ರಜೆ ದಿನ ಹೆಂಡತಿ ತನ್ನ ಗಂಡನ ಜತೆಗೆ ಮಾತನಾಡಿದ ಈ ಮಾತುಗಳನ್ನು ಕೇಳಿದರೆ…

ರಜೆಯಲ್ಲಿ ಒಂದು ದಿನ ಹೆಂಡತಿ ತನ್ನ ಗಂಡನೊಂದಿಗೆ ಮಾತನಾಡುತ್ತಾ, “ನಾವು ಮಾತನಾಡಿಕೊಳ್ಳಬೇಕು! ನಿಮ್ಮ ಫೋನ್ ಸ್ವಿಚ್ ಆಫ್ ಮಾಡಿ!!” ಎಂದಳು.

“ಫೋನ್ ಇದ್ದರೆ ಏನಾಗುತ್ತದೆ?”

ಏನೂ ಆಗಲ್ಲ ಅದಕ್ಕೆ ಮೊದಲು ಫೋನ್ ಸ್ವಿಚ್ ಆಫ್ ಮಾಡಿ.

“ಸರಿ ಹೇಳು !! ಏನು ಮಾತನಾಡಬೇಕು?” ಎಂದು ಫೋನ್ ಸ್ವಿಚ್ ಆಫ್ ಮಾಡುತ್ತಾ ಕೇಳಿದ ಗಂಡ..

“ನೀವು ತುಂಬ ಬದಲಾಗಿದ್ದೀರ!”

“ನಮ್ಮ ಮದುವೆ ನಿಶ್ಚಿತಾರ್ಥದಿಂದ ಹಿಡಿದು ಮದುವೆ ವರೆಗೆ ಹೇಗಿದ್ದಿರಿ?”

“ಆಗ ಗಂಟೆಗಂಟೆಗೆ ಮೆಸೇಜ್‌ಗಳು ಅಥವಾ ಫೋನ್!”

ಎದ್ದ ಬಳಿಕ ಮೊದಲ ಮಾತು ನಿಮ್ಮೊಂದಿಗೆ…

ಮಲಗುವ ಮೊದಲು ಕೊನೆಯ ಮಾತು ನಿಮ್ಮೊಂದಿಗೆ…ಮೊದಲ ಕೊನೆಯ ಮಾತುಗಳ ನಡುವೆ ದಿನಪೂರ್ತಿ ನಿಮ್ಮ ಆಲೋಚನೆಯಲ್ಲೇ ಎನ್ನುತ್ತಿದ್ದಿರಿ… ಹಾಗೆಯೇ ಇದ್ದಿರಿ”

“ಮದುವೆಯಾದ ವರ್ಷದವರೆಗೆ ಹೇಗಿದ್ದಿರಿ?”

“ನಿಮ್ಮ ಕಣ್ಣಲ್ಲಿ, ನಡತೆಯಲ್ಲಿ ಎಷ್ಟು ಪ್ರೀತಿ ಕಾಣುತ್ತಿತ್ತು.. ಪ್ರೀತಿಯಿಂದ ನೋಡುತ್ತಿದ್ದ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ ಹಾಗೆಯೇ ಮೈಮರೆಯುತ್ತಿದ್ದೆ. ಅಂದಿನ ನೋಟಗಳು ನೆನಪಾದಾಗ ಮನಸ್ಸೆಲ್ಲಾ ಉಲ್ಲಾಸವಾಗಿರುತ್ತಿತ್ತು”

“ಈಗ ಹೇಗಿದ್ದೀರಿ?”

“ನಿಮ್ಮ ಪ್ರೀತಿಯಲ್ಲಾ ಎಲ್ಲಿ ಹೋಯಿತು? ಆ ರೀತಿಯ ನೋಟ ಎಲ್ಲಿ?”

“ಯಾವುದೋ ಒಂದು ಗೋಡೆಯನ್ನೋ..ವಸ್ತುವನ್ನೋ ನೋಡಿದಂತಿದ್ದರೆ ಆ ನೋಟ ನನಗೆ ಇಷ್ಟವಾಗುತ್ತಿಲ್ಲ!!”

“ನೀವ್ಯಾಕೆ ಬದಲಾದಿರಿ? ನನಗೆ ಕಾರಣ ಗೊತ್ತಾಗಬೇಕು!!”

