ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಲೋನ್, ಸಬ್ಸಿಡಿಯಿಂದ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಿ ಹೀಗೆ…

ಮೋದಿ ಸರ್ಕಾರ ದೊಡ್ಡ ನೋಟು ರದ್ದು ಮಾಡಿದ ಮೇಲೆ ಬ್ಯಾಂಕುಗಳಿಗೆ ಸೇರಿದ 15 ಲಕ್ಷ ಕೋಟಿಗಳಲ್ಲಿ ಹೆಚ್ಚಿನ ಭಾಗದ ಹಣವನ್ನು ಮನೆ ಕಟ್ಟಿಸಿಕೊಳ್ಳುವವರಿಗೆ ಸರ್ಕಾರ ಸಾಲವಾಗಿ ನೀಡಲಿದೆ. ಇದಕ್ಕಾಗಿ ಸರ್ಕಾರ 50 ಪೈಸೆಕ್ಕಿಂತ ಕಡಿಮೆ ಬಡ್ಡಿ ವಿಧಿಸಲಿದ್ದಾರೆ. ಈ ಬಗ್ಗೆ ಫೆಬ್ರವರಿ ಒಂದರಂದು ಅಧಿಕೃತ ಘೋಷಣೆ ಹೊರಬರಲಿದೆ. ಇದರಿಂದ ದೇಶದಲ್ಲಿ 4-5 ಕೋಟಿಯ ಸಾಮಾನ್ಯ ಜನರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಡುವ ಗುರಿ ಹೊಂದಿದೆ. ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಯಲ್ಲಿದೆ. ಅದರ ಮೂಲಕ 2 ಲಕ್ಷದವರೆಗೂ ಬಡ್ಡಿ ಮೇಲೆ ಗರಿಷ್ಠ ಸಬ್ಸಿಡಿ ಸಹ ಬರುತ್ತದೆ. ಈಗ ಲೋನ್ ತೆಗೆದುಕೊಂಡು ಮನೆ ಕಟ್ಟಿಸಿಕೊಂಡ ಅಥವಾ ಕೊಂಡುಕೊಂಡರೂ ನಾಳೆ ಸರ್ಕಾರ ಪ್ರಕಟಿಸುವ ಬಡ್ಡಿ ರಿಯಾಯಿತಿ ಅನ್ವಯಿಸುತ್ತದೆ ಎಂದು ಈಗಾಗಲೇ ರಿಯಲ್ ಎಸ್ಟೇಟ್ ಹೇಳುತ್ತಿವೆ. ಇಷ್ಟಕ್ಕೂ ಬ್ಯಾಂಕ್ ಲೋನ್, ಕೇಂದ್ರ ಸರ್ಕಾರದ ಸಬ್ಸಿಡಿಯಲ್ಲಿ ಸ್ವಂತ ಮನೆಯ ಕನಸನ್ನು ಸಾಕಾರ ಮಾಡಿಕೊಳ್ಳಲು ಏನು ಮಾಡಬೇಕೆಂದರೆ…

