ಅಮ್ಮ ಕೊನೆಯದಾಗಿ ಹೇಳಿದ ಮಾತು…!ಅದಕ್ಕೇ ಅಮ್ಮ ಯಾವಾಗಲೂ ಗ್ರೇಟ್.

ಅದು 2008 ನೇ ಇಸವಿ… ಹುಡುಗಿಯೊಬ್ಬಳು ತನ್ನ ಇಂಟರ್ಮೀಡಿಯೇಟ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಳೆ. ಬೆಳಗಾದರೆ ಪ್ರಥಮ ಪರೀಕ್ಷೆ. ಆ ದಿನ ಸಂಜೆಯಿಂದಲೇ ಹುಡುಗಿಯ ಅಮ್ಮನಿಗೆ ವಿಪರೀತ ಜ್ವರ ಬರುತ್ತಿದೆ. ಸಾಧಾರಣ ಜ್ವರವಿರಬಹುದೆಂದು ಮಾತ್ರೆ ನುಂಗಿ ಮಲಗಿದ್ದಾಳೆ. ಆದರೆ, ಕ್ಯಾನ್ಸರ್ ರೋಗ ಉಲ್ಬಣಿಸಿ ಕೊನೆಯಹಂತದಲ್ಲಿದ್ದ ಅವರ ಆರೋಗ್ಯ ಒಮ್ಮೆಲೇ ಹದಗೆಟ್ಟಿತು. ಅದೇ ರಾತ್ರಿ 2 ಗಂಟೆಗೆ ಹುಡುಗಿಯ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ತಂದೆಯೊಡನೆ ಆ ಹುಡುಗಿಯೂ ಸಹ ಆಸ್ಪತ್ರೆಗೆ ತೆರಳುತ್ತಾಳೆ. ಆಸ್ಪತ್ರೆಯ ಹಾಸಿಗೆಯಲ್ಲಿ ತಾಯಿಯೆದುರು ಅಳುತ್ತಾ ನಿಂತ ಮಗಳು…ಬೆಳಗಾದರೆ ಮಗಳಿಗೆ ಪರೀಕ್ಷೆ ಇದೆಯೆಂದು ತಿಳಿದಿದ್ದ ಆ ತಾಯಿ…ಮಗಳೊಡನೆ’ ಮಗಳೇ ಯಾವಾಗ ನಿನಗೆ ನನ್ನ ನೆನಪಾಗುತ್ತದೆಯೋ ಆಗ ಏನಾದರೂ ಓದುತ್ತಲೇ ಇರು. ಈಗ ನೀನು ಮನೆಗೆ ಹೋಗು. ನಾನು ಬೇಗನೆ ಗುಣಮುಖಳಾಗುತ್ತೇನೆ. ಬೆಳಗಾಗುವುದರೊಳಗೆ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬರುತ್ತೇನೆ’ ಎಂದು ಹೇಳಿದಳು.

ಈ ಮಾತುಗಳೇ ಆ ತಾಯಿ ತನ್ನ ಮಗಳೊಡನೆ ಆಡಿದ ಕೊನೆಯ ಮಾತುಗಳು. ಕ್ಯಾನ್ಸರ್ ಕಾರಣದಿಂದಾಗಿ ಅವಯವಗಳು ಸ್ಪಂಧಿಸದೆ ಅಂದು ರಾತ್ರಿಯೇ ಆ ತಾಯಿ ಇಹಲೋಕ ತ್ಯಜಿಸುತ್ತಾಳೆ.ಮರಣಿಸುವ ಸಮಯದಲ್ಲಿ ತನ್ನ ಗಂಡನೊಡನೆ ‘ ನಾಳೆ ತಪ್ಪದೇ ಪರೀಕ್ಷೆಗೆ ಹಾಜರಾಗುವಂತೆ ನನ್ನ ಮಗಳಿಗೆ ಹೇಳಿ.ನನ್ನ ಪರವಾನಗಿ ಶುಭಾಶಯ ಗಳನ್ನು ತಿಳಿಸಿ ಎಂದು ಹೇಳಿ ಇಹಲೋಕ ತ್ಯಜಿಸುತ್ತಾಳೆ.ಮರುದಿನ ಆ ಮಗಳು ತಾಯಿಯ ಕೋರಿಕೆಯಂತೆ ಪರೀಕ್ಷೆಗೆ ಹಾಜರಾಗುತ್ತಾಳೆ. ಅಷ್ಟೇ ಅಲ್ಲ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗುತ್ತಾಳೆ. ಇಂದಿಗೂ ಸಹ ತಾಯಿಯ ನೆನಪಾದಾಗಲೆಲ್ಲಾ ಏನಾದರೂ ಓದುತ್ತಲೇ ಇದ್ದು ತಾಯಿಯ ಕೊನೆಯ ಕೋರಿಕೆಯನ್ನು ನೆರವೇರಿಸುತ್ತಲೇ ಇದ್ದಾಳೆ. “ಮಗಳಿಗಾಗಿ ಪರಿತಪಿಸಿದ ತಾಯಿಯ ಕೋರಿಕೆಯನ್ನು ನೆರವೇರಿಸುತ್ತಿರುವ ಮಗಳಿಗೆ ಹ್ಯಾಟ್ಸ್ಆಫ್.”

ಆ ತಾಯಿ ಮಗಳ ಫೋಟೋ ಇಲ್ಲಿದೆ ನೋಡಿ.


Click Here To Download Kannada AP2TG App From PlayStore!

Share this post

scroll to top