ON/OFF (ಪವರ್ ಬಟನ್) ಸಿಂಬಲ್ ಹೀಗೆ ಯಾಕಿರುತ್ತದೆಂದು ಗೊತ್ತಾ ?

ಮೊಬೈಲ್ ಫೊನ್, ಟೀವಿ, ಲ್ಯಾಪ್ ಟಾಪ್ ವಾಷಿಂಗ್ ಮೆಷಿನ್… ಹೀಗೆ ಯಾವುದೇ ಉಪಕರಣವನ್ನು ನೋಡಿದರೂ ಅವುಗಳ ಪವರ್ ಬಟನ್ ಚಿನ್ಹೆ ಮಾತ್ರ ಹೀಗೆಯೇ ಇರುತ್ತದೆ. ಹೀಗೇ ಯಾಕೆ ಇರುತ್ತದೆ ಎನ್ನುವುದರ ಹಿಂದೆ ಒಂದು ಅರ್ಥಪೂರ್ಣವಾದ ಲಾಜಿಕ್ ಇದೆ.

ಈಗ ನಾವು ಆ ಲಾಜಿಕ್ ಏನೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಪ್ರತಿಯೊಂದು ಹೆಸರಿನ ಹಿಂದೆ, ಚಿನ್ಹೆಯ ಹಿಂದೆ ಒಂದು ಲಾಜಿಕ್ ಇರುತ್ತದೆ. ಅದನ್ನು ತಿಳಿದುಕೊಂಡ ನಂತರ ಇಷ್ಟೇನಾ ಎಂದೆನಿಸುತ್ತದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ON/OFF ಬಟನ್ ಮೇಲೆ ಈ ಚಿನ್ಹೆ ಯಾಕಿರುತ್ತದೆಂದು ತಿಳಿದಿರುವುದಿಲ್ಲ. ಈಗ ನಾವು ತಿಳಿದುಕೊಳ್ಳೋಣ.
ಬನ್ನಿ…ಮೊದಲಿಗೆ ಪವರ್ ಬಟನ್ ಚಿನ್ಹೆಯನ್ನು ಒಮ್ಮೆ ಕಣ್ತುಂಬಾ ನೋಡೋಣ.9uypb755hdri7elyosj0

ಈ ಚಿನ್ಹೆಯೇ ಅಲ್ಲವೇ ಎಲ್ಲಾ ಪವರ್ ಬಟನ್ ಗಳ ಮೇಲಿರುವುದು. ಇದೇ ರೀತಿ ಯಾಕಿರುತ್ತದೆಂದು ಈಗ ತಿಳಿಯೋಣ… ಮೇಲಿನ ಚಿನ್ಹೆಯನ್ನು ಒಮ್ಮೆ ಕೂಲಂಕುಷವಾಗಿ ಪರಿಶೀಲಿಸಿ. ಒಂದು ವೃತ್ತದೊಳಗೆ ಒಂದು ಗೆರೆಯನ್ನು ಸೇರಿಸಿದ ಹಾಗಿದೆಯಲ್ಲವೇ…? ಅವುಗಳನ್ನು ಬೇರೆ ಬೇರೆಯಾಗಿ ನೋಡಿದರೆ…O,I ಗಳಲ್ಲವೇ?tvwljel9dx8f1pyh9isg

ಈಗ ಇನ್ನೂ ಆಳವಾಗಿ ಪರಿಶೀಲಿಸೋಣ… ಅವು 1,0 ಗಳು… ಎರಡನೇ ಪ್ರಪಂಚ ಯುದ್ಧದ ಸಮಯದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಗಳು ತಮ್ಮ ವಿದ್ಯುತ್ ಉಪಕರಣಗಳಿಗೆ ಈ ಚಿನ್ಹೆಯನ್ನು ಸೂಚಿಸಿದರು. 1 ಹಾಗೂ 0 ಯನ್ನು ಒಟ್ಟು ಗೂಡಿಸಿ ಯಾಕೆ ಸೂಚಿಸಿದ್ದಾರೆಂದರೆ… ಕಂಪ್ಯೂಟರ್ ಬೈನರಿ ಕೋಡ್ ನಿಂದ ನಡೆಯುತ್ತದೆ. ಅಂದರೆ… ಪ್ರತಿಯೊಂದು ಪದವನ್ನೂ 0,1 ಗಳ ರೂಪದಲ್ಲಿ ಸೇವ್ ಮಾಡಿಕೊಳ್ಳುತ್ತದೆ. ಈ ತತ್ವದ ಆಧಾರದಲ್ಲೇ ಲಾಜಿಕ್ ಗೇಟ್ ಗಳು ತಯಾರಿ ನಡೆಯುತ್ತದೆ.5frj2yx75itrsq0yjuf1

ಅಂದರೆ, 1 ಎಂದರೆ ON…0 ಎಂದರೆ OFF ಎಂದು ಅರ್ಥ. ON  ಮತ್ತು OFF ಮಾಡಲು ಅದೇ ಬಟನ್ ಉಪಯೋಗಿಸುತ್ತೇವೆ .ಆದುದರಿಂದ ಅದರ ಚಿನ್ಹೆ 1 ಮತ್ತು 0 ಗಳ ಸಮ್ಮೇಳನ.
ಕೊನೆಯದಾಗಿ 1973 ರಲ್ಲಿ ಇಂಟರ್   ನ್ಯಾಷನಲ್ ಎಲೆಕ್ಟ್ರೋ ಟೆಕ್ನಿಕಲ್ ಕಮಿಷನ್ ( IEC ) ಈ ಪವರ್ ಬಟನ್ ಚಿನ್ಹೆಯನ್ನು ಅನುಮೋದಿಸಿತು.

ಈಗಲೂ ಸಹ ನಮ್ಮಲ್ಲಿ ON/OFF ಇರುವಂತೆ ಹಲವು ದೇಶಗಳಲ್ಲಿ ಸ್ವಿಚ್ ಗಳ ಮೇಲೆ 0,1 ನಂಬರ್ ಗಳು ಇರುತ್ತವೆ.0m9ykkbk0aprlpzcz863

ಇದೇ ನೋಡಿ ಪವರ್ ಬಟನ್ ಹಿಂದಿರುವ ನಿಜವಾದ ಲಾಜಿಕ್.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


Click Here To Download Kannada AP2TG App From PlayStore!