  • ಸಾಮಾನ್ಯವಾಗಿ ಮನೆ ಕಟ್ಟಿಸಲು ಹತ್ತು ಲಕ್ಷ ಆಗುತ್ತೆ ಎಂದರೆ ಕನಿಷ್ಠ ನಾಲ್ಕು ಲಕ್ಷವಾದರೂ ಕೈಯಲ್ಲಿರಬೇಕು. ಉಳಿದ ಆರು ಲಕ್ಷವನ್ನು ಲೋನ್ ತೆಗೆದುಕೊಳ್ಳಬಹುದು. ಈಗ ಜಾರಿಯಲ್ಲಿರುವ 9% ರಷ್ಟು ಬಡ್ಡಿದರದ (ಒಂದು ತಿಂಗಳ ನಂತರ ಇದು ಕಡಿಮೆ ಯಾಗುತ್ತದೆ) ಪ್ರಕಾರ ಇಎಂಐ 6,085 ರೂಪಾಯಿ ಸಲ್ಲಿಸಬೇಕಾಗುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಬಡ್ಡಿಯ ಮೇಲೆ ಗರಿಷ್ಟ 2 ಲಕ್ಷ 20 ಸಾವಿರ ಸಬ್ಸಿಡಿ ದೊರೆಯುತ್ತದೆ.
  • ಉದಾಹರಣೆಗೆ ನೀವು ರೂ.6 ಲಕ್ಷ ಸಾಲ ತೆಗೆದುಕೊಂಡರೆ… ಸಬ್ಸಿಡಿ ಮೊತ್ತವನ್ನು ಬಿಟ್ಟು ಉಳಿದ 3 లಕ್ಷ 80 ಸಾಲಕ್ಕೆ ಬ್ಯಾಂಕ್ ನಿಯಮಗಳ ಪ್ರಕಾರ ಮಾಸಿಕ ಪಾವತಿಗಳನ್ನು ಮಾಡಬೇಕಾಗುತ್ತದೆ. ಹೀಗೆ ಇಎಂಐ ಸುಮಾರು ಎರಡು ಸಾವಿರ ಕಡಿಮೆಯಾಗುತ್ತದೆ. ಆರು ಲಕ್ಷದೊಳಗೆ ವಾರ್ಷಿಕ ಆದಾಯ ಇರುವವರು ಈ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಳ್ಳಬಹುದು.
  • ಕೈಯಲ್ಲಿ ನಾಲ್ಕು ಲಕ್ಷ ಇಲ್ಲ. ಕೇವಲ ಎರಡು ಲಕ್ಷ ಮಾತ್ರ ಇದೆ. ಆದರೆ, ಮನೆ ಕಟ್ಟಲು ಹತ್ತು ಲಕ್ಷ ಬೇಕು. ಇಂತಹ ಪರಿಸ್ಥಿತಿಯಲ್ಲಿ ಕೂಡ ಬ್ಯಾಂಕುಗಳು ಲೋನ್ ನೀಡುತ್ತವೆ.
  • ಅವಶ್ಯಕತೆ ಇದ್ದರೆ ಬ್ಯಾಂಕುಗಳು 8 ಲಕ್ಷ ರೂಪಾಯಿಯನ್ನು ಸಾಲ ನೀಡುತ್ತವೆ. ಕೇಂದ್ರ ಕೊಡವ ಬಡ್ಡಿಯ ಸಬ್ಸಿಡಿ ಮಾತ್ರ ಆರು ಲಕ್ಷದವರೆಗೂ ಅನ್ವಯಿಸುತ್ತದೆ. ಉಳಿದ ಎರಡು ಲಕ್ಷಕ್ಕೆ ಸಾಧಾರಣ ಗೃಹಸಾಲದ ಬಡ್ಡಿ
    ಕಟ್ಟಬೇಕಾಗುತ್ತದೆ.
  • ನೀವು 10 ಲಕ್ಷ ಸಾಲ ತೆಗೆದುಕೊಂಡರೆ 6 ಲಕ್ಷಕ್ಕೆ ಬಡ್ಡಿ ಸಬ್ಸಿಡಿ… ಉಳಿದ ರೂ.4 ಲಕ್ಷಗಳಿಗೆ ಸಾಧಾರಣ ಗೃಹ ಸಾಲ ಬಡ್ಡಿಯನ್ನು ಸಲ್ಲಿಸಬೇಕಾಗುತ್ತದೆ. ಆಗ ಇಎಂಐ ಹತ್ತು ಸಾವಿರ ರೂಪಾಯಿ ಬದಲು ಸಬ್ಸಿಡಿ ವಿನಾಯಿತಿ ಕಳೆದು ಎಂಟು ಸಾವಿರ ಕಟ್ಟಿದರೆ ಸಾಕು. ಹಾಗಾದರೆ, ಹತ್ತಿರದ ಬ್ಯಾಂಕ್’ಗೆ ಹೋಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಬಗ್ಗೆ ವಿಚಾರಿಸಿ…

Click Here To Download Kannada AP2TG App From PlayStore!