ಬಿಳಿಕೂದಲು ಬರದೆ ಇರಲು ಹೀಗೆ ಮಾಡಿ…ತುಂಬಾ ಪರಿಣಾಮಕಾರಿ… ಬಣ್ಣಗಿಣ್ಣ ಹಚ್ಚಬೇಕಿಲ್ಲ!!

ಇಂದು ಚಿಕ್ಕಮಕ್ಕಳಿಂದ ಹಿಡಿದು ಯುವಕರ ತನಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ ಬಿಳಿಕೂದಲು ಅಥವಾ ಬಾಲನೆರೆ. ಅಧಿಕ ಒತ್ತಡ, ವಂಶವಾಹಿಗಳಲ್ಲಿ ಲೋಪದ ಕಾರಣದಿಂದಲೋ ಅಥವಾ ಇನ್ನೇನೋ ಕಾರಣಕ್ಕೆ ಬಿಳಿ ಕೂದಲು ಬರುತ್ತಿವೆ. ಇದು ಬರದೆ ಇರಬೇಕಾದರೆ ನಾನು ತಿನ್ನುವ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಹೆಚ್ಚು ಕಬ್ಬಿಣಾಂಶ, ಕ್ಯಾಲ್ಸಿಯಂ ಸಿಗುವ ಆಹಾರವನ್ನು ತೆಗೆದುಕೊಂಡರೆ ಉತ್ತಮ.

ಇಂದು ಮಾರುಕಟ್ಟೆಯಲ್ಲಿ ಬಿಳಿಕೂದಲನ್ನು ನಿವಾರಿಸಲು ನಾನಾ ರೀತಿಯ ಎಣ್ಣೆ, ಹೇರ್ ಕಲರ್ಸ್ ಲಭ್ಯವಾಗುತ್ತಿವೆ. ಅವು ತಾತ್ಕಾಲಿಕವಾಗಿ ನಿಮಗೆ ಪರಿಹಾರ ನೀಡಿದರೂ ಶಾಶ್ವತವಾಗಿ ನಿಮ್ಮ ಸಮಸ್ಯೆಯನ್ನು ಪರಿಹರಿಸಲ್ಲ. ಮುಖ್ಯವಾಗಿ ಆ ರೀತಿಯ ಕೆಮಿಕಲ್ಸ್ ಬಳಸುವುದರಿಂದ ಕೂದಲು ಇನ್ನಷ್ಟು ಬೆಳ್ಳಗಾಗುತ್ತಾ ಹೋಗುತ್ತದೆ. ಕೂದಲು ಉದುರುವ, ಬೆಳ್ಳಗಾಗುವ ಸಮಸ್ಯೆ ಮಿತಿಮೀರಿ ಇನ್ನಷ್ಟು ಬಿಗಡಾಯಿಸುವಂತಾಗುತ್ತದೆ. ಆದಕಾರಣ ಇನ್ನು ಮುಂದೆ ಆ ರೀತಿ ಮಾಡದೆ ಕೆಳಗೆ ಕೊಟ್ಟಿರುವ ಸಲಹೆಯನ್ನು ಪಾಲಿಸಿ. ಬಿಳಿಕೂದಲ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ.

ಈ ಪೋಷಕಾಂಶಗಳು ಸಿಗಬೇಕಾದರೆ ಕೆಳಗೆ ಕೊಟ್ಟಿರುವ ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು.

* ಬಳ್ಳಿ ಜಾತಿಯ ತರಕಾರಿಗಳಾದ ಹುರಳಿಯಂತಹವನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು.
* ಮೊಟ್ಟೆ, ಸೊಪ್ಪನ್ನು ವಾರದಲ್ಲಿ ನಾಲ್ಕು ದಿನ ತಿನ್ನಬೇಕು.
* ಎ-ವಿಟಮಿನ್ ಅಧಿಕವಾಗಿ ಲಭಿಸುವ ಕ್ಯಾರೆಟ್ ಹೆಚ್ಚಾಗಿ ಸೇವಿಸಬೇಕು.
* ಲಿವರ್‌ನಲ್ಲಿ ಐರನ್ ಹೆಚ್ಚಾಗಿ ಲಭಿಸುತ್ತದೆ. ಆದ ಕಾರಣ ಮಾಂಸಾಹಾರಿಗಳು ಲಿವರ್ ಹೆಚ್ಚಾಗಿ ತಿಂದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.