ಒಬ್ಬ ವ್ಯಕ್ತಿ ಎಷ್ಟು ಬಂಗಾರವನ್ನು ಇಟ್ಟುಕೊಳ್ಳಬಹುದೆಂದು ತಿಳಿದುಕೊಳ್ಳಿ…!

ದೊಡ್ಡ ನೋಟಿನಂತೆ ಬಂಗಾರದ ಮೇಲೂ ಸರ್ಜಿಕಲ್ ಸ್ಟ್ರೈಕ್ಸ್ ನಡೆಯುತ್ತಿದೆ ಎಂದು ಗಾಳಿಸುದ್ದಿ ಹರಿದಾಡುತ್ತದೆ. ಆಗಾಗಿ ಈ ಪುಟ್ಟ ಮಾಹಿತಿ. ಪ್ರಪಂಚದ ಇತಿಹಾಸದಲ್ಲಿ ಬಂಗಾರದ ಮೇಲೆ ಅನೇಕ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಕೊನೆಯ ಸರ್ಜಿಕಲ್ ಸ್ಟ್ರೈಕ್ಸ್ ಅಮೆರಿಕಾ ಮಾಡಿದೆ. ಎಪ್ಪತ್ತರ ದಶಕದಲ್ಲಿ. ಅದರ ಪ್ರಭಾವ ಎಲ್ಲಾ ದೇಶಗಳ ಮೇಲಾಯಿತು.. ಆಗ ಅಮೆರಿಕದ ಪ್ರೆಸಿಡೆಂಟ್ ಆಗಿ ನಿಕ್ಸನ್ ಇದ್ದರು. ಅಮೇರಿಕದ ಸರ್ಜಿಕಲ್ ಸ್ಟ್ರೈಕ್ ಪ್ರಭಾವದಿಂದ ಬಂಗಾರದ ಬೆಲೆಗಳ ಮೇಲೆ ಪ್ರಭಾವ ಬೀರಿತು. ಪ್ರಪಂಚ ದೇಶಗಳ ಆರ್ಥಿಕತೆಯ ಮೇಲೆ ಬೀರಿತು . ಆದರೆ ಬಂಗಾರದ ‘ನಿಜವಾದ ಮೌಲ್ಯ’ದ ಮೇಲೆ ಅಲ್ಲ‌. ಈಗ ಮೋದಿ ಸರ್ಕಾರ.. ಒಂದುವೇಳೆ ಬಂಗಾರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಪ್ರಕಟಿಸಿದರೆ ಏನಾಗುತ್ತದೆ…? ಬಿಲ್(ರಸೀದಿ)ಗಳು ತೋರಿಸಿ ಎಂದು ಬಂಗಾರವನ್ನೇಲ್ಲ, ಕೊರಳಿನಲ್ಲಿರುವ ಮಂಗಳ ಸೂತ್ರವನ್ನು ಸಹ ಐಟಿಯವರು ತೆಗೆದುಕೊಂಡು ಸಹ ತೆಗೆದು ಹೋಗುತ್ತಾರೆ..? ಎಂದು ತುಂಬಾ ಜನ ಭಯಗೊಂಡಿರುವುದು ಸುಳ್ಳಲ್ಲ.

ಪ್ರಸ್ತುತ ಜಾರಿಯಲ್ಲಿರುವ ಕಾನೂನಿನಲ್ಲಿ ಏನಿದೆ ಎಂದು ಸಂಕ್ಷಿಪ್ತವಾಗಿ ಹೇಳುತ್ತೇನೆ. ಭ್ರಷ್ಟಾಚಾರದಿಂದ, ಮತ್ತ್ಯಾವುದೋ ರೂಪದಲ್ಲಿ ಸಂಗ್ರಹಿಸಿದ ಆಕ್ರಮ ಆಸ್ತಿಯನ್ನು ಏಸಿಬಿ, ಐಟಿ ಅಧಿಕಾರಿಗಳು ದಾಳಿ ಮಾಡಿದಾಗ… ಇಷ್ಟು ಕೋಟಿ ಹಣ, ಇಷ್ಟು ಕೆಜಿ ಬಂಗಾರ ಸಿಕ್ಕಿದೆಯೆಂದು ಸ್ವಾಧೀನ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತದೆ. ಎಲ್ಲಾ ಹಣ, ಬಂಗಾರವನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡರೂ… ಅದರಲ್ಲಿನ ಸ್ವಲ್ಪ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅವಕಾಶವಿದೆ. ಸೆಕ್ಷನ್ 132(4) ಪ್ರಕಾರ ವಿವಾಹಿತರಿಗೆ 500 ಗ್ರಾಂ ವರೆಗೆ ವಿನಾಯತಿ ಇದೆ. ಅವಿವಾಹಿತರಿಗೆ 250 ಗ್ರಾಂ ಬಂಗಾರವನ್ನು ಇಟ್ಟುಕೊಳ್ಳಲು ಅವಕಾಶವಿದೆ. ಹೀಗೆ ಉಳಿದ ಕುಟುಂಬದ ಸದಸ್ಯರ ವಿಷಯದಲ್ಲಿ ಸಹ.

ತವರು ಮನೆಯಿಂದ, ಬಹುಮಾನವಾಗಿ, ಮತ್ತೊಂದು ವಿಧದಲ್ಲಿ ಪಡೆದ ಬಂಗಾರಕ್ಕೆ ದಾಖಲೆ ಪತ್ರಗಳನ್ನು ಇಟ್ಟು ಕೊಳ್ಳುವುದು ಒಳ್ಳೆಯದು. ಬಹುಮಾನವಾಗಿ ಪಡೆದ ಬಂಗಾರವನ್ನು ಮಾರಾಟ ಮಾಡುವಾಗ ಮಾತ್ರ ಬಹುಮಾನ ಪಡೆಯುವಾಗಿನ ಬೆಲೆ, ಈಗಿನ ಬೆಲೆಯ ವ್ಯತ್ಯಾಸಕ್ಕೆ ತೆರಿಗೆ ಕಟ್ಟುವಂತಹ ನಿಬಂಧನೆಗಳಿವೆ.


Click Here To Download Kannada AP2TG App From PlayStore!

Share this post

scroll to top