆ. ಈ ವಿಧಾನದಲ್ಲಿ ಹಾಲನ್ನು ಅಧಿಕ ಉಷ್ಣೋಗ್ರತೆಯಿಂದ ಕಾಯಿಸಿದ ನಂತರ ತಣ್ಣಗೆ ಮಾಡಿ ಪ್ಯಾಕೆಟ್ ಗಳಲ್ಲಿ ತುಂಬಿ ನಂತರ ಡೀಪ್ ಫ್ರೀಜ್ ನಲ್ಲಿರಿಸುವರು. ಆದ್ದರಿಂದಲೇ ಹಾಲು ತಾಜಾ ಆಗಿರುತ್ತದೆ. ರೈತರಿಂದ ತೆಗೆದುಕೊಂಡ ಹಾಲಿನಲ್ಲಿ ಬ್ಯಾಕ್ಟೀರಿಯಾ ಇರುವುದರಿಂದ ಹಾಲು ಹೆಚ್ಚಿನ ಸಮಯ ಉಳಿಸಿಕೊಳ್ಳಲಾಗದೆ ಹಾಳಾಗುತ್ತದೆ. ಆದ್ದರಿಂದಲೇ ಡೈರಿಗಳಲ್ಲಿ ಹಾಲನ್ನು ಮೊದಲು ಪ್ಲಾಂಟ್ ಗಳಲ್ಲಿ ಪಾಶ್ಚುರೈಜೇಷನ್ ಮಾಡುತ್ತಾರೆ.

ಇಂದಿನ ಕಾಲದಲ್ಲಿ ಪ್ಯಾಕೆಟ್ ಹಾಲಿನ ಸರಬರಾಜು ಹೆಚ್ಚಾಗಿದೆ. ಮುಖ್ಯವಾಗಿ ನಗರಗಳಲ್ಲಿ, ಪಟ್ಟಣಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಈ ಹಾಲನ್ನೇ ಬಳಸುತ್ತಿದ್ದಾರೆ. ನೇರವಾಗಿ ಎಮ್ಮೆಗಳಿಂದ ಪಡೆದ ಹಾಲಿನಲ್ಲಿ ಹಾನಿಯುಂಟು ಮಾಡುವ ಬ್ಯಾಕ್ಟೀರಿಯಾ ತೊಲಗಿಸಲು, ಹಸಿಯಾಗಿರುವುದನ್ನು ಹೋಗಲಾಡಿಸಲು ಹಾಲನ್ನು ಕಾಯಿಸುವುದು ಅನಿವಾರ್ಯವಾಗಿದೆ. ಪಾಶ್ಚುರೈಜ್ಡ್ ಹಾಲನ್ನು ನಾವು ಮನೆಯಲ್ಲಿ ಕಾಯಿಸುವುದಕ್ಕಿಂತಲೂ ಹೆಚ್ಚಿನ ಉಷ್ಣೋಗ್ರತೆಯಲ್ಲಿ ಕಾಯಿಸುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ ಹಾಗೂ ಪಾಶ್ಚುರೈಜೇಷನ್ ವಿಧಾನದಲ್ಲಿ 161 ಡಿಗ್ರಿ ಉಷ್ಣೋಗ್ರತೆಯಲ್ಲಿ ಕಾಯಿಸಿ ತಣ್ಣಗಾದ ನಂತರ ಫ್ರೀಜ್ ನಲ್ಲಿಡುವುದರಿಂದ 2 ದಿನಗಳ ಕಾಲ ಕೆಡದಂತೆ ಇರುತ್ತವೆ. ಪುನಃ ಕಾಯಿಸುವುದರಿಂದ ಸಮಯ ಇರುವುದಿಲ್ಲವೆಂದು ನಿಪುಣರು ಹೇಳುತ್ತಾರೆ. ಅಷ್ಟೇ ಅಲ್ಲದೆ…


ಹೆಚ್ಚಿನ ಜನರಿಗೆ ಹಾಲನ್ನು ಕಾಯಿಸುವ ವಿಧಾನ ತಿಳಿದಿಲ್ಲವೆಂದು ಹಾಗೂ ಒಂದು ಬಾರಿ ಕಾಯಿಸಿದ ಹಾಲನ್ನು ಪುನಃ ಅದೇ ಉಷ್ಣೋಗ್ರತೆಯಲ್ಲಿ ಕಾಯಿಸಿ ಬಳಸುತ್ತಿರುವುದಾಗಿ ಇಂಡಿಯನ್ ಮೆಡಿಕಲ್ ಅಕಾಡಮಿ ಈ ಮಧ್ಯೆ ಮುಂಬೈ, ಪುಣೆ ನಗರಗಳಲ್ಲಿ ನಿರ್ವಹಿಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಅಧ್ಯಯನದಲ್ಲಿ 25-40 ವರ್ಷ ಮಧ್ಯೆ ವಯಸ್ಸುಳ್ಳ ಮಹಿಳೆಯರನ್ನು ಪ್ರಶ್ನಿಸಿದಾಗ ಶೇ.30 ರಷ್ಟು ಮಂದಿ ಹಾಲನ್ನು ಮೂರಕ್ಕಿಂತ ಹೆಚ್ಚು ಬಾರಿ, ಶೇ.62 ರಷ್ಟು ಮಂದಿ ಐದಕ್ಕಿಂತ ಹೆಚ್ಚು ಬಾರಿ ಕಾಯಿಸಿ ಬಳಸುತ್ತಿರುವಂತೆ ತಿಳಿದಿದೆ. ಇನ್ನು ಶೇ.72 ರಷ್ಟು ಮಂದಿ ಹಾಲನ್ನು ಕಾಯಿಸುವಾಗ ಸೌಟನಿಂದ ಬೆರೆಸುತ್ತಿಲ್ಲ. ” ಅಧಿಕ ಉಷ್ಣೋಗ್ರತೆಯಿಂದ ಹಾಲನ್ನು ಪದೇ ಪದೇ ಕಾಯಿಸುವುದರಿಂದ ‘ಬಿ’ ಗುಂಪಿನ ವಿಟಮಿನ್ ಗಳು ಹಾವಿಯಾಗುತ್ತವೆ. ಆದ್ದರಿಂದಲೇ ಹಾಲನ್ನು ಎರಡಕ್ಕಿಂತ ಹೆಚ್ಚಿಗಲ್ಲದೆ ಪ್ರತಿ ಸಲ 2-3 ನಿಮಿಷಕ್ಕಿಂತ ಹೆಚ್ಚು ಬಾರಿ ಕಾಯಿಸಬಾರದು” ಮತ್ತು ಒಂದು ಸಲ ಕಾಯಿಸಿ ಬಳಸಿಕೊಂಡರೆ ಉತ್ತಮ ಎಂದು ಅಧ್ಯಯನದಲ್ಲಿ ಭಾಗವಹಿಸಿದ ನಿಪುಣರು ಹೇಳಿದ್ದಾರೆ. ಪ್ಯಾಕೆಟ್ ಹಾಲನ್ನು ಡೈರಿಯಲ್ಲಿ ಕಾಯಿಸಿರುತ್ತಾರೆ. ಪುನಃ ಮನೆಯಲ್ಲಿ 2-3 ಸಲ ಕಾಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನಶಿಸುವುದಲ್ಲದೆ ಕೆಲವು ಖಾಯಿಲೆಗಳು ಬರಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 


Click Here To Download Kannada AP2TG App From PlayStore!