“ನನ್ನಿಂದ ಏನಾದರೂ ತಪ್ಪಾಗಿದೆಯೇ? ಹೇಳಿ…ಆ ರೀತಿ ಏನಾದರೂ ಆಗಿದ್ದರೆ ಬದಲಾಯಿಸಿಕೊಳ್ಳುತ್ತೇನೆ” ಎಂದಳು ಪತ್ನಿ.

ಛೇ..ಹಾಗೇನು ಇಲ್ಲ

ಅದೆಲ್ಲಾ ಸಹಜವಾಗಿ ನಡೆಯುವುದೇ! ಎಂದ ಗಂಡ.

“ಅದೇ ಹೇಗೆ ನಡೆಯುತ್ತದೆ. ನನಗ್ಯಾಕೆ ಆ ರೀತಿ ಆಗಲಿಲ್ಲ! ಹೋಗಲಿ ನಿಮ್ಮ ಕಡೆ ನೋಡಿದರೂ ಆಗಲೂ ಫೋನಲ್ಲೇ ಕಳೆಯುತ್ತಿದ್ದೀರಿ…ಈಗಲೂ ಫೋನ್‌ನಲ್ಲೇ ಕಳೆಯುತ್ತಿದ್ದೀರಿ..ಇನ್ನು ಹೆಚ್ಚಾಗಿ!!”

“ಅಂದರೆ ನಾನು ಫೋನ್ ಜತೆಗೆ ಮಾತನಾಡ್ಲಾ” ಎಂದು ಕೇಳಿದಳು ಪತ್ನಿ.

ಅಯ್ಯೋ ಪ್ಲೀಸ್ ಅಪಾರ್ಥ ಮಾಡಿಕೊಳ್ಳಬೇಡ ಅದೆಲ್ಲಾ ಸಹಜವಾಗಿ ನಡೆಯುತ್ತದೆಂದು ನಾನು ವಿದ್ಯಾರ್ಥಿಯಾಗಿದ್ದಾಗ ರೆಂಟ್‌ಗೆ ಇದ್ದ ನಮ್ಮ ಮನೆಯ ಓನರ್ ಅಂಕಲ್ ಸಹ ಹೇಳುತ್ತಿದ್ದ. ಆತ ಒಂದು ಉದಾಹರಣೆಯನ್ನೂ ಕೊಡುತ್ತಿದ್ದ ಅದನ್ನು ಕೇಳಿದರೆ ನೀನು ಸಹ ಕರೆಕ್ಟ್ ಅಂತೀಯ” ಎಂದ ಗಂಡ.

ಸರಿ ಹಾಗಿದ್ದರೆ ಆ ಉದಾಹರಣೆ ಏನು ಅಂತ ಹೇಳಿ ಎಂದು ಕೇಳಿದಳು.

ಆತ ನಗುತ್ತಾ..
“ಉದಾಹರಣೆಗೆ…

ನಿಮಗೆ ಚಿನ್ನದ ಆಭರಣಗಳ ಮೇಲೆ ಆಕರ್ಷಣೆ ಇರುತ್ತದೆ. ಮಾಡಿಸಿಕೊಳ್ಳುವವರೆಗೂ ಸಹ ಮಾಡಿಸಿಕೊಂಡ ಬಳಿಕವೂ…

ಹೊಸದರಲ್ಲಿ ಫ್ರೆಂಡ್ಸ್‌ಗೆ… ಬಂಧುಗಳಿಗೂ.. ಅಪರೂಪವಾಗಿ ತೋರಿಸುತ್ತಾ ಆನಂದಪಡುತ್ತಿರುತ್ತೀಯ
ಬಳಿಕ ಬೀರು ಒಳಗಿನ ಲಾಕರ್‌ನಲ್ಲಿ ಎತ್ತಿಡುತ್ತೀಯ.
ನಿತ್ಯ ಮದುವೆ ನೋಡುತ್ತಿರುತ್ತಾರಾ?
ಹಾಗೆಂದು ಅವುಗಳ ಬಗ್ಗೆ ನಿರ್ಲಕ್ಷ್ಯ ಇದೆ ಎಂದರ್ಥವೆ??
ವಸ್ತು ದೂರವಾಗುತ್ತಿದ್ದಾಗ ಆಕರ್ಷಣೆ
ನಮ್ಮದೇ ಆದಬಳಿಕ ಆಕರ್ಷಣೆ ಸ್ಥಾನದಲ್ಲಿ.. ಒಂದು ಕೊರತೆ ತುಂಬಿದ ತೃಪ್ತಿ.. ನಂಬಿಕೆ ಅಷ್ಟೇ ಎಂದ

ಅವರ ಈ ವಾದ ಕೇಳಿದ ಬಳಿಕ ಒಮ್ಮೆಲೆ ಸ್ಟನ್ ಆದಳು ಬಳಿಕ ಸ್ವಲ್ಪ ಹೊತ್ತಿನ ವರೆಗೂ ನಗುತ್ತಲೇ ಇದ್ದಳು ಪತ್ನಿ..

