40,000 ಶವಗಳ   ಪೋಸ್ಟ್ ಮಾರ್ಟಂ  ಮಾಡಿದ ಆತನು ಹೇಳಿದ ಅನುಭವದ ಮಾತುಗಳನ್ನು ಕೇಳಿದರೆ…ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ. ಚಿಕ್ಕ ಮಕ್ಕಳ ಪೋಸ್ಟ್ ಮಾರ್ಟಂ ಮಾಡುವಾಗ…

ಶವಗಳನ್ನು ಕುಯ್ಯುವುದು ಆತನ ಕೆಲಸ.! ತನ್ನ ಕರ್ತವ್ಯ ನಿರ್ವಹಣೆಯ 40 ವರ್ಷಗಳಲ್ಲಿ 40 ಸಾವಿರ ಶವಗಳನ್ನು ಕುಯ್ದಿದ್ದು, ಇತ್ತೀಚೆಗೆ ಥಾನೇ ಮೇಯರ್ ರವರು ಇವರಿಗೆ ಸನ್ಮಾನ ಮಾಡಿದ್ದಾರೆ!!! ಉತ್ತರ ಪ್ರದೇಶದ ಅಲೀಘರ್ ನ ಬನಾರಸಿ ಶ್ಯಾಮ್ ಲಾಲ್ ಚೌಟ್ಟುಲ್ (64) ರವರ ಕುಟುಂಬವು 1973 ರಲ್ಲಿ ಮುಂಬೈಗೆ ವಲಸೆ ಬಂದಿತ್ತು. ಈತನ ತಂದೆ ಹಾಗೂ ತಾತ ಥಾನೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದವರೇ. ಅಂತೆಯೇ ಶ್ಯಾಮ್ ಲಾಲ್ ಕೂಡಾ ರೂ.175 ರಂತೆ ಸಂಬಳಕ್ಕೆ ವಾರ್ಡ್ ಬಾಯ್ ಆಗಿ ಉದ್ಯೋಗಕ್ಕೆ ಸೇರಿ, ಎರಡು ವರ್ಷಗಳ ನಂತರ ಮಾರ್ಚುರಿ ವಿಭಾಗಕ್ಕೆ ಶಿಫ್ಟ್ ಆದರು.

ಅಂದಿನಿಂದ ಕೆಲ ದಿನಗಳ ಹಿಂದಿನ ವರೆಗೂ 40,000 ಶವಗಳ ಪೋಸ್ಟ್ ಮಾರ್ಟಂ ಮಾಡಿದ್ದಾರೆ. ತಿಂಗಳಿಗೆ ಸುಮಾರು 700 ಮೃತದೇಹಗಳಿಗೆ ಶವ ಪರೀಕ್ಷೆ ನಿರ್ವಹಿದ್ದಾರೆಂದು ತಿಳಿಸಿದ್ದಾರೆ. ಇವರು 2014 ರಲ್ಲಿ ನಿವೃತ್ತಿ ಹೊಂದಿದ್ದರೂ ಇಂದಿನವರೆಗೂ ಥಾನೆ ಆಸ್ಪತ್ರೆ ಇವರ ಸೇವೆಯನ್ನು ಪಡೆಯುತ್ತಲೇ ಬಂದಿದೆ. ಇತ್ತೀಚೆಗೆ ಥಾನೆ ಮೇಯರ್ ಮೀನಾಕ್ಷಿ ಷಿಂಡೇ…ಶ್ಯಾಮ್ ಲಾಲ್ ರವರನ್ನು ಸೂಕ್ತ ರೀತಿಯಲ್ಲಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ಯಾಮ್ ಲಾಲ್ ಮಾತನಾಡುತ್ತಾ ಅವರ ಅನುಭವಗಳನ್ನು ಹೀಗೆ ಹಂಚಿಕೊಂಡಿದ್ದಾರೆ….ಒಂದೊಂದು ಸಲ ಮೃತದೇಹಗಳಿಂದ ