ಅಲ್ಲಿ ಹಣ ಗಿಡಗಳಲ್ಲಿ ಬಿಡುತ್ತದಂತೆ.! Interesting.

ಕೇಳಿದಷ್ಟು ಕೊಡಲು… ಬೇಕಾ ಬಿಟ್ಟಿ ಖರ್ಚು ಮಾಡಲು ಹಣವೇನಾದರೂ ಗಿಡದಲ್ಲಿ ಬಿಡುತ್ತಾ …? ಎಂಬ ಮಾತುಗಳನ್ನು ನಾವು ಹಲವು ಸಂದರ್ಭಗಳಲ್ಲಿ ಕೇಳಿರುತ್ತೇವೆ. ಹಣವೇನೂ ಗಿಡಗಳಲ್ಲಿ ಬಿಡುವುದಿಲ್ಲ ,ಅದನ್ನು ಕಷ್ಟಪಟ್ಟು ಸಂಪಾದಿಸಬೇಕೆನ್ನುವುದೇ ಇದರ ಅರ್ಥ. ಆದರೆ ನಾವೀಗ ಹೇಳಲು ಹೊರಟಿರುವುದು ಮಾತ್ರ ಅಂತಹ ಗಿಡಗಳ ಬಗ್ಗೆಯೇ.. ಆದರೆ, ಅವು ಕಾಯಿ,ಹಣ್ಣುಗಳ ತರಹ ಬಿಡುವುದಿಲ್ಲ. ಮತ್ತೆ ಆ ಹಣ ಮರಗಳ ಮೇಲೆ ಹೇಗೆ ಬಂತೆಂಬ ಅನುಮಾನ ನಿಮ್ಮನ್ನು ಕಾಡುತ್ತಿದೆಯೇ ? ಇನ್ನೇಕೆ ತಡ. ಬನ್ನಿ ಅಂತಹ ಗಿಡಗಳು ಎಲ್ಲಿವೆ,ಅವುಗಳಲ್ಲಿ ಹಣ ಬಿಡುವುದಾದರೂ ಹೇಗೆಂದು ತಿಳಿದುಕೊಳ್ಳೋಣ.

ಅದು ವುಡ್ ಲ್ಯಾಂಡ್. ನೀವಂದುಕೊಂಡ ಹಾಗೆ ಷೂ, ಪರ್ಸ್ ಮುಂತಾದವುಗಳನ್ನು ಮಾರುವ ಬ್ರ್ಯಾಂಡೆಡ್ ಕಂಪೆನಿಯಲ್ಲ. ಇಂಗ್ಲೆಂಡ್ ನಲ್ಲಿರುವ ಅದೊಂದು ಪ್ರದೇಶ. ಕೆಲವು ಶತಮಾನಗಳ ಹಿಂದೆ ಆ ಪ್ರದೇಶದಲ್ಲಿ ವಾಸಿಸುವವರು ಅಲ್ಲಿರುವ ಗಿಡಗಳ ಕಾಂಡಗಳ ಮೇಲೆ ನಾಣ್ಯಗಳನ್ನು ಇಡುತ್ತಿದ್ದರಂತೆ. ಹೀಗೆ ಯಾಕಾಗಿ ಇಡುತ್ತಿದ್ದರೆಂದರೇ… ಆ ಗಿಡಗಳಲ್ಲಿ ದೈವಾಂಶ ಸಂಭೂತವಾದ ಅತ್ಮಗಳಿವೆಯೆಂದು ಅವರು ನಂಬುತ್ತಿದ್ದರಂತೆ. ಆದುದರಿಂದ ಆ ಗಿಡಗಳ ಕಾಂಡಗಳಲ್ಲಿ ನಾಣ್ಯಗಳನ್ನು ಸಿಕ್ಕಿಸುತ್ತಿದ್ದರಂತೆ. ಹೀಗೆ ಮಾಡುವುದರಿಂದ ಆತ್ಮಗಳಿಗೆ ಶಾಂತಿದೊರೆತು, ತಮ್ಮ ಕೋರಿಕೆಗಳು ಈಡೇರುತ್ತವೆಂದು ನಂಬಿಕೆಯಂತೆ. ಆದರೆ, ಹೀಗೆ ಮಾಡುವುದರಿಂದ ವುಡ್ ಲ್ಯಾಂಡ್ ಪ್ರದೇಶದಲ್ಲಿ ಇರುವ ಎಲ್ಲಾ ಗಿಡ ಮರಗಳ ಕಾಂಡಗಳು ನಾಣ್ಯಗಳಿಂದ ತುಂಬಿಹೋದವಂತೆ. ಈ ರೀತಿಯಾಗಿ ಆ ಪ್ರದೇಶದಲ್ಲಿರುವ ಮರ,ಗಿಡಗಳ ಕಾಂಡಗಳಲ್ಲಿ ಸಾವಿರಾರು ನಾಣ್ಯಗಳಿರುವುದನ್ನು ಇಂದಿಗೂ ಸಹ ನಾವು ನೋಡಬಹುದು. ಹಾಗಾಗಿ ಅಲ್ಲಿರುವ ಮರಗಳನ್ನು ‘ಮನೀ ಟ್ರೀ’ ಎಂದು ಕರೆಯುತ್ತಾರಂತೆ.

ಹಿರಿಯರು ಪಾಲಿಸಿಕೊಂಡು ಬಂದಂತಹ ಆಚರಣೆಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರಂತೆ.ಆದುದರಿಂದ ಆ ಗಿಡಗಳ ಮೇಲೆ ನಾಣ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆಯಂತೆ. ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದಂದು ಆ ಗಿಡ ಮರಗಳ ಕಾಂಡಗಳ ಮೇಲೆ ಜನರು ನಾಣ್ಯಗಳನ್ನು ಇಟ್ಟು ತಮ್ಮ ಕೋರಿಕೆಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರಂತೆ. ಹೊಸದಾಗಿ ಹೋದವರು ಈ ಗಿಡಗಳನ್ನು ನೋಡಿದಲ್ಲಿ,ಗಿಡಗಳಲ್ಲೇ ಹಣ ಬಿಟ್ಟಿದೆಯೆಂದುಕೊಳ್ಳುತ್ತಾರಂತೆ. ವಿಶಿಷ್ಟವಾದ ‘ಮನೀ ಟ್ರೀ’ ಗಳು ವಿಚಿತ್ರವಾಗಿವೆಯಲ್ಲವೇ?


Click Here To Download Kannada AP2TG App From PlayStore!

Share this post

scroll to top