ನೀವು ಚಿಕನ್ ಪ್ರೀಯರೆ, ಹಾಗಿದ್ದರೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯವಿದು…!

ನಾನ್’ವೆಜ್ ಇಲ್ಲ ಅಂದರೆ ಒಂದು ತುತ್ತು ಅನ್ನ ಕೂಡ ತಿನ್ನಲಾಗದ ಜನರಿದ್ದಾರೆ. ಅಂತಹ ಜನರು ಈ ವಿಷಯವನ್ನು ತಿಳಿದುಕೊಳ್ಳದಿದ್ದರೆ ಅವರ ಆರೋಗ್ಯ ಕೈ ಕೊಡುವುದು ಗ್ಯಾರಂಟಿ. ಇದರಿಂದ ತಮ್ಮ ದೇಹವನ್ನು ಅಪಾಯಕ್ಕೆ ದೂಡಿದ ಹಾಗೆ… ಇತ್ತೀಚಿಗೆ ಕಡಿಮೆ ಸಮಯದಲ್ಲಿ ಕೋಳಿಯನ್ನು ಬೆಳೆಸಿ ಅತೀ ಲಾಭವನ್ನು ಪಡೆಯುವುದಕ್ಕಾಗಿ ಕೋಳಿಗಳಿಗೆ ಇಂಜೆಕ್ಷನ್ ಕೊಡುವುದು ತಿಳಿದಿದ್ದೆ.

ಕೋಳಿಯ ತೂಕ, ಬೆಳವಣಿಗಾಗಿ ಉಪಯೋಗಿಸುವ ಸ್ಟೆರಾಯಿಡ್ ನಮ್ಮ ಆರೋಗ್ಯವನ್ನು ತೀವ್ರವಾಗಿ ಹಾಳು ಮಾಡುತ್ತದೆ. ತಕ್ಷಣ ಅದರ ಪರಿಣಾಮ ತಿಳಿಯದಿದ್ದರೂ, ದೀರ್ಘಕಾಲದಲ್ಲಿ ಆರೋಗ್ಯವನ್ನು ತೀವ್ರವಾದ ಅಪಾಯಕ್ಕೆ ಒಡ್ಡಿದ ಹಾಗೆಯೇ…! ಕೋಳಿಯ ತೂಕ ಹಾಗೂ ಬೆಳವಣಿಗೆಗಾಗಿ ಸ್ಟೆರಾಯಿಡ್ಸ್ ಅನ್ನು ಕೋಳಿಯ ಕುತ್ತಿಗೆಗೆ ಹಾಗೂ ರೆಕ್ಕೆಗಳಿಗೆ ಕೊಡುತ್ತಾರೆ. ಕೋಳಿಯ ಶರೀರದ ಉಳಿದ ಭಾಗಗಳಿಗಿಂತ ಈ ಎರಡು ಭಾಗಗಳು ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿರುವ ತಜ್ಞರ ಪ್ರಕಾರ ಕೊನೆಯಪಕ್ಷ ಕೋಳಿಯ ಆ ಎರಡು ಭಾಗವನ್ನಾದರೂ ತಿನ್ನದಿರುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಸ್ಟೆರಾಯಿಡ್” ಪ್ರಭಾವ ಜಾಸ್ತಿ ಇರುವ ಚಿಕೆನ್ ತಿಂದರೆ ಆಗುವ ನಷ್ಟಗಳು ಈ ಕೆಳಗಿನಂತಿವೆ…..

  •  ಶರೀರದ ಗುಣಗಳನ್ನು ಕ್ರಮಬದ್ಧವಾಗಿ ನಡೆಸುವ ಹಾರ್ಮೋನ್ ಬಿಡುಗಡೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಈ ಅಸಹಜವಾದ ಕ್ರಿಯೆ ಅನಾರೋಗ್ಯಕ್ಕೆ ನಾಂದಿಯಾಗುತ್ತದೆ.
  •  ಎದೆಯನ್ನು ಅನಾರೋಗ್ಯಕ್ಕೆ ಗುರಿ ಮಾಡುವಂತಹ ಸೂಕ್ಷ್ಮ ಕ್ರಿಮಿಗಳು ಹೆಚ್ಚಾಗುತ್ತವೆ. ಅದು ಕ್ಯಾನ್ಸರ್’ಗೆ ಕಾರಣವಾಗುವ ಸಾಧ್ಯತೆ ಇದೆ.
  • ಹೊಟ್ಟೆಯಲ್ಲಿ ಗಡ್ಡೆಗಳು ಬೆಳೆಯುತ್ತವೆ. ಇದು ಕ್ಯಾನ್ಸರ್ ಆಗಿಯೂ ಕೂಡ ಬದಲಾಗುವ ಸಾಧ್ಯತೆಗಳಿವೆ.
  • ಮಹಿಳೆಯರಿಗೆ ಗರ್ಭಾಶಯದ ಸಮಸ್ಯೆ ಎದುರಾಗುತ್ತದೆ.

ಇಂಜೆಕ್ಷನ್ ಪ್ರಭಾವ ತೀವ್ರವಾಗಿ ಇರುವ ಕೋಳಿಯ ಕುತ್ತಿಗೆ ಮತ್ತು ರೆಕ್ಕೆಯ ಭಾಗಗಳನ್ನು ತಿನ್ನುವವರಿಗೆ ದೀರ್ಘಕಾಲದಲ್ಲಿ ಈ ಸಮಸ್ಯೆ ಅನಿವಾರ್ಯ. ಇಷ್ಟು ತಿಳಿದ ಮೇಲೂ ಸಹ ಚಿಕೆನ್ ಪ್ರೀಯರು ಆಗಿದ್ದರೆ ಇಂದಿನಿಂದಲ್ಲೇ ತಿನ್ನೋದನ್ನ ಬಿಡುವುದು ಸಾಧ್ಯವಿಲ್ಲ… ಹಾಗಂತ ಬಾಯ್ಲರ್ ಕೋಳಿಯ ಬದಲಾಗಿ ನಾಟಿ ಕೋಳಿಯನ್ನು ತಿನ್ನೋಣವೆಂದರೆ ಸಿಗುವುದು ಕಷ್ಟ. ಹಾಗಾಗಿ ಆ ಎರಡು ಪಾರ್ಟ್’ಗಳನ್ನು ಬಿಟ್ಟು ತಿನ್ನುವುದು ಒಳ್ಳೆಯದು.


Click Here To Download Kannada AP2TG App From PlayStore!

Share this post

scroll to top