ಹಾಗೇಕೆ ನಗುತ್ತಿದ್ದಾಳೋ ಅರ್ಥವಾಗದೆ ಆತ ಅಚ್ಚರಿಯಿಂದ ನೋಡಿಕೊಂಡಿದ್ದು ಬಿಟ್ಟ

ಸ್ವಲ್ಪ ಹೊತ್ತಿನ ಬಳಿಕ ಆಕೆ ಈ ರೀತಿ ಹೇಳಿದಳು

“ತುಂಬಾ ಥ್ಯಾಂಕ್ಸ್ ರೀ ನನ್ನನ್ನು ಒಂದು ಕಲ್ಲಿಗೋ ಗೋಡೆಗೋ ಅಲ್ಲದೆ ಚಿನ್ನದ ಆಭರಣಗಳಿಗೆ ಹೋಲಿಸಿದ್ದಕ್ಕೆ

ನಿಮ್ಮ ಅಂಕಲ್‌ಗೆ ಒಂದು ನಮಸ್ಕಾರ

ಆದರೆ ಮನುಷ್ಯರೆಂದರೆ ಜೀವ ಇಲ್ಲದ ವಸ್ತುಗಳಲ್ಲ

ನಮಗೆ ತುಂಬಾ ಇಷ್ಟವಾದ ಒಂದು ಗಿಡವನ್ನು ತಂದು ನಾಲ್ಕು ದಿನ ಉಬ್ಬಿಹೋಗಿ ಬಳಿಕ ಬೀರು ಲಾಕರ್‌ನಲ್ಲಿ ಇಟ್ಟು ನೋಡಿ

ಕ್ರಮೇಣ ಒಣಗಿ ನಿರ್ಜೀವವಾಗುತ್ತದೆ

ಅದನ್ನು ನಿತ್ಯ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.. ನೀರು ಹಾಕಬೇಕು.. ಶಕ್ತಿಗಾಗಿ ಗೊಬ್ಬರ ಹಾಕಬೇಕು.. ಅಗತ್ಯ ಬಿದ್ದರೆ ಬೇಲಿ ಸಹ ಹಾಕಬೇಕು

ಆಗಲೇ ಅದು ದೊಡ್ಡದಾಗಿ… ಫಲಿಸಿ.. ಸುಗಂಧ ಪರಿಮಳದಿಂದ ನಿನ್ನನ್ನು ಆಕರ್ಷಿಸುತ್ತದೆ

ಮನುಷ್ಯರ ಪ್ರೀತಿ ಅನುಬಂಧವೂ ಅಷ್ಟೇ

ನಿಜ ಹೇಳಬೇಕೆಂದರೆ… ನಮ್ಮ ಮದುವೆವರೆಗೂ ನನಗೆ ನಿಮ್ಮ ಮೇಲೆ ಇದ್ದದ್ದು ಕೇವಲ ಆಕರ್ಷಣೆ ಮಾತ್ರ.. ಯಾವಾಗ ಮದುವೆಯಾದ ಬಳಿಕ ನನ್ನ ಸರ್ವಸ್ವವನ್ನೂ ನಿನಗೆ ಅರ್ಪಿಸಿದೆನೋ ಪ್ರೀತಿಸಲು ಆರಂಭಿಸಿದೆ..

