ಮೊದಲ ರಾತ್ರಿಯಲ್ಲಿ ನಮ್ಮ ಭಾರತೀಯರು ಮಾಡುವ 10 ತಿಕ್ಕಲು ಕೆಲಸಗಳು!

ಫಸ್ಟ್ ನೈಟ್… ಈ ಹೆಸರು ಕೇಳುತ್ತಿದ್ದಂತೆ ಯುವಕರು ಕರಗಿ ನೀರಾಗುತ್ತಾರೆ. ಇನ್ನು ಹುಡುಗಿಯರೂ ಅಷ್ಟೇ ನಾಚಿ ನೀರಾಗುತ್ತಾರೆ. ಪಸ್ಟ್ ನೈಟ್ ಬಗ್ಗೆ ಏನೇನೋ ಕನಸು ಕಾಣುತ್ತಾ ಊಹಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮದುವೆ ಎಲ್ಲಾ ಮುಗಿದು ಫಸ್ಟ್ ನೈಟ್ ಬರುವ ವೇಳೆಗೆ ಏನೋ ಒಂಥರಾ ಆತಂಕ, ಭಯ ಕಾಡಲು ಶುರುವಾಗುತ್ತದೆ. ಇನ್ನು ಮೊದಲ ರಾತ್ರಿಗೆ ದಂಪತಿಗಳಿಬ್ಬರನ್ನೂ ಕಳುಹಿಸಿದ ಮೇಲೆ ಏನೆಲ್ಲಾ ಮಾಡುತ್ತಾರೆ ಎಂದರೆ…

ಬಹಳಷ್ಟು ಮಂದಿ ಮೊದಲ ರಾತ್ರಿಯಂದು ಚೆನ್ನಾಗಿ ಗೊರಕೆ ಹೊಡೆದು ನಿದ್ದೆ ಮಾಡುತ್ತಾರೆ. ಯಾಕೆಂದರೆ ಮದುವೆ ಎಂದರೆ ನಾನಾ ಆಚರಣೆ ಸಂಪ್ರದಾಯ ಅದೂ ಇದೂ ಎಂದು ಮೂರು ದಿನ ಸರಿಯಾಗಿ ನಿದ್ದೆ ಇಲ್ಲದಂತೆ ಮಾಡಿರುತ್ತಾರೆ. ಅವರಿಗೆ ಸ್ವಲ್ಪ ಸಮಯ ಸಿಕ್ಕಿದರೂ ಸಾಕು ಹಾಯಾಗಿ ಮಲಗೋಣ ಎಂದುಕೊಳ್ಳುವವರೇ ಅಧಿಕ.

ಸೆಕ್ಸಿ ಟಾಕ್ಸ್.. ಸ್ವಲ್ಪ ಸುಸ್ತಾಗಿದ್ದರೂ ಸಹ ಮೊದಲ ರಾತ್ರಿಯನ್ನು ವ್ಯರ್ಥ ಮಾಡಬಾರದೆಂದುಕೊಳ್ಳುವವರೂ ಇರುತ್ತಾರೆ ಅಲ್ಲವೇ. ರೊಮ್ಯಾಂಟಿಕ್ ಮೂಡ್ ಇಲ್ಲದಿದ್ದರೂ ಸ್ವಲ್ಪ ಮಾತನಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮದುವೆಗೂ ಮುನ್ನ ಹೇಗೂ ಫ್ರೀಯಾಗಿ ಮಾತನಾಡಿಕೊಳ್ಳಲು ಸಾಧ್ಯವಾಗಿರಲ್ಲ. ಇನ್ನು ಮಾತಿನಲ್ಲಿ ರೊಮ್ಯಾನ್ಸ್ ಆರಂಭವಾಗಿ ಸ್ವಲ್ಪ ಹಾಗೆಯೇ ಮುಂದುವರೆಯುತ್ತದೆ.

ಹನಿಮೂನ್ ಪ್ಲಾನಿಂಗ್… ಹನಿಮೂನ್‌ಗೆ ಎಲ್ಲಿಗೆ ಹೋಗಬೇಕು… ಮದುವೆ ನಿಶ್ಚಯವಾದ ಬಳಿಕ ಹನಿಮೂನ್‌ಗೆ ಎಲ್ಲಿಗೆ ಹೋಗಬೇಕು ಎಂಬ ಪ್ಲಾನ್ ಆರಂಭಿಸುತ್ತಾರೆ. ಯಾವಾಗ ನೋಡಿದರೂ ಹನಿಮೂನ್ ಧ್ಯಾನದಲ್ಲೇ ಇರುತ್ತಾರೆ. ಹನಿಮೂನ್ ಬಗ್ಗೆ ಮಾತನಾಡಿಕೊಳ್ಳಲು ಮೊದಲ ರಾತ್ರಿಗಿಂತ ರೊಮ್ಯಾಂಟಿಕ್ ಟೈಮ್ ಇನ್ಯಾವುದಿದೆ?

ಗಿಫ್ಟ್ಸ್…ಮದುವೆಯಾಗುತ್ತಿದೆ ಎಂಬ ಎಕ್ಸ್‌ಪರಿಮೆಂಟ್‌ಗಿಂತ ಯಾವ ರೀತಿಯ ಗಿಫ್ಟ್ಸ್ ಬರುತ್ತವೆ ಎಂಬ ಕುತೂಹಲ ಬಹಳಷ್ಟು ಮಂದಿಗೆ ಇರುತ್ತದೆ. ಪಾಪ ಗಿಫ್ಟ್ಸ್ ಹುಚ್ಚರು ಅವರು. ಅಸಲಿ ಕೆಲಸ ಬಿಟ್ಟು, ಅದನ್ನು ಪಕ್ಕಕ್ಕಿಟ್ಟು ಏನು ಗಿಫ್ಟ್ಸ್ ಬಂದವು ಎಂದು ಅವನ್ನು ಓಪನ್ ಮಾಡುತ್ತಾ ಕೂರುತ್ತಾರೆ.

