ನಾಯಿಗಳಿಗೆ ಮನುಷ್ಯನ ಮರಣದ ವಿಷಯ ಮೊದಲೇ ತಿಳಿಯುತ್ತದೆ..! ಆ ಶಕ್ತಿ ಅವುಗಳಿಗೆ ಇದೆಯಂತೆ..!

ಮನುಷ್ಯ ನಾಯಿಗಳ ಮಧ್ಯೆ ಸಾವಿರಾರು ವರ್ಷಗಳ ಅನುಬಂಧವಿದೆ. ಒಂದು ಪ್ರಾಣಿಯನ್ನು ಪಕ್ಕದಲ್ಲಿ ಮುಗಿಸಿಕೊಂಡು ಮುದ್ದು ಮಾಡುವ ಪ್ರಾಣಿ ಎಂದರೆ ನಾಯಿ ಎಂದು ಹೇಳಬಹುದು. ಅದಕ್ಕೆ ನಾಯಿಯನ್ನು ಹೈಲೀ ಸೋಷಿಯಲ್ ಅನಿಮಲ್ ಎನ್ನುವುದು. ನಾಯಿಯನ್ನು ಕೆಲವರು ಕಾಲ ಭೈರವ ಎಂದು ಕರೆಯುತ್ತಾರೆ. ದೇವತೆಗಳು, ಗಾಳಿಯಲ್ಲಿ ಸಂಚರಿಸುವ ಶಕ್ತಿಗಳು ನಾಯಿಗಳಿಗೆ ಕಾಣಿಸುತ್ತವೆ ಎಂದು ಹಿಂದೂಗಳು ನಂಬುತ್ತಾರೆ. ಮಧ್ಯರಾತ್ರಿ ನಾಯಿಗಳು ವಿಚಿತ್ರವಾಗಿ ಕೂಗಿದರೆ(ಶಬ್ದ ಮಾಡಿದರೆ) ಮನೆಯಲ್ಲಿನ ಹಿರಿಯರಿಗೆ ಆತಂಕಗೊಳ್ಳುತ್ತಾರೆ. ಆಕಾಶದಲ್ಲಿ ಸಂಚರಿಸುವ ಯಮ, ಯಮನ ಭಟರು ನಾಯಿಗಳಿಗೆ ಕಾಣಿಸುತ್ತಾರೆಂಬುದು ಹಿಂದೂಗಳ ನಂಬಿಕೆ. ನಾಯಿಗಳು ರಾತ್ರಿ ಸಮಯದಲ್ಲಿ ಪದೇಪದೇ ವಿಚಿತ್ರವಾಗಿ ಶಬ್ದ ಮಾಡಿವ ದಿನಗಳಲ್ಲಿ ಸಾವು ಸಂಭವಿಸುತ್ತದೆ ಎನ್ನುವರು. ಇವೆಲ್ಲವೂ ಧರ್ಮಕ್ಕೆ ಸಂಬಂಧಿಸಿದ ವಿಷಯಗಳು.

ಆದರೆ ಕೆಲವು ತಜ್ಞರು ನಾಯಿಗಳಿಗೆ ಸಿಕ್ತ್ಸ್ ಸೆನ್ಸ್ ಇದೆಯೇ..? ಎಂಬ ವಿಷಯದ ಬಗ್ಗೆ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ನಾಯಿಗಳು ನಮ್ಮ ಬೇಸರವನ್ನು ಕಳೆದು ಖುಷಿಯನ್ನು ನೀಡುವುದಲ್ಲದೇ, ನಮ್ಮ ಮರಣವನ್ನು ಕೂಡ ಕಂಡುಹಿಡಿಯುತ್ತವೆ ಎಂದಿದ್ದಾರೆ. ಮೂತ್ರಾಶಯ ಕ್ಯಾನ್ಸರ್ ಅನ್ನು ನಾಯಿಗಳು ಮೊದಲೇ ಕಂಡು ಹಿಡಿದವಂತೆ. ಮನುಷ್ಯನ ಮೂತ್ರದ ವಾಸನೆ ನೋಡುವ ಮೂಲಕ ಈ ಕ್ಯಾನ್ಸರ್ ಲಕ್ಷಣಗಳು ಆ ವ್ಯಕ್ತಿಯಲ್ಲಿ ಇವೆ ಎಂದು ನಾಯಿಗಳು ಗುರ್ತಿಸಿವೆಯೆಂದು ಎಂದು ತಿಳಿಸಿದ್ದಾರೆ. ಯಾರಾದರೂ ತೀವ್ರವಾದ ಅನಾರೋಗ್ಯಕ್ಕೆ ಗುರಿಯಾಗುವ ವಿಷಯವನ್ನು ಸಹ ಕಂಡುಹಿಡಿಯುತ್ತವೆ ಎಂದಿದ್ದಾರೆ. ಆದರೆ ನಾಯಿಗಳಿಗೆ ಸಿಕ್ತ್ಸ್ ಸೆನ್ಸ್ ಇದೆಯೇ? ಇಲ್ಲವೇ? ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಇಲ್ಲಿಯವರೆಗೆ ಇಲ್ಲ ಎಂದು ಹೇಳುತ್ತಿದ್ದ ತಜ್ಞರು ಇದರ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ನಾಯಿಗಳು ನಿದ್ದೆ ಮಾಡುವಾಗ ಸಹ ಮನುಷ್ಯರ ಬಗ್ಗೆ ಕನಸು ಕಾಣುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ. ನಿದ್ದೆ ಮಾಡುತ್ತಿರುವ ನಾಯಿ ಕಣ್ಣುಗಳನ್ನು ಅಲುಗಾಡಿಸುತ್ತಿದ್ದರೆ ಅದು ಕನಸು ಕಾಣುತ್ತಿದೆ ಎಂದರ್ಥ. ವ್ಯಕ್ತಿಯ ಜೊತೆ ಆ ದಿ‌ನ ನಡೆದ ಸಂಘಟನೆಗಳು, ತನ್ನ ಅನುಭವಗಳನ್ನು ನಾಯಿ ಕನಸು ಕಾಣುತ್ತದೆ. ಮನೆಯಲ್ಲಿನ ವ್ಯಕ್ತಿಗಳು, ತನ್ನ ಸುತ್ತಮುತ್ತಲಿನ ವ್ಯಕ್ತಿಗಳನ್ನು ಅದು ನಿದ್ದೆಯ ಸಮಯದಲ್ಲಿ ನೆನಪಿಸಿಕೊಳ್ಳುತ್ತದೆಯಂತೆ. ಕನಸು ಕಾಣುವಾಗ ಅದು ತನ್ನ ಯಜಮಾನನ ಮುಖವನ್ನು ಸ್ಪಷ್ಟವಾಗಿ ಊಹಿಸಿಕೊಳ್ಳಬಲ್ಲದೆಂದು, ಯಜಮಾನನ ಬಗ್ಗೆ ಕನಸು ಕಾಣುತ್ತದೆ ಎಂದು ಹಾರ್ವರ್ಡ್ ಮೆಡಿಕಲ್ ಸೈಕಾಲಜಿಸ್ಟ್ Dr.Deirdre Barrett ಹೇಳಿದ್ದಾರೆ.


Click Here To Download Kannada AP2TG App From PlayStore!

Share this post

scroll to top