ಇನ್ನು ಮುಂದೆ ರಾತ್ರಿಯಷ್ಟೇ ಅಲ್ಲ…ಹಗಲು ಸಹ ಬೈಕ್ ಲೈಟ್ಸ್ ಆನ್ ಮಾಡಬೇಕು…ಯಾಕೆ ಗೊತ್ತಾ..?

ನಾವು ದ್ವಿಚಕ್ರವಾಹನದಲ್ಲಿ ಹೊರಡುತ್ತಿರಬೇಕಾದರೆ ಹಗಲಲ್ಲಿ ಮರೆತು ಲೈಟ್ ಹಾಕಿಕೊಂಡು ಹೋಗುತ್ತಿದ್ದೇವೆ ಎಂದರೆ..! ಕೂಡಲೆ ನಮಗೆ ಎದುರಾಗಿ ಬರುವವರು ಲೈಟ್ ಹಾಕಿದ್ದೀರಾ ಎಂದು ಸಂಜ್ಞೆ ಕೊಡುತ್ತಾರೆ. ಈ ರೀತಿಯ ಸಂದರ್ಭ ದ್ವಿಚಕ್ರ ವಾಹನ ಓಡಿಸುವವರಿಗೆ ಹೊಸದಲ್ಲ. ಆದರೆ ಏಪ್ರಿಲ್ 1ರಿಂದ ಹಗಲು ವೇಳೆ ಲೈಟ್ ಹಾಕಿಕೊಂಡು ಗಾಡಿ ಓಡಿಸಬೇಕಂತೆ.. ಇದೇನಿದು ಎಂದು ಶಾಕ್ ಆದಿರಾ? ವಿವರಗಳನ್ನು ನೋಡೋಣ ಬನ್ನಿ.

ಆಟೋಮೆಟಿಕ್ ಹೆಡ್ ಲ್ಯಾಂಪ್ ಆನ್ (ಎಎಚ್ಓ):
ಈ ವರ್ಷ ಏಪ್ರಿಲ್ 1ರಿಂದ ಖರೀದಿಸುವ ಬೈಕ್‌ಗಳಲ್ಲಿ ’ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ (ಎಎಚ್ಓ)’ ತಂತ್ರಜ್ಞಾನವನ್ನು ಕಡ್ಡಾಯಗೊಳಿಸುತ್ತಾ ಕೇಂದ್ರ ಸಾರಿಗೆ ಸಚಿವಾಲಯ ನಿರ್ಣಯ ತೆಗೆದುಕೊಂಡಿದೆ. ಆದರೆ ಹಳೆ ವಾಹನಗಳಿಗೆ ಈ ಹೊಸ ವಿಧಾನ ಅನ್ವಯವಾಗುವುದಿಲ್ಲ. ಇನ್ನು ಮುಂದೆ ಮಾರುಕಟ್ಟೆಗೆ ಬರುವ ಹೊಸ ವಾಹಗಳು “ಲೈಟ್ ಆನ್/ಆಫ್” ಸ್ವಿಚ್ ಇರುವುದಿಲ್ಲ. ಇಂಜಿನ್ ಆನ್ ಆದ ಕೂಡಲೆ ಲೈಟ್ ಆನ್ ಆಗುತ್ತದೆ. ಇಂಜಿನ್ ಆಫ್ ಮಾಡಿದರೆ ಲೈಟ್ ಸಹ ಆಫ್ ಆಗುತ್ತದೆ.

ಹೀಗೆ ಮಾಡಲು ಕಾರಣ:
ಕಾರು, ಬಸ್ಸು, ಲಾರಿ…ಹೀಗೆ ಭಾರಿ ವಾಹಗಳು ಎದುರಿಗೆ ಬರುವ ದ್ವಿಚಕ್ರ ವಾಹನಗಳು ಕಾಣಿಸದೆ ಇರುವ ಕಾರಣ ಅದೆಷ್ಟೋ ಅಪಘಾತಗಳು ಆಗುತ್ತಿವೆ..ಒಂದು ವರ್ಷದಲ್ಲಿ ಈ ಕಾರಣಕ್ಕೆ 30000 ಅಪಘಾತಗಳು ನಡೆದಿವೆ ಎಂದರೆ… ಈ ವಿಷಯವನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಏರ್ಪಾಟು ಮಾಡಿದ ಸಮಿತಿ ಜಗತ್ತಿನಾದ್ಯಂತ ಜಾರಿಯಲ್ಲಿರುವ ಈ ಹೊಸ ವಿಧಾನವನ್ನು ನಮ್ಮ ದೇಶದಲ್ಲೂ ಸಹ ಜಾರಿ ಮಾಡಬೇಕೆಂದು ಸೂಚಿಸಿದೆ. ಯೂರೋಪ್, ಮಲೇಷಿಯಾದಂತಹ ಬಹಳಷ್ಟು ದೇಶಗಳಲ್ಲಿ 2003ರಿಂದ ಈ ವಿಧಾನ ಜಾರಿಯಲ್ಲಿದೆ.

ಹಗಲು ಹೊತ್ತಿನಲ್ಲೂ ಲೈಟ್ ಉರಿಯುವುದರಿಂದ ಬ್ಯಾಟರಿ ಶೀಘ್ರ ಮುಗಿಯುತ್ತದೆಯೇ?:
ಈಗ ಇರುವ ದ್ವಿಚಕ್ರ ವಾಹನಗಳ ಲೈಟ್ ಬ್ಯಾಟರಿ ಸಹಾಯದಿಂದ ಉರಿಯುತ್ತದೆ. ಆದರೆ ಹಗಲು ಸಹ ಲೈಟ್ ಆನ್ ಮಾಡುವುದರಿಂದ ಬ್ಯಾಟರಿ ಶೀಘ್ರವಾಗಿ ಖಾಲಿಯಾಗುತ್ತದೆ ಎಂದು ವಾಹನ ಸವಾರರು ಭಾವಿಸುತ್ತಿದ್ದಾರೆ. ಆದರೆ ಹೊಸದಾಗಿ ತಯಾರಾಗುವ ವಾಹನಗಳಲ್ಲಿ ಎಎಚ್ಓ ತಂತ್ರಜ್ಞಾನ ಇರುವುದರಿಂದ ಬ್ಯಾಟರಿ ಸಂಬಂಧ ಇಲ್ಲದಂತೆ ನೇರವಾಗಿ ಪೆಟ್ರೋಲ್ ಸಹಾಯದಿಂದ ದೀಪ ಉರಿಯಲಿದೆಯಂತೆ..

ಏನೆ ಇರಲಿ ನಮಗಿಷ್ಟ ಇರಲಿ ಬಿಡಲಿ…ಏಪ್ರಿಲ್ 1ರಿಂದ ಬರಲಿರುವ ವಾಹನಗಳಿಗೆ ಲೈಟ್ ಆನ್/ಆಫ್ ಇರುವುದಿಲ್ಲ. ಈಗಾಗಲೆ ಈ ತಂತ್ರಜ್ಞಾನದಿಂದ ವಾಹಗಳನ್ನು ತಯಾರಿಸಲಾಗಿದೆ. ಅಪಘಾತಗಳನ್ನು ತಡೆಗಟ್ಟುವ ಕ್ರಮಕ್ಕೆ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆಗಳು ಸಂತಸ ವ್ಯಕ್ತಪಡಿಸಿವೆ.


Click Here To Download Kannada AP2TG App From PlayStore!