ಯುವಕನ ಮೇಲೆ 4 ಯುವತಿಯರಿಂದ ಅತ್ಯಾಚಾರ. ಆತನ ಪ್ರೇಯಸಿಯಿಂದ ಫೋನ್ ಮಾಡಿಸಿ ರೂಮಿಗೆ ಬರಲು ಹೇಳಿ…

ಹುಡುಗಿಯರ ಮೇಲೆ ಅತ್ಯಾಚಾರ ನಡೆದಿರುವುದನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಆಘಾತಕಾರಿ ಸುದ್ದಿಗಳು ಯಾವುದಾದರೊಂದು ನಡೆಯುವುದನ್ನು ಪ್ರತೀ ದಿನ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ, ಯುವಕನ ಮೇಲೆ ಯುವತಿಯರು ಅತ್ಯಾಚಾರ ಮಾಡಿರುವುದು ಅಷ್ಟಾಗಿ ಕೇಳಿರುವುದಿಲ್ಲ. ಒಂದು ವೇಳೆ ಅಂತಹ ಘಟನೆ ನಡೆದರೂ ಮಾನ ಮರ್ಯಾದೆಗಳಿಗೆ ಅಂಜಿ ಯಾರಿಗೂ ತಿಳಿಸುವುದಿಲ್ಲ . .ಇಂತಹುದೇ ಒಂದು ಅಪರೂಪದ ಘಟನೆ ಒಂದು ಮುಂಬೈಯಲ್ಲಿ ಜರುಗಿದೆ.

ಮುಂಬೈಯಲ್ಲಿ ಕೀರ್ತಿ ಸಿಂಗ್ ಎಂಬ ಯುವತಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆ ಯುವತಿ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಒಂದು ದಿನ ತನ್ನ ರೂಮಿಯಲ್ಲಿ ಒಬ್ಬಳೇ ಇರುವಾಗ ತನ್ನ ಪ್ರಿಯತಮನಿಗೆ ಫೋನ್ ಮಾಡಿ ಬರಲು ಹೇಳಿದಳು.ತನ್ನ ಲವರ್ ರೂಮಿಗೆ ಬರಲು ಹೇಳಿದ ತಕ್ಷಣ ಆ ಯುವಕನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ತನ್ನ ಪ್ರೇಯಸಿ, ಅದೂ ಒಬ್ಬಂಟಿಯಾಗಿ ತನ್ನ ರೂಮಿಗೆ ಕರೆಯುತ್ತಿದ್ದಾಳೆಂದರೆ…ಮನಸ್ಸಿನಲ್ಲಿ ಏನೇನೋ ಊಹಿಸಿಕೊಂಡ. ಎಷ್ಟಾದರೂ ಟೀನೇಜರ್ ಅಲ್ಲವೇ…ಆಲೋಚನೆಗಿಂತಲೂ ಆವೇಶ ಹೆಚ್ಚಾಗಿರುತ್ತದೆ. ಆದರೆ, ಆತ ಊಹಿಸಿಕೊಂಡದ್ದೇ ಬೇರೆ. ಅಲ್ಲಿ ನಡೆದದ್ದೇ ಬೇರೆ. ಯುವಕ ರೂಮಿಗೆ ಹೋಗುವಷ್ಟರಲ್ಲೇ…ಕೀರ್ತಿ ತನ್ನ ಗೆಳತಿಯರೊಂದಿಗೆ ಕಂಠಪೂರ್ತಿ ಮದ್ಯ ಸೇವಿಸಿದ್ದಳು. ಅವರೆಲ್ಲರೂ ಅಮಲಿನಲ್ಲಿ ತೇಲಾಡುತ್ತಿರುವಾಗಲೇ… ಕೀರ್ತಿಗೆ ತನ್ನ ಪ್ರಿಯತಮನ ನೆನಪಾಯಿತು. ಒಂದು ಆಲೋಚನೆ ಬಂದಿತು. ಆಗಲೇ ಆಕೆ ಅವನನ್ನು ರೂಮಿಗೆ ಬರಲು ಹೇಳಿದ್ದು.

ತನ್ನ ಪ್ರಿಯತಮೆಯ ಮಾತುಗಳನ್ನು ನಂಬಿ ಆಸೆಯಿಂದ ರೂಮಿಗೆ ಬಂದ ಯುವಕ, ಬಲೆಯಲ್ಲಿ ಸಿಕ್ಕಕೊಂಡ ಮೀನಿನಂತಾದ. ವಿಚಕ್ಷಣಾ ರಹಿತರಾಗಿ ನಾಲ್ವರೂ ಆತನ ಮೇಲೆ ಅತ್ಯಾಚಾರವೆಸಗಿದರು. ತಮ್ಮ ತೃಷೆಯನ್ನು ತೀರಿಸಿಕೊಂಡನಂತರ ಅವನನ್ನು ಅಲ್ಲಿಂದ ಹೊರಡಲು ಬಿಟ್ಟರು. ತನ್ನಲ್ಲಿದ್ದ ಶಕ್ತಿಯೆಲ್ಲವನ್ನೂ ಒಟ್ಟುಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಹೋದ. ತನ್ನ ಮೇಲೆ ನಾಲ್ವರು ಯುವತಿಯರು ರೇಪ್ ಮಾಡಿದರೆಂದು ದೂರು ದಾಖಲಿಸಿದ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬದಲಾದ ಕಾಲದಲ್ಲಿ ಯುವತಿಯರೂ ಸಹ ಯುವಕರ ರೇಪಿಸ್ಟ್ ಗಳಾಗಿ ಬದಲಾಗುತ್ತಿದ್ದಾರೆಂದು ಈ ಘಟನೆಯಿಂದ ತಿಳಿದು ಬರುತ್ತದೆ.