ಅರಬ್ಬೀ ಸಮುದ್ರದಲ್ಲಿರುವ ಈ ಶಿವಾಲಯ ದಿನವೂ ಮಾಯವಾಗುತ್ತೆ ,ಮತ್ತೆ ಪ್ರತ್ಯಕ್ಷವಾಗುತ್ತೆ !

ನಮ್ಮ ಭಾರತದೇಶ ,ಚಾರಿತ್ರಿಕ,ಪುರಾತನ ದೇವಾಲಯಗಳ ನಿಲಯ. ಹಲವಾರು ಶತಾಬ್ಧಗಳ ಹಿಂದೆ ನಿರ್ಮಿಸಿದ್ದರೂ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯಗಳು ಕೆಲವಾದರೆ, ಪುರಾಣಗಳ ಹಿನ್ನೆಲೆಯ ವಿಶಿಷ್ಟ ದೇವಾಲಯಗಳೂ ಇಲ್ಲಿವೆ.  ಕೆಲವು ದೇವಾಲಯಗಳು ಅವುಗಳನಿರ್ಮಾಣ ಶೈಲಿ,ಆಕಾರ,ಪ್ರಾಚೀನತೆ ಮೊದಲಾದ ಅಂಶಗಳಿಂದ ಪ್ರಚಾರಕ್ಕೆ ಬರುತ್ತವೆ.

ಆದರೆ,ಗುಜರಾತ್ ರಾಜ್ಯದಲ್ಲಿರುವ ಒಂದು ಶಿವಾಲಯ ಮಾತ್ರ ಇವೆಲ್ಲವಕ್ಕೂ ಭಿನ್ನವಾಗಿದೆ. ಯಾಕೆಂದರೆ,ಆ ದೇವಾಲಯ ಪ್ರತೀದಿನ ಮಾಯವಾಗುತ್ತದೆ ಹಾಗು ಮತ್ತೆ ಪ್ರತ್ಯಕ್ಷವಾಗುತ್ತದೆ.

ಗುಜರಾತಿನ ವಡೋದರ ಬಳಿಯಿರುವ ಕವಿ ಕಂಬೋಯ್ ಎಂಬ ಗ್ರಾಮದ ಬಳಿ ಅರಬ್ಬೀ ಸಮುದ್ರದಲ್ಲಿ ನಿರ್ಮಿಸಿರುವ ಆಲಯದಲ್ಲಿ ಶಿವನನ್ನು ‘ಸ್ತಂಭೇಶ್ವರ’ನಾಗಿ ಪೂಜಿಸುತ್ತಾರೆ.  ಈ ದೇವಾಲಯ ಬಹಳ ಪುರಾತನವಾದದ್ದೆಂದು ಇತಿಹಾಸಕಾರರು ಹೇಳುತ್ತಾರೆ.  ಸಹಸ್ರಮಾನಗಳ ಹಿಂದೆ ಕಾರ್ತಿಕೇಯ ಸ್ವಾಮಿಯೇ ಇದನ್ನು ನಿರ್ಮಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆಗ ತಾರಕಾಸುರನನ್ನು ವಧಿಸಿದ ಸಮಯದಲ್ಲಿ ನಿರ್ಮಿಸಲಾದ ಈ ದೇವಾಲಯ ಸಮುದ್ರದಲ್ಲಿ ಮುಳುಗಿದ್ದು 150 ವರ್ಷಗಳ ಹಿಂದೆ ಕಾಣಿಸಿಕೊಂಡಿತಂತೆ.

ಆದರೂ ಸಹ ಇಂದಿಗೂ ಈ ದೇವಾಲಯ ದಿನವೂ ಸಮುದ್ರದಲ್ಲಿ ಮುಳುಗಿ,ಮಾರನೇ ದಿನ ಪ್ರತ್ಯಕ್ಷವಾಗುತ್ತದಂತೆ.  4 ಅಡಿ ಎತ್ತರವಿರುವ ಈ ಶಿವಲಿಂಗ ತಮ್ಮ ಕೋರಿಕೆಗಳನ್ನು ಈಡೇರಿಸುತ್ತದೆಂದು ಭಕ್ತರು ನಂಬಿದ್ದಾರೆ. ಈ ದೇವಾಲಯದ ಧರ್ಶನ ಪಡೆಯಬೇಕಾದರೆ ಭಕ್ತರು ಬೆಳಗ್ಗೆ ಬರಬೇಕು. ಮಧ್ಯಾನ್ಹದ ವರೆಗೂ ದರ್ಶನ ಮಾಡಿ ಪೂಜೆ ನೆರವೇರಿಸಬಹುದು. ಆನಂತರ ಹಿಂದಿರುಗಲೇ ಬೇಕು . ಯಾಕೆಂದರೆ ಆಗ ಈ ದೇವಾಲಯ ಸಮುದ್ರದಲ್ಲಿ ಮುಳುಗಿಹೋಗುತ್ತದೆ.  ಆದರೆ ಈ ಆಲಯಕ್ಕೆ ಇದೇ ವಿಶೇಷತೆಯಲ್ಲದೆ ಇನ್ನೊಂದು ವಿಶೇಷತೆಯೂ ಇದೆ. ಈ ದೇವಾಲಯ ಇರುವ ಸ್ಥಳದಲ್ಲಿ ಚೋಟೇ ಮಹೀ ಸಾಗರ್ ,ಸಬರ್ಮತಿ ಎಂಬ ಎರಡು ನದಿಗಳ ಸಂಗಮವಾಗುತ್ತವೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇನ್ನೇಕೆ ತಡಮಾಡುತ್ತೀರ ? ನೀವೂ ಸಹ ಒಮ್ಮೆ ಈ ಶಿವಾಲಯವನ್ನು ದರ್ಶಿಸಿ ಪುನೀತರಾಗಿ.


Click Here To Download Kannada AP2TG App From PlayStore!

Share this post

scroll to top