ಆನ್‌ಲೈನ್ ರಮ್ಮಿ ಆಡ್ತಿದ್ದೀರಾ? ದುಡ್ಡು ಕಳೆದುಕೊಂಡವರೇ ಜಾಸ್ತಿ, ಗೆದ್ದವರು ಯಾರೂ ಇಲ್ಲ…!

ಒಂದು ಕಾಲದಲ್ಲಿ ಮನೆ ಬಳಿ, ಪಕ್ಕದ್ಮನೆ, ಹೊಲ, ಮರಗಳ ಕೆಳಗೆ, ಕೆರೆ ಬಳಿ, ಇನ್ನೂ ಅನೇಕ ಪ್ರದೇಶಗಳಲ್ಲಿ ಆಡುತ್ತಿದ್ದರು. ಅದೇ ರೀ…ಇಸ್ಪೀಟು. ಆಟದಲ್ಲೇ ಮುಳುಗಿ ತೇಲುತ್ತಿದ್ದರು. ಬಹಳಷ್ಟು ಹಣ ಕಳೆದುಕೊಳ್ಳುತ್ತಿದ್ದರು. ಇದುವರೆಗೆ ಆ ಆಟದಲ್ಲಿ ಗೆದ್ದವರು, ಕೋಟಿಗಟ್ಟಲೆ ಅಲ್ಲದಿದ್ದರೂ ಲಕ್ಷಗಳು, ಸಾವಿರಗಳಲ್ಲಿ ಗಳಿಸಿದ ದಾಖಲೆಗಳೂ ಇಲ್ಲ. ಆದರೆ ತಂತ್ರಜ್ಞಾನ ಬದಲಾಯಿತು. ಅಂಗೈಯಲ್ಲೇ ಜಗತ್ತನ್ನು ತೋರಿಸುವ ತಾಂತ್ರಿಕ ಜ್ಞಾನ ಕೈಯಲ್ಲೇ ಬಂದು. ಒಂದೇ ಒಂದು ಟಚ್ ಮೂಲಕ ಜಗತ್ತನ್ನು ಸುತ್ತಿ ಬರುವ ಸ್ಮಾರ್ಟ್‍ಫೋನ್‌ಗಳು ಅಂಗೈಯಲ್ಲೇ ಸಿಗುತ್ತಿವೆ. ಇನ್ನೇನು…ಇಸ್ಪೀಟು ಪ್ರಿಯರ ಟ್ರೆಂಡ್ ಸಹ ಬದಲಾಯಿತು. ಇದೀಗ ಸ್ಮಾರ್ಟ್‌ಫೋನ್‌ನಲ್ಲೇ ಆನ್‌ಲೈನ್‌ನಲ್ಲೇ ಇಸ್ಪೀಟು ಆಡುತ್ತಿದ್ದಾರೆ. ಹಣ ಕಳೆದುಕೊಳ್ಳುತ್ತಿದ್ದಾರೆ.

ಏತನ್ಮಧ್ಯೆ ಆನ್‌ಲೈನ್ ರಮ್ಮಿ ಅಂತ ಬಹಳಷ್ಟು ವೆಬ್‍ಸೈಟ್‌ಗಳು ಬಂದಿವೆ. ಆಯಾ ಸೈಟ್‍ಗಳ ಆಪ್‌ಗಳು ಸಹ ಈಗ ಆಂಡ್ರಾಯ್ಡ್, ಐಫೋನ್‌ನಲ್ಲೂ ಲಭಿಸುತ್ತಿವೆ. ಇದರಿಂದ ಬಹಳಷ್ಟು ಮಂದಿ ಈ ಆನ್‌ಲೈನ್ ರಮ್ಮಿ ಆಡುತ್ತಿದ್ದಾರೆ. ಇವುಗಳಲ್ಲಿ ವಿಶೇಷತೆ ಏನೆಂದರೆ…ಆನ್‌ಲೈನ್‌ನಲ್ಲಿ ಯಾರ ಜೊತೆಗೆ ಬೇಕಾದರೂ ಈ ಆಟ ಆಡಬಹುದು. ಅವರು ನಮಗೆ ಗೊತ್ತಿರಬೇಕೆಂದಿಲ್ಲ. ಇನ್ನು ಗೊತ್ತಿರುವವರೆಲ್ಲಾ ಒಂದು ಗ್ರೂಪ್ ಆಗಿ ಇಸ್ಪೀಟು ಆಡುತ್ತಿದ್ದಾರೆ.

ಈ ರೀತಿ ಆಡುವುದರಿಂದ ಪೊಲೀಸರು ಹಿಡಿಯುತ್ತಾರೆಂಬ ಭಯ ಇರಲ್ಲ. ಅಷ್ಟೇ ಅಲ್ಲದೆ ಆ ರೀತಿಯ ಸೈಟ್‌ಗಳು ಲೀಗಲ್ ಎಂಬ ಪ್ರಚಾರವನ್ನೂ ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ಇಸ್ಪೀಟು ಪ್ರಿಯರು ಕಾರ್ಡ್‌ಗಳಿಂದ ಆಟ ಆಡುವುದನ್ನು ಬಿಟ್ಟು, ಆನ್‌ಲೈನ್‍ನಲ್ಲಿ ಆಡುತ್ತಿದ್ದಾರೆ. ಹಗಲು ರಾತ್ರಿ ವ್ಯತ್ಯಾಸ ಇಲ್ಲದಂತೆ, 24 ಗಂಟೆಯೂ ಈ ಆಪ್‌ಗಳಲ್ಲಿ, ಸೈಟ್‌ಗಳಲ್ಲಿ ಮುಳುಗೇಳುತ್ತಿದ್ದಾರೆ. ಸಾವಿರಾರು ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವುದೇ ಭಾಷೆ, ದೇಶದ ಹಂಗಿಲ್ಲ. ಎಲ್ಲ ಕಡೆಗೂ ಹಬ್ಬಿದೆ. ಈ ಸೈಟ್‌ಗಳಲ್ಲಿ ಹಣ ಕಳೆದುಕೊಂಡವೇ ಹೆಚ್ಚು, ಗೆದ್ದವರು ಯಾರೂ ಇಲ್ಲ. ಇದರ ಬಗ್ಗೆ ಸರಕಾರಗಳು ಏನು ಕ್ರಮಕೈಗೊಳ್ಳುತ್ತವೆ? ಕಾದುನೋಡಬೇಕಷ್ಟೇ..!

 


Click Here To Download Kannada AP2TG App From PlayStore!