ನೀವು ಪೆಟ್ರೋಲ್ ಬಂಕ್ ಗೆ ಹೋದರೆ ಇದನ್ನು ಗಮನಿಸಿ. ಇಲ್ಲವಾದರೆ ನಷ್ಟ ನಿಮಗೇ?

ಪ್ರತಿ ವರ್ಷವೂ ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಇಂಧನದ ಬೆಲೆಗಳು ಗಗನಮುಖಿಯಾಗುತ್ತಿವೆ. ಹಲವು  ಮಾಲಿಕರು ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಪೆಟ್ರೋಲ್ ಬಂಕ್’ಗೆ ಬರುವ ಗ್ರಾಹಕರನ್ನು ಮೋಸಗೊಳಿಸಿ ಹಣ ಗಳಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ ಗಳಲ್ಲಿ ಹೇಗೆ ಮೋಸಮಾಡುತ್ತಾರೆಂದು ತಿಳಿದುಕೊಳ್ಳೋಣ.

ಪೆಟ್ರೋಲ್ ತುಂಬುವವರು, ಪೈಪಿನ ತುದಿಯನ್ನು ಯಾವಾಗಲೂ ತಮ್ಮ ಕೈಗಳಲ್ಲೇ ಹಿಡಿದುಕೊಂಡಿರುವುದನ್ನು ನೀವೆಲ್ಲರೂ ನೋಡಿರುತ್ತೀರ.ಹೀಗೆ ಮಾಡುವವರ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ. ಯಾಕೆಂದರೆ ಅವರು ಪೆಟ್ರೋಲನ್ನು ಟ್ಯಾಂಕಿಗೆ ಒಂದೇ ಸಮನೆ ಸರಾಗವಾಗಿ ಹರಿಯಲು ಬಿಡದೆ, ಮಧ್ಯೆ ಮಧ್ಯೆ ಅಡಚಣೆ ಉಂಟುಮಾಡುತ್ತಿರುತ್ತಾರೆ. ಹೀಗಾಗಿ ಟ್ಯಾಂಕಿಗೆ ಕಡಿಮೆ ಪ್ರಮಾಣದ ಪೆಟ್ರೋಲ್ ಪೂರೈಕೆಯಾಗುತ್ತದೆ. ಆದರೆ, ಸ್ಕ್ರೀನ್ ನಲ್ಲಿ ಮಾತ್ರಪೂರ್ಣ ಪ್ರಮಾಣದ ಪೆಟ್ರೋಲ್ ತುಂಬಿದ ಹಾಗೆ ತೋರಿಸುತ್ತದೆ.

ಸಾಮಾನ್ಯವಾಗಿ ಇಂಧನ ತುಂಬುವ ಪೈಪಿನ ತುದಿ ಉದ್ದವಾಗಿದ್ದು ಸ್ವಲ್ಪ ಬಾಗಿರುತ್ತದೆ. ಇಂಧನ ಪೂರ್ತಿ ತುಂಬುವ ಮೊದಲೇ ಪೈಪನ್ನು ಟ್ಯಾಂಕ್ ನಿಂದ ಹೊರತೆಗೆದು ಸ್ವಲ್ಪ ಮೇಲೆತ್ತುತ್ತಾರೆ. ಆಗ ಸ್ವಲ್ಪ ಇಂಧನ ಪೈಪಿನ ತುದಿಯಲ್ಲೇ ಉಳಿದಿರುತ್ತದೆ. ಉಳಿದಿರುವ ಇಂಧನಕ್ಕೂ ನಾವು ಹಣ ಪಾವತಿಸಿರುತ್ತೇವೆ.

ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರನ್ನು ಮೋಸಗೊಳಿಸುವ ಇನ್ನೊಂದು ತಂತ್ರವಿದೆ,ಇಂಧನ ತುಂಬುವಾಗ ನಮ್ಮನ್ನು ಮಾತಿಗೆಳೆದು ನಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಇದರಿಂದಾಗಿ ಅವರು ತುಂಬಿದ ಇಂಧನದ ಪರಿಮಾಣವನ್ನು ನಾವು ಗಮನಿಸದೆ ಹೋಗುತ್ತೇವೆ. ಇದರಿಂದಲೂ ನಾವು ಮೋಸ ಹೋಗಬಹುದು. ಮತ್ತೊಂದು ತಂತ್ರಗಾರಿಯೆಂದರೆ, ಒಂದು ವೇಳೆ ನಾವು 1000 ರೂಪಾಯಿಯ ಇಂಧನ ತುಂಬಲು ಹೇಳಿದರೆ,ಆಗ ಕೇವಲ 200 ರೂ ಇಂಧನ ತುಂಬಿ,ಎಷ್ಟು ಎಂದು ಕೇಳುತ್ತಾರೆ,ಆಗ ಮೀಟರನ್ನು 0 ಗೆ ಸೆಟ್ ಮಾಡದೆ, 800ಕ್ಕೆ ನಿಲ್ಲಿಸಿಬಿಡುತ್ತಾರೆ. ಇದರಿಂದಾಗಿ, ಮೊದಲಿಗೆ ರೂ.200 ನಂತರ ರೂ.800 ಕ್ಕೆ ತುಂಬಿದ್ದಾರೆಂದು ತಿಳಿದು ರೂ.1000 ಪಾವತಿಸುತ್ತೇವೆ. ಇದರಿಂದಾಗಿನಮಗೆ ರೂ.200 ನಷ್ಟವುಂಟಾಗುತ್ತದೆ. ಹೀಗೆ ಪೆಟ್ರೋಲ್ ಬಂಕ್ ಗಳಲ್ಲಿ ಹಲವು ರೀತಿಗಳಲ್ಲಿ ನಾವು ಮೋಸಹೋಗುತ್ತೇವೆ.

ಈಗ ಕೊನೆಯ ತಂತ್ರಗಾರಿಕೆಯ ಬಗ್ಗೆ ತಿಳಿದುಕೊಳ್ಳಿ. ನೀವು ರೂ.500 ಇಂಧನ ತುಂಬಲು ಹೇಳಿದಾಗ ಸೇಲ್ಸ್ ಮ್ಯಾನ್ ಮೀಟರಲ್ಲಿ ಸರಿಯಾಗಿ ರೂ.500 ನಮೂದಿಸುತ್ತಾನೆ. ಮಧ್ಯೆ ನಮ್ಮ ಗಮನ ಬೇರೆಡೆ ಸೆಳೆದು ಮೀಟರ್ ರೀಡಿಂಗ್ ಅನ್ನು 500 ಗೆ ಬದಲಾಯಿಸುತ್ತಾನೆ.ಕೊನೆಗೆ ನಾವು ಆ 500ನ್ನು ನೋಡಿ ,ರೂ.500 ಪಾವತಿಸುತ್ತೇವೆ. ಆದರೆ ಅಷ್ಟು ಹಣದ ಇಂಧನ ಟ್ಯಾಂಕಿಗೆ ತುಂಬಿರುವುದಿಲ್ಲ. ಯಾಕೆಂದರೆ, ರೂ.500 ಎಂದು ಎಂಟರ್ ಮಾಡಿದ್ದರೆ, ಸ್ಕ್ರೀನ್ ನಿಶ್ಚಲವಾಗಿರುತ್ತದೆ. ಹಾಗೆ ಮಾಡದೆ ಕೇವಲ 500 ಎಂದು ಎಂಟರ್ ಮಾಡಿದ್ದರೆ ಸ್ಕ್ರೀನ್ ಮಿನುಗುತ್ತಿರುತ್ತದೆ (Blink ಆಗುತ್ತಿರುತ್ತದೆ) ಆಗ ಮೋಸವಾಗಿದೆಯೆಂದು ತಿಳಿಯಬೇಕು.


Click Here To Download Kannada AP2TG App From PlayStore!

Share this post

scroll to top