ಮುಖದಲ್ಲಿ ಮೊಡವೆಗಳು ಬರುವ ಜಾಗ ನೋಡಿ ನಿಮ್ಮ ಆರೋಗ್ಯ ಸಮಸ್ಯೆ ಕುರಿತು ಹೇಳಬಹುದು..!

ನಿಮ್ಮ ಮುಖದಲ್ಲಿರುವ ಮೊಡವೆಗಳು… ನೀವು ಎಷ್ಟು ಆರೋಗ್ಯವಂತರಾಗಿದ್ದೀರಿ? ಯಾವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ ಎಂಬ ವಿಷಯಗಳನ್ನು ತಿಳಿಸುತ್ತವಂತೆ. ಮುಖದಲ್ಲಿ ಯಾವ ಭಾಗದಲ್ಲಿ ಮೊಡವೆಗಳು ಬರುತ್ತವೆಯೋ ನೋಡಿ ನೀವು ಯಾವ ತರಹ ಆರೋಗ್ಯ ಸಮಸ್ಯೆಯನ್ನು ಎದುರುಸಿತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದಂತೆ. ಹಣೆಯ ಮೇಲೆ, ಕಣ್ಣಿನ ಹುಬ್ಬುಗಳ ನಡುವೆ, ಕೆನ್ನಗಳ ಮೇಲೆ, ಕೆನ್ನೆಗಳ ಕೆಳಗೆ, ಮೂಗಿನ ಮೇಲೆ… ಹೀಗೆ ಹಲವು ಜಾಗಗಳಲ್ಲಿ ಮೊಡವೆಗಳು ಬಂದಲ್ಲಿ ನಿಮಗಿರುವ ಆರೋಗ್ಯ ಸಮಸ್ಯೆ ಎಂತಹುದೆಂದು ನೀವೇ ನೋಡಿಕೊಳ್ಳಿ.

ಹಣೆಯ ಭಾಗದಲ್ಲಿ…
ಒಂದೆ ವೇಳೆ ಹಣೆಯ ಭಾಗದಲ್ಲಿ ಮೊಡವೆಗಳು ಬಂದರೆ, ನಿಮ್ಮ ‘ಜೀರ್ಣಾಂಗ ವ್ಯವಸ್ಥೆ ‘ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಅರ್ಥ. ಒಡನೆಯೇ ನೀವು ಜಂಕ್ ಫುಡ್, ಕೊಬ್ಬಿನ ಪದಾರ್ಥಗಳನ್ನು ತ್ಯಜಿಸಬೇಕು. ತಂಪನ್ನುಂಟುಮಾಡುವ ಸೌತೇಕಾಯಿ, ಐಸ್ ಕ್ರೀಂ ಮುಂತಾದ ಪದಾರ್ಥಗಳನ್ನು ತಿನ್ನುವುದು ಉತ್ತಮ. ಕೆಲವು ದಿನಗಳು ಹೀಗೆ ಮಾಡಿ ನೋಡಿ ಫಲಿತಾಂಶ ನಿಮಗೇ ತಿಳಿಯುತ್ತದೆ.

ಕಣ್ಣು ಹುಬ್ಬುಗಳ ನಡುವೆ…
ಹುಬ್ಬುಗಳ ನಡುವೆ ಮೊಡವೆ ,ಮಚ್ಚೆಗಳು ಬಂದರೆ ‘ಲಿವರ್’ ಸರಿಯಾಗಿ ಕೆಲಸಮಾಡುತ್ತಿಲ್ಲವೆಂದು ತಿಳಿಯಬೇಕು. ಅಲ್ಕೋಹಾಲ್, ಹಾಲಿನ ಉತ್ಪನ್ನಗಳು, ಪಿಜ್ಜಾ, ಬರ್ಗರ್,ಚಿಪ್ಸ್ ಮೊದಲಾದುವುಗಳನ್ನು ತ್ಯಜಿಸಿದರೆ ಉತ್ತಮ ಫಲಿತಾಂಶ ಕಾಣಿಸುತ್ತದೆ.

ಕೆನ್ನೆಗಳ ಕೆಳಬಾಗದಲ್ಲಿ…
ಬಾಯಿಯಲ್ಲಿ ಸೊಂಕು ಉಂಟಾಗಿದ್ದರೆ, ಕೆನ್ನೆಗಳ ಕೆಳಗೆ ಮೊಡವೆಗಳು ಬರುತ್ತವೆ. ಇದು ದಂತಗಳಿಗೆ ಸಂಬಂಧಿಸಿದ ರೋಗಗಳನ್ನು ಸೂಚಿಸುತ್ತದೆ.

ಕೆನ್ನೆಗಳ ಮೇಲೆ, ಕಣ್ಣಿನ ಕೆಳಭಾಗ…
ಶ್ವಾಸಕೋಶಗಳು ಸರಿಯಗಿ ಕೆಲಸ ಮಾಡದಿದ್ದರೆ, ಕೆನ್ನೆಗಳ ಮೇಲೆ ಕಣ್ಣಿನ ಕೆಳಬಾಗದಲ್ಲಿ ಮೊಡವೆಗಳು ಬರುತ್ತವೆ. ಧೂಮಪಾನ, ಕಲುಷಿತ ವಾತವರಣದಿಂದಾಗಿ ಹೀಗಾಗುತ್ತದೆ.

ಗಲ್ಲದ ಮೆಲೆ..
ಹಾರ್ಮೋನುಗಳಲ್ಲಾಗುವ ಏರುಪೇರುಗಳನ್ನು ಗಲ್ಲದ ಮೇಲಿನ ಮೊಡವೆಗಳು ಸೂಚಿಸುತ್ತವೆ. ಪ್ರಮುಖವಾಗಿ ಋತು ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಲ್ಲಿ ಈ ರೀತಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಎದೆ ಹಾಗು ಕುತ್ತಿಗೆಯ ಭಾಗದಲ್ಲಿ…
ಶರೀರಕ್ಕಾದ ಬಳಲಿಕೆಯನ್ನು ಸೂಚಿಸುತ್ತದೆ. ದಿನವೂ ಯೋಗ ಹಾಗೂ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮೂಗಿನ ಮೇಲೆ…
ಮೂಗಿನ ಮೇಲೆ ಬರುವ ಮೊಡವೆಗಳು ಹೃದಯದ ಸಮಸ್ಯೆ ಹಾಗೂ ಅಧಿಕ ರಕ್ತದ ಒತ್ತಡವನ್ನು ಸೂಚಿಸುತ್ತವೆ. ಮಸಾಲ   ಪದಾರ್ಥಗಳು,ಅಧಿಕ ಖಾರದ ಆಹಾರ,ಕೊಬ್ಬಿನ ಪದಾರ್ಥಗಳನ್ನು ತ್ಯಜಿಸಿ ಬೀಜ( Nuts)ಗಳನ್ನು ತಿನ್ನಬೇಕು.


Click Here To Download Kannada AP2TG App From PlayStore!