ಈಗಲೂ ಕೂಡ ನೀವೇಗೆ ಇದ್ದರೂ ನಾನು ಪ್ರೀತಿಸುತ್ತಲೇ ಇರುತ್ತೇನೆ… ಆದರೆ ಸಜೀವವಾದ ನಿಮ್ಮ ನೋಟಕ್ಕೆ ಹೊಂದಿಕೊಂಡ ನಾನು ನಿನ್ನ ನಿರ್ಜೀವವಾದ ನೋಟವನ್ನು ನೋಡಲು ಆಗುತ್ತಿಲ್ಲ…

ಒಂದು ವಿಷಯ ನಿಜ ಹೇಳು ಕುಟುಂಬದ ಪರವಾಗಿ ನೋಡಿದಾಗ ನೀನು ಈಗ ಹ್ಯಾಪಿಯಾಗಿ ಇದ್ದೀಯಾ? ಆಗ

ಪತ್ನಿ ವಿಶ್ಲೇಷಣೆಯಿಂದ ಆಲೋಚನೆಗೆ ಬಿದ್ದ ಆತ ಆಗಲೇ ಹೇಳಿದ ಪ್ರಾ,ಮಾಣಿಕವಾಗಿ…

ನಿನ್ನಲ್ಲಿ ತುಂಬಾ ಇಷ್ಟವಾದ ವಿಷಯಗಳಲ್ಲಿ ಇದೂ ಸಹ ಒಂದು ನೀನು ಯಾವುದೇ ವಿಚಾರದಲ್ಲಾದರೂ ಕನ್ವಿನ್ಸ್ ಆದರೆ ಸಾಕು ಅದು ಖಚಿತವಾಗಿ ಪಾಲಿಸುತ್ತೀರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೀರ ಎಂದಳು ಪತ್ನಿ.

ನಿಜವಾಗಿ ತುಂಬಾ ತುಂಬಾ ಥ್ಯಾಂಕ್ಸ್

ಯಾರೇ ಆಗಲಿ ಕಷ್ಟವಾದ ಕೆಲಸಕ್ಕಿಂತ.. ಸುಲಭವಾಗಿ ಮಾಡುವ ಕೆಲಸಗಳಿಗೆ ಸಪೋರ್ಟ್ ಆಗಿ ಇರುವ ವಾದಕ್ಕೇ ಬೇಗ ಕನ್ವಿನ್ಸ್ ಆಗುತ್ತಾನೆ.

ಅಂಕಲ್ ವಾದದಿಂದ ಕನ್ವಿನ್ಸ್ ಆದ ನನಗೆ ಆ ಮಾತುಗಳು ಸಬ್ ಕಾನ್ಸಿಯಸ್ ಮೈಂಡ್ ನಿಂದ ಫಿಕ್ಸ್ ಆದವು…

“ನಿನ್ನ ಮಾತುಗಳಲ್ಲಿ ಇರುವ ನಿಜ ನನ್ನ ಹೃದಯಕ್ಕೆ ಕೂಡ ಗೊತ್ತಾಗುತ್ತದೆ…
ಇಂದು ನಮ್ಮ ನಡುವೆ ನಡೆದ ಸಂಭಾಷಣೆ ಒಂದು ವಿಷಯದಲ್ಲಷ್ಟೇ ಅಲ್ಲ.. ನನ್ನ ಜೀವನಕ್ಕೆ ಸಹ ಮುಖ್ಯವಾದದ್ದು… ಮನುಷ್ಯರ ಬಗ್ಗೆ ನನ್ನ ಅಟಿಟ್ಯೂಡ್‍ನ್ನು ಬದಲಾಯಿಸುವುದು….

ಜೀವ ಇಲ್ಲದ ವಸ್ತುಗಳಿಗೆ.. ಜೀವ ಇರುವ ಮನುಷ್ಯರಿಗೂ ನಡುವೆ ವ್ಯತ್ಯಾಸ ಸಹ ಅರ್ಥವಾಯಿತು

ಆ ಚಿನ್ನವನ್ನು ಬೀರು ಲಾಕಲ್‌ನಲ್ಲಿ ಬಂಧಿಸಬೇಕು
ಈ ಚಿನ್ನವನ್ನು ಹೃದಯದಲ್ಲಿ ಬಂಧಿಸಬೇಕು ಅಷ್ಟೇ ಅಲ್ಲವೇ
ತಾಳು ನಿನ್ನನ್ನು ಕ್ಷಣ ಕ್ಷಣ ನನ್ನ ನೋಡದಲ್ಲೇ ಚುಚ್ಚಿ ಚುಚ್ಚಿ ಸಾಯಿಸುತ್ತೇನೆ ನೋಡು
ಎಂದ ಆತ ಆಕೆಯ ಕಣ್ಣಲ್ಲಿ…ಇಷ್ಟವಾಗಿ… ಪ್ರೀತಿಯಿಂದ…ನೋಡುತ್ತಾ…ಮೈಮರೆಯುತ್ತಾನೆ.


Click Here To Download Kannada AP2TG App From PlayStore!