ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಫೇಲಾಗಿದ್ದಕ್ರಿಕೆಟಿಗ ಉಮೇಶ್ ಯಾದವ್‌ ಈಗ ಆರ್‌ಬಿಐ ಆಫೀಸರ್… ಸರಕಾರಿ ಉನ್ನತ ಹುದ್ದೆಯಲ್ಲಿರುವ ಕ್ರೀಡಾಕಾರರು

ತಮ್ಮ ಮಾಂತ್ರಿಕ ಬೌಲಿಂಗ್‍ನಿಂದ ಹಲವಾರು ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಭಾರತ ಕ್ರಿಕೆಟ್ ಆಟಗಾರ ಎಂದರೆ ಉಮೇಶ್ ಯಾದವ್. ಈ ಕ್ರೀಡಾಪಟು ಈಗ ಅವರ ತಂದೆಯವರ ಕನಸನ್ನು ನನಸು ಮಾಡಿದ್ದಾರೆ. ತನ್ನ ಮಗ ಸರಕಾರಿ ನೌಕರ ಆಗಬೇಕೆಂದು ಅವರ ತಂದೆ ಕನಸುಕಂಡಿದ್ದರಂತೆ. ಆಗಿನ್ನೂ ಉಮೇಶ್ ಯಾದವ್ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರಲಿಲ್ಲ. ಸರಕಾರಿ ಕೆಲಕ್ಕಾಗಿ ಪ್ರಯತ್ನಿಸುತ್ತಿದ್ದರು. ಒಮ್ಮೆ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯನ್ನೂ ಬರೆದು ವಿಫಲರಾಗಿದ್ದರು. ಈಗ…?

ಇದೀಗ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರ ತಂದೆಯವರ ಕನಸನ್ನು ನನಸು ಮಾಡಿದ ಸಂತಸ ಉಮೇಶ್ ಯಾದವ್ ಅವರದು. ಇನ್ನೂ 29ರ ಹರೆಯದ ಉಮೇಶ್ ಯಾದವ್ ಜುಲೈ 24 ರಿಂದ ಡ್ಯೂಟಿಗೆ ಹಾಜರಾಗಲಿದ್ದಾರೆ. ಕೇವಲ ಉಮೇಶ್ ಯಾದವ್ ಅವರಷ್ಟೇ ಅಲ್ಲ ಸರಕಾರಿ ಉದ್ಯೋಗದಲ್ಲಿರುವ ಹಲವಾರು ಕ್ರೀಡಾಪಟುಗಳಿದ್ದಾರೆ. ಅವರಂತೆ ಬಹಳಷ್ಟು ಮಂದಿ ಕ್ರೀಡಾಕಾರರು ಸರಕಾರಿ ಉದ್ಯೋಗಗಲ್ಲಿದ್ದಾರೆ. ಧೋನಿಯಿಂದ ಸಚಿನ್ ತೆಂಡೂಲ್ಕರ್ ವರೆಗೂ ಇದ್ದಾರೆ. ಯಾರು ಯಾವೆಲ್ಲ ಹುದ್ದೆಗಳಲ್ಲಿದ್ದಾರೆ ಎಂದು ನೋಡೋಣ ಬನ್ನಿ…

ಅಭಿನವ್ ಬಿಂದ್ರಾ (ಶೂಟರ್)
ಭಾರತದ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್

ವಿಜೇಂದ್ರ ಸಿಂಗ್ (ಬಾಕ್ಸರ್)
ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ

ಜೋಗಿಂಗರ್ ಶರ್ಮಾ (ಮಾಜಿ ಕ್ರಿಕೆಟರ್)
ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ

ಕಪಿಲ್ ದೇವ್ (ಮಾಜಿ ಕ್ರಿಕೆಟಿಗ)
ಭಾರತದ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್

ಮೇರಿ ಕೂಮ್ (ಮಹಿಳಾ ಬಾಕ್ಸರ್)
ಮಣಿಪುರದ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ

ಹರ್ಭಜನ್ ಸಿಂಗ್ (ಕ್ರಿಕೆಟಿಗ)
ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ

ಸಚಿನ್ ತೆಂಡೂಲ್ಕರ್ (ಮಾಜಿ ಕ್ರಿಕೆಟಿಗ)
ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್

ಎಂ ಎಸ್ ಧೋನಿ (ಕ್ರಿಕೆಟಿಗ)
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂ/ತ್ ಕರ್ನಲ್


Click Here To Download Kannada AP2TG App From PlayStore!