ಈ 6 ವಿಷಯಗಳಲ್ಲಿ ಎಚ್ಚರ ವಹಿಸಿದರೆ… ಬೆನ್ನುನೋವಿನಿಂದ ಪಾರಾಗಬಹುದು.!

ಬೆನ್ನು ನೋವು. ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಅದಕ್ಕೆ ಅನೇಕ ಕಾರಣಗಳೂ ಇವೆ. ನಿತ್ಯ ಗಜಿಬಿಜಿ ಬದುಕಿನಲ್ಲಿ ಆರೋಗ್ಯದ ಬಗ್ಗೆ ಬಹಳಷ್ಟು ಮಂದಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಅನೇಕ ಅನಾರೋಗ್ಯ ಸಮಸ್ಯೆಗಳೊಂದಿಗೆ ಬೆನ್ನು ನೋವು ಸಹಜವಾಗಿ ಎಲ್ಲರಿಗೂ ಬರುತ್ತಿದೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ಕಾರಣದಿಂದ ಈ ನೋವು ಬರುತ್ತಿದೆ. ಎಲ್ಲರಿಗೂ ಒಂದೇ ಕಾರಣ ಇರಬೇಕು ಎಂದೇನಿಲ್ಲ. ಆ ರೀತಿಯ ಹಲವು ಕಾರಣಗಳನ್ನು ಈಗ ತಿಳಿದುಕೊಳ್ಳೋಣ. ಇವುಗಳಿಂದಲೇ ಬಹಳಷ್ಟು ಮಂದಿಗೆ ಸದ್ಯಕ್ಕೆ ಬೆನ್ನು ನೋವು ಬರುತ್ತಿದೆ. ಆದಕಾರಣ ಅವು ಏನು ಎಂದು ತಿಳಿದುಕೊಂಡರೆ ಅದಕ್ಕೆ ತಕ್ಕಂತೆ ಎಚ್ಚರ ವಹಿಸಬಹುದು.

1. ತೂಕ ಎತ್ತುವುದು
ನಿತ್ಯ ಹೆಚ್ಚು ತೂಕದ ವಸ್ತುಗಳನ್ನು ಹೊರುವವರಿಗೆ ಬೆನ್ನು ನೋವು ಸಹಜವಾಗಿ ಬರುತ್ತದೆ. ಜಾಸ್ತಿ ಬಾಗುವುದು, ತೂಕ ಎತ್ತುವಂತಹ ಕೆಲಸಗಳನ್ನು ಪದೇಪದೇ ಮಾಡಿದರೆ ಬೆನ್ನುಮೂಳೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

2. ಹೆಚ್ಚು ಹೊತ್ತು ಕುಳಿತುಕೊಳ್ಳುವುದು
ಇಂದು ಬಹಳಷ್ಟು ಮಂದಿ ಕುಳಿತುಕೊಂಡು ಕೆಲಸ ಮಾಡುವ ಉದ್ಯೋಗಗಳನ್ನೇ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಿಂದ ಆಗಾಗ ಆಲ್ಲದೆ, ಕನಿಷ್ಟ ಟಾಯ್ಲೆಟ್‌ಗೆ ಹೋಗಲೂ ಬಿಡುವಿಲ್ಲದಂತೆ ಬಹಳಷ್ಟು ಮಂದಿ ಅದೇ ರೀತಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಇದರಿಂದಲೂ ಬೆನ್ನು ನೋವು ಬರುತ್ತದೆ.

3. ವ್ಯಾಯಾಮ ಸರಿಯಾಗಿ ಮಾಡದಿರುವುದು
ಬಹಳಷ್ಟು ಮಂದಿ ಯೋಗಾ, ಎಕ್ಸರ್‌ಸೈಜ್‌ಗಳನ್ನು ಮಾಡುವಾಗ ಸರಿಯದ ಭಂಗಿಯಲ್ಲಿ ಮಾಡಲ್ಲ. ಅಸಹಜವಾಗಿ ಮಾಡುತ್ತಾರೆ. ಇದರಿಂದ ಸಹ ಬೆನ್ನುಮೂಳೆ ಮೇಲೆ ಭಾರ ಬಿದ್ದು ನೋವು ಕಾಣಿಸಿಕೊಳ್ಳುತ್ತದೆ.

4. ಸರಿಯಾಗಿ ಕುಳಿತುಕೊಳ್ಳದಿರುವುದು
ಕಂಪ್ಯೂಟರ್ ಅಥವಾ ಟಿವಿ ಮುಂದೆ ಕುಳಿತುಕೊಳ್ಳುವ ಭಂಗಿಯಲ್ಲಿ ವ್ಯತ್ಯಾಸ ಇದ್ದರೂ ಬೆನ್ನು ನೋವು ತಪ್ಪಿದ್ದಲ್ಲ.

5. ಹಾಸಿಗೆಗಳು
ತುಂಬಾ ಮೆತ್ತಗೆ ಅಥವಾ ತುಂಬಾ ಗಡುಸಾಗಿ ಇರುವ ಹಾಸಿಗೆ ಮೇಲೆ ನಿದ್ರಿಸಬಾರದು. ಇದರಿಂದ ಬೆನ್ನುಮೂಳೆ ಮೇಲೆ ಒತ್ತಡ ಉಂಟಾಗುತ್ತದೆ. ಅದು ಬೆನ್ನು ನೋವಿಗೆ ದಾರಿಯಾಗುತ್ತದೆ.

6. ವಾಹನ ಓಡಿಸುವುದು
ರಸ್ತೆ ಹೊಂಡ ಇರುವ ಹೆದ್ದಾರಿಗಳಲ್ಲಿ ನಿತ್ಯ ಹೋಗುವ ವಾಹನ ಸವಾರರಿಗೂ ಬೆನ್ನುನೋವು ಬರುತ್ತದೆ. ಅಂತಹ ರಸ್ತೆಯಲ್ಲಿ ಹೋದರೆ ಉಂಟಾಗುವ ಚಲನೆಯಿಂದ ಬೆನ್ನುಮೂಳೆ ಮೇಲೆ ಭಾರ ಬೀಳುತ್ತದೆ. ಇದರ ಪ್ರತಿಫಲವಾಗಿ ನೋವು ಕಾಣಿಸಿಕೊಳ್ಳುತ್ತದೆ.


Click Here To Download Kannada AP2TG App From PlayStore!