ನವಗ್ರಹ ಪ್ರದಕ್ಷಿಣೆಯನ್ನು ಸರಿಯಾದ ಪದ್ದತಿಯಲ್ಲಿ ಮಾಡಿ ವಿಶೇಷ ಲಾಭಗಳನ್ನು ಪಡೆಯಿರಿ..!

ಗ್ರಹಗತಿಗಳಿಂದ ಎದುರಾಗುವ ತೊಂದರೆಗಳನ್ನು ಎದುರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಇವುಗಳಿಂದ ಉತ್ಪತ್ತಿಯಾಗುವ ದೈವಿಕ ಶಕ್ತಿ ಮನುಷ್ಯನನ್ನು ಕಾಪಾಡುವುದು. ನಿರ್ದಿಷ್ಟವಾದ ಪದ್ದತಿಯ ಪ್ರಕಾರ ನವಗ್ರಹ ಪ್ರದಕ್ಷಿಣೆ ಮಾಡಿದರೆ ವಿಶೇಷ ಫಲಿತಾಂಶ ದೊರೆಯುತ್ತದೆ. ಬಹಳಷ್ಟು ಜನ ಪ್ರದಕ್ಷಿಣೆ ಮಾಡುತ್ತಾ ನವಗ್ರಹ ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸುತ್ತಿರುತ್ತಾರೆ. ಸಾಧ್ಯವಾದಷ್ಟು ಅವನ್ನು ಮುಟ್ಟದೇ ಪ್ರದಕ್ಷಿಣೆ ಮಾಡುವುದು ಒಳ್ಳೆಯದು.

ನವಗ್ರಹಗಳ ಮಧ್ಯೆ ತೇಜಸ್ವಿಯಾದ ಸೂರ್ಯ ಪೂರ್ವದಿಕ್ಕಿನಲ್ಲಿರುತ್ತಾನೆ. ಸೂರ್ಯನಿಗೆ ಬಲಭಾಗದಲ್ಲಿ ಕುಜನು ದಕ್ಷಿಣಾಭಿಮುಖವಾಗಿರುತ್ತಾನೆ. ಶುಕ್ರನಿಗೆ ಬಲಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಚಂದ್ರನಿದ್ದು, ಎಡಭಾಗದಲ್ಲಿ ಬುಧನು ಉತ್ತರಾಭಿಮುಖವಾಗಿ ಇರುತ್ತಾನೆ. ಸೂರ್ಯನ ಹಿಂಭಾಗ ಶನಿ ಮಹಾತ್ಮ ಪಶ್ಚಿಮಾಭಿಮುಖವಾಗಿರುತ್ತಾನೆ. ಶನಿಗೆ ಎಡಭಾಗದಲ್ಲಿ ರಾಹು ಉತ್ತರಾಭಿಮುಖವಾಗಿಯೂ, ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಇರುತ್ತಾರೆ. ಇದು ಪ್ರಶಸ್ತವಾದ ಪ್ರತಿಷ್ಟಾಪನೆ.

ಸೂರ್ಯನನ್ನು ನೋಡುತ್ತಾ ಒಳಗೆ ಪ್ರವೇಶ ಮಾಡಿ ಎಡಭಾಗದಿಂದ (ಚಂದ್ರನ ಕಡೆಯಿಂದ) ಬಲಭಾಗಕ್ಕೆ ಒಂಬತ್ತು ಪ್ರದಕ್ಷಿಣೆ ಹಾಕುವುದು ಶ್ರೇಷ್ಠ. ಪ್ರದಕ್ಷಿಣೆ ಪೂರ್ಣಗೊಂಡ ನಂತರ ಬಲಭಾಗದಿಂದ ಎಡಭಾಗಕ್ಕೆ (ಅಂದರೆ ಬುಧನ ಕಡೆಯಿಂದ) ರಾಹುವನ್ನು, ಕೇತುವನ್ನು ಸ್ಮರಿಸುತ್ತಾ ಎರಡು ಪ್ರದಕ್ಷಿಣೆ ಮಾಡಬಹುದು. ಕೊನೆಗೆ ಸಾಲಾಗಿ ಸೂರ್ಯನನ್ನು, ಚಂದ್ರನನ್ನು, ಕುಜ, ಬುಧ, ಬೃಹಸ್ಪತಿ, ಶುಕ್ರ, ಶನಿ ಮಹಾತ್ಮ, ರಾಹು, ಕೇತುನನ್ನು ಸ್ಮರಿಸುತ್ತಾ ಒಂದೊಂದು ಪ್ರದಕ್ಷಿಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೆ ಬರಬೇಕು. ಗ್ರಹದೋಷಗಳಿಂದ ಹೊರಬರಲು ನವಗ್ರಹ ಪ್ರದಕ್ಷಿಣೆಗಿಂತ ಉತ್ತಮವಾದ ಮಾರ್ಗ ಮತ್ತೊಂದಿಲ್ಲ ಎಂದು ಅಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.


Click Here To Download Kannada AP2TG App From PlayStore!

Share this post

scroll to top