ಪುರಾಣ ಕಾಲದಲ್ಲೇ, ಅಣುಬಾಂಬುಗಳಿದ್ದವಂತೆ..? ಸಾಕ್ಷಿ ಇಲ್ಲಿದೆ ನೋಡಿ…!

ಅತ್ಯಂತ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಮಿಸೈಲ್… ಶಕ್ತಿಯುತವಾದ ಅಣುಬಾಂಬುಗಳು… ಶಕ್ತಿಯುತವಾದ ಬಂದೂಕುಗಳು… ಮೆಷಿನ್’ಗನ್’ಗಳು… ಯುದ್ದಟ್ಯಾಂಕರ್ ಗಳು… ಇವೆಲ್ಲವು ಈಗ ಆಯಾ ದೇಶಗಳಿಗೆ ಸೇರಿದ ಆರ್ಮಿಯವರು ಬಳುಸುತ್ತಿರುವ ಆಯುಧಗಳಾಗಿವೆ. ಆದರೆ ಒಂದಾನೊಂದು ಕಾಲದಲ್ಲಿ, ಅಂದರೆ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿರುವ ಆಯುಧಗಳೇ ಬೇರೆ… ಬಾಣಗಳು, ಭರ್ಜಿಗಳು, ಕತ್ತಿಗಳು, ಮುಂತಾದವು ಇದ್ದವು. ಇವುಗಳಲ್ಲದೆ ಕುದುರೆಗಳು, ರಥಗಳು, ಆನೆಗಳ ಮೇಲೆ ಬಂದು ಸೈನಿಕರು ಯುದ್ದ ಮಾಡುತ್ತಿದ್ದರು. ಆದರೆ ಆಯಾ ಯುಗದಲ್ಲಿ ನಡೆದ ರಾಮ -ರಾವಣ ಯುದ್ದ , ಮಹಾಭಾರತ ಯುದ್ದಗಳಂತಹ ಪುರಾಣ ಇತಿಹಾಸಗಳಿಗೆ ಸೇರಿದ ಯುದ್ದಗಳಲ್ಲಿಯು ಅಣುಬಾಂಬ್ ಗಳು ಇದ್ದವಂತೆ…! ಆ ಕಾಲದಲ್ಲಿ ಅವುಗಳನ್ನು ಉಪಯೋಗಿಸಿಕೊಂಡಿದ್ದರೆಂದು ಕೆಲವು ಪುರಾಣ ಗ್ರಂಥಗಳ ಮೂಲಕ ತಿಳಿದುಬರುತ್ತದೆ.!

ಸೂರ್ಯನ ಶಕ್ತಿ ಎಂತಹುದೋ ಗೊತ್ತಿದೆಯಲ್ವಾ…! ಅಷ್ಟಕ್ಕೆ10 ಸಾವಿರ ಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿರುವ ಒಂದು ಕಾಂತಿ, ಪ್ರಜೆಗಳೆಲ್ಲರನ್ನೂ ಬೂದಿಯಂತೆ ಬದಲಾಯಿಸಿದೆ”.

“ಮಣ್ಣಿನಿಂದ ತಯಾರಿಸಿದ ಒಂದು ಪಾತ್ರೆಯಲ್ಲಿ, ತಾಮ್ರ, ಕಬ್ಬಿಣ, ಜಿಂಕ್ ಗಳಂತಹ ಲೋಹಗಳ ಚೂರುಗಳನ್ನು ನಿರ್ಧಿಷ್ಟವಾದ ಪ್ರಮಾಣದಲ್ಲಿರಿಸಿ, ಅದರಲ್ಲಿ ಮಿತ್ರ, ವರುಣ( ಕ್ಯಾಥೋಡ್, ಆನೋಡ್)ಗಳನ್ನು ಜೋಡಿಸಿ, ನೀರು ಹರಿಯುವಂತೆ ಮಾಡಿದರೆ ಆಕ್ಸಿಜನ್, ಹೈಡ್ರೋಜನ್, ಹೊರಬರುತ್ತವೆ”.

ಮೇಲಿನ ಎರಡು ಸಾಲುಗಳನ್ನು ನಾವು ಊಹೆ ಮಾಡಿಕೊಂಡು ಹೇಳುತ್ತಿರುವುದಲ್ಲ. ಇವುಗಳ ಬಗ್ಗೆ ಪುರಾಣಗಳಲ್ಲಿದೆ. ಅವುಗಳನ್ನು ಆಧರಿಸಿ ಮೇಲೆ ಹೇಳಿದ ಸಾಲಿಗೆ ಈಗಿನ ಅಣುಬಾಂಬ್ ಎಂಬ ಅರ್ಥ ಬರುತ್ತದೆ. ಅಷ್ಟೇ ಅಲ್ಲ. ಕೆಳಗಿನ ಲೈನ್’ಗೆ ಎಲೆಕ್ಟ್ರಿಕ್ ಬ್ಯಾಟರಿಗಳು ಎಂಬ ಅರ್ಥ ಬರುತ್ತದೆ. ಅಂದರೆ ಪುರಾಣ ಕಾಲದಲ್ಲಿಯೂ ಅಣುಬಾಂಬ್ ಗಳಿದ್ದವು. ಎಂಬುದಕ್ಕೆ ಸಾಕ್ಷಿಯಾಗಿವೆ. ಎಂದು ಕೆಲವರು ಇತಿಹಾಸಕಾರರು ಹೇಳುತ್ತಿದ್ದಾರೆ. ಇದಲ್ಲದೆ ಒಂದು ಸಂಧರ್ಭದಲ್ಲಿ, ರಾಮಾಯಣದಲ್ಲಿ ರಾಮ-ಲಕ್ಷ್ಮಣರು, ಮಹಾಭಾರತದಲ್ಲಿ ಅರ್ಜುನಂತಹವರು, ಬಿಟ್ಟಂತಹ ನಾರಾಯಣ ಅಸ್ತ್ರ, ಪಾಶುಪತಾಸ್ತ್ರ, ಪರ್ಜನ್ಯ ಅಸ್ತ್ರ, ಅಗ್ನಿ ಅಸ್ತ್ರ, ಬ್ರಹ್ಮಾಸ್ತ್ರಗಳಂತಹವುಗಳು ಎಲ್ಲಕ್ಕಿಂತ ಅಧಿಕ ಶಕ್ತಿಯನ್ನು ಹೊಂದಿವೆ. ಇದರಿಂದ ಆಗಿನ ಕಾಲದಲ್ಲಿ ಅವುಗಳನ್ನೇ, ಇಂದಿನವರೆಲ್ಲ ಅಣುಬಾಂಬುಗಳಂತೆ ಉಪಯೋಗಿಸುತ್ತಿದ್ದಾರಂತೆ. ಏಕೆಂದರೆ ಅವು ಬಿಡುಗಡೆ ಮಾಡುವ ಶಕ್ತಿಯು ಅಷ್ಟೊಂದು ಇತ್ತು ಎಂದು ಹೇಳಲಾಗುತ್ತಿದೆ. ಇದರ ಆಧಾರವಾಗಿ ನೋಡಿದರೆ, ಪುರಾಣ ಕಾಲದಲ್ಲಿ ಅಣುಬಾಂಬ್’ಗಳು ಇದ್ದವೆಂದು ಕೆಲವು ಪಂಡಿತರು ವಿಶ್ಲೇಷಿಸಿದ್ದಾರೆ.


Click Here To Download Kannada AP2TG App From PlayStore!

Share this post

scroll to top