ಆ ಫೊಟೋ. . . ಆ ಹುಡುಗಿಯ ಜೀವನವನ್ನೇ ಬದಲಿಸಿತು.ಮಗುವನ್ನು ಹುಡುಕಿಕೊಂಡು ವಿದೇಶದಿಂದ ಬಂದರು.!!

ವಿದೇಶದಿಂದ ಭಾರತಕ್ಕೆ ಬಂದ ಡಿಕ್ ಸ್ಮಿತ್   ಒಂದು ದಿನ ರೈಲಿನಲ್ಲಿ  ಪ್ರಯಾಣಿಸುತ್ತಿರುವಾಗ ,ಫ್ಲೈ ಓವರ್ ಕೆಳಗೆ ವಾಸಿಸುತ್ತಿದ್ದ  ಕುಟುಂಬದಲ್ಲಿ ಸುಂದರವಾಗಿದ್ದ ಒಂದು ಸಣ್ಣ ಮಗುವಿನ ಫೋಟೊ ತೆಗೆದು ,ಅದನ್ನು ತನ್ನ ಫೇಸ್ ಬುಕ್ ಫ್ರೊಫೈಲ್ ಆಗಿಟ್ಟುಕೊಂಡ.ಫೇಸ್ ಬುಕ್ ನಲ್ಲಿ ಸ್ನೇಹಿತನಾಗಿದ್ದ ಕ್ರಿಸ್ ಬೇ ಇದನ್ನು ನೋಡಿ ,ಹೇಗಾದರೂ ಆ ಮಗುವಿಗೆ ಸಹಾಯ ಮಾಡ   ಬೇಕೆಂದುಕೊಂಡರು.ಒಡನೆಯೇ ತನ್ನ ಮಡದಿ ಜೆಸ್  ಒಟ್ಟಿಗೆ ಸಿಡ್ನಿ ಯಿಂದ ಭಾರತಕ್ಕೆ  ಹೊರಡುತ್ತಾರೆ.125 ಕೋಟಿ ಜನ ಸಂಖ್ಯೆಯುಳ್ಳ ಭಾರತದಲ್ಲಿ ,ಕೇವಲ ಒಂದು ಫೋಟೊವನ್ನು ಆಧಾರವಾಗಿಟ್ಟುಕೊಂಡು ಆ ಮಗುವನ್ನು ಪತ್ತೆಮಾಡುವುದು ಬಹಳ ಕಷ್ಟಕರವಾದ ಕೆಲಸ.ಆದರಲ್ಲೂ ಆ ಮಗುವಿನ ಫೋಟೊವನ್ನು  ಹಿಂಬದಿಯಿಂದ ಸೆರೆಹಿಡಿದಿದ್ದಾರೆ.ಅವರಿಗಿದ್ದ ಒಂದೇ ಒಂದು ಆಧಾರವೆಂದರೆ ಆ ಮಗುವಿನ ಕೈಯಲ್ಲಿದ್ದ ಗುಲಾಬಿ ಬಣ್ಣದ ಬಳೆಗಳು ಮಾತ್ರ.

ಹಾಗಾಗಿಯೇ ಬಾರತಕ್ಕೆ ಬಂದೊಡನೆಯೇ ಉದ್ಭವಿಸಬಹುದಾದ ಭಾಷೆಯ  ತೊಡಕುಗಳನ್ನು ನಿವಾರಿಸಿಕೊಳ್ಳಲು ಜಯತಿ ಎಂಬ ಭಾಷಾ ಅನುವಾದಕನನ್ನು  ನಿಯಮಿಸಿಕೊಂಡರು.ಆ ಒಂದು ಫೋಟೊ ಹಿಡಿದುಕೊಂಡು ಪ್ರತಿಯೊಬ್ಬರಲ್ಲೂ ವಿಚಾರಿಸಲು ಪ್ರಾರಂಭಿಸಿದರು.ಎಷ್ಟೇ ದಿನಗಳಾದರೂ ಆ ಮಗುವಿನ ಕುಟುಂಬವನ್ನು ಹುಡುಕುವುದೇ ಅವರ ಗುರಿ. ಬಹಳಷ್ಟು ಪ್ರಯತ್ನಗಳನಂತರ ಕೊನೆಗೆ ಅಲಹಾಬಾದ್ ನಲ್ಲಿರುವ ಪಾಲಿಟೆಕ್ನಿಕ್ (ಶಾಸ್ತ್ರಿ ಬ್ರಿಡ್ಜ್) ಬಳಿ ಆ ಹುಡುಗಿಯ ಕುಟುಂಬವಿರುವುದಾಗಿ ಪತ್ತೆ ಹಚ್ಚಿದರು.