ಸ್ನಾನ… ದಿನವೆಲ್ಲಾ ಸುಸ್ತಾದ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಸಿಗುವ ರಿಲ್ಯಾಕ್ಸ್ ಅನಿರ್ವಚನೀಯ ಅಲ್ಲವೇ… ನಮ್ಮ ಮದುವೆ ಸಂಪ್ರದಾಯದಲ್ಲಿ ಸಂಪೂರ್ಣವಾಗಿ ಸುಸ್ತಾದ ಜೋಡಿ ಸ್ನಾನ ಮಾಡಿಕೊಂಡರೆ ಸಾಕು ಎಂಬಂತಿರುತ್ತಾರೆ, ಇನ್ನು ರೊಮ್ಯಾಂಟಿ ಮೂಡ್ ಎಲ್ಲಿಂದ ಬಂತು.

ನಾದಿನಿ… ಹೆಂಡತಿಗೆ ತಂಗಿ ಇದ್ದರೆಂದರೆ ಸಾಕು ಇನ್ನು ಬಾವನಿಗೆ ಆಟ ಆಡಿಸುವುದೇ ಅವರ ಕೆಲಸ, ಮುಖ್ಯವಾಗಿ ಶೋಭನ ರಾತ್ರಿ ಮದುಮಗಳನ್ನು ರೂಮಿಗೆ ಕಳುಹಿಸುವಾಗ ಅವರು ಮಾಡುವ ಹುಡುಗಾಟ ಅಷ್ಟಿಷ್ಟಲ್ಲ.

ಕೆಲಸಕ್ಕೆ ಬಾರದ ಚರ್ಚೆ… ಮದುವೆ ಹೇಗೆಲ್ಲಾ ನಡೆಯಿತು, ಮದುವೆಗೆ ಯಾರೆಲ್ಲಾ ಬಂದರು, ಮದುವೆ ಊಟ ಹೇಗಿತ್ತು, ಸ್ವಲ್ಪ ಚಾನ್ಸ್ ಸಿಕ್ಕಿದರೆ ಸಾಕು ಗಂಟೆಗಟ್ಟಲೆ ಇದನ್ನೇ ಚರ್ಚಿಸುತ್ತಾ ಕಾಲಹರಣ ಮಾಡುತ್ತಾರೆ. ಅಸಲಿ ಕೆಲಸ ಬಿಟ್ಟು ಮದುವೆಗೆ ಅವರು ಬರಲಿಲ್ಲ, ಇವರು ಬರಲಿಲ್ಲ ಎಂದು ಇಲ್ಲಸಲ್ಲದ ಚರ್ಚೆಯಲ್ಲೇ ಮುಳುತ್ತಾರೆ.

ಡ್ರೆಸ್ ಬದಲಾಯಿಸುವುದು… ಇನ್ನು ಮದುವೆ ಡ್ರೆಸ್, ಒಡವೆ ಬದಲಾಯಿಸುವುದೆಂದರೆ ಅದಕ್ಕೆ ಏನಿಲ್ಲ ಎಂದರೂ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಕೆಲವರು ಈ ಕೆಲಸ ಮಾಡುವುದರಲ್ಲೇ ಮುಳುಗುತ್ತಾರೆ.

ಮದುವೆಗೆ ಬಂದ ಅತಿಥಿಗಳ ಪ್ರಾಂಕ್ಸ್.. ಕೆಲವು ಅತಿಥಿಗಳು ಸುಮ್ಮನೆ ಇರಲ್ಲ. ಗಂಡ ಹೆಂಡತಿಗೆ ಆ ಸಮಯದಲ್ಲೂ ಕರೆ ಮಾಡುವುದು, ಅವರು ಇರುವ ಕೋಣೆಯ ಬಾಗಿಲು ಬಡಿಯುವುದು, ಹೊರಗಡೆಯಿಂದ ಸೌಂಡ್ ಮಾಡುವಂಟಹ ಮಂದಿಗೂ ಕೊರತೆ ಇಲ್ಲ.

ಟೈಂ ಔಟ್… ಇಷ್ಟೆಲ್ಲಾ ಒದ್ದಾಟಗಳ ನಡುವೆ ಮುಖ್ಯ ಸಂಗತಿ ಆರಂಭವಾಗುವ ವೇಳೆಗೆ ಕೊಕ್ಕೋರೊಕ್ಕೋ ಎಂದು ಕೋಳಿ ಕೂಗುವುದು, ಅಲಾರಂ ಎಚ್ಚರಿಸುವುದು…. ಇದೇನಿದು ಆಗಲೇ ಬೆಳಕರಿಯಿತಾ ಎಂದು ತಲೆಮೇಲೆ ಕೈಹೊತ್ತಿ ಕೂರುವುದು ನಡೆಯುತ್ತದೆ. ಇದಕ್ಕಾಗಿ ಬೇಸರಿಸಿಕೊಳ್ಳದೆ, ಪ್ರತಿ ರಾತ್ರಿಯನ್ನೂ ಮೊದಲ ರಾತ್ರಿ ಮಾಡಿಕೊಂಡರೆ ದಂಪತಿಗಳು ಹಾಯಾಗಿ ಇರಬಹುದು.


Click Here To Download Kannada AP2TG App From PlayStore!