ಆ ಕುಟುಂಬದವರಿಗೆ ಫೋಟೊ ತೋರಿಸಿ ಆ ಹುಡುಗಿಯನ್ನು ನೋಡಬೇಕೆಂದರು.ಕ್ರಿಸ್,ಜೆಸ್ರನ್ನು ನೋಡಿದ ಆ ಪುಟ್ಟ ಹುಡುಗಿ ಭಯದಿಂದ ತಾಯಿಯ ಹಿಂದೆ ಅಡಗಿಕೊಂಡಳು.ನಾವು ಬಂದದ್ದು ನಿನಗಾಗಿಯೇ,ನಿನ್ನನ್ನು ಚೆನ್ನಾಗಿ ಓದಿಸುತ್ತೇವೆ,ನಿನಗೆ ಬೇಕಾದ್ದನ್ನು ತೆಗೆದುಕೊಡುತ್ತೇವೆ ನಿನ್ನ ಹೆಸರೇನು ಎಂದವರು ಕೇಳಿದಾಗ ‘ದಿವ್ಯ ನಾಯಿ’ ಎಂದು ಮರೆಯಿಂದ ಉತ್ತರ ಕೊಟ್ಟಳು 8 ವರ್ಷದ ಆ ಪುಟ್ಟ ಮಗು.ನಾವು ನಿಮ್ಮ ಮಗುವಿಗೆ ವಿದ್ಯಾಭ್ಯಾಸ ಕೊಡಿಸಲು ಬಂದಿದ್ದೇವೆ.ಎಲ್ಲ ವೆಚ್ಚಗಳನ್ನೂ ನಾವೇ ಭರಿಸುತ್ತೇವೆ.ದಿವ್ಯಳನ್ನು ಚೆನ್ನಾಗಿ ಓದಿಸಿರೆಂದು, ಅವಳ ವಿದ್ಯಾಭ್ಯಾಸಕ್ಕೆ ಬೇಕಾಗುವಷ್ಟು ಹಣವನ್ನುಸ್ಥಳೀಯ ಬ್ಯಾಂಕಲ್ಲಿ ದಿವ್ಯಳ ಹೆಸರಲ್ಲಿ  ಪೋಷಕರಾಗಿ ಜಮೆಮಾಡಿದರು.ಪ್ರತೀ ತಿಂಗಳು ದಿವ್ಯ ಳ ವಿದ್ಯಾಭ್ಯಾಸಕ್ಕೆ  ಬೇಕಾಗುವ ಹಣವನ್ನು ಜಮೆ ಮಾಡುವುದಾಗಿ ಡಿಕ್ ಸ್ಮಿತ್ ಹೇಳಿದರು.ನಂತರ ಎಲ್ಲರೂ ಸೇರಿ ಆಟೋದಲ್ಲಿ ಶಾಪಿಂಗ್ ಗೆ ಹೋಗಿ,ಅಲ್ಲಿಂದ ಒಳ್ಳೆ ಹೋಟೆಲ್ ನಲ್ಲಿ ಒಳ್ಳೆಯ ಭೋಜನ ಮಾಡಿದರು.ಎಲ್ಲಿಯೋ ಇದ್ದ ನಮಗೆ,ಎಲ್ಲಿಂದಲೋ ಬಂದು ಈ ರೀತಿ ಸಹಾಯ ಮಾಡಿದ್ದಕ್ಕೆ ದಿವ್ಯ ತಂದೆ ತಾಯಿಯರುಕ್ರಿಸ್ಜೆಸ್,ಮತ್ತು ಡಿಕ್ ಸ್ಮಿತ್ ರವರಿಗೆ ಕೃತಜ್ಞತೆಗಳನ್ನು ತಿಳಿಸಿದರು

ನಮ್ಮ ಸುತ್ತಮುತ್ತಲಿರುವವರಿಗೆ ಸಹಾಹ ಮಾಡಬೇಕೆಂದರೇನೇ ಹಲವುಬಾರಿ ನಾವು ಯೋಚಿಸುತ್ತೇವೆ.ಹಾಗಿರುವಾಗ ಅವರಾರೋ ಎಲ್ಲಿಂದಲೋ ಬಂದು ಸಹಾಯ ಮಾಡಿದವರ ದೊಡ್ಡತನಕ್ಕೆ ತಲೆಬಾಗಲೇಬೇಕು


Click Here To Download Kannada AP2TG App From PlayStore!

Share this post

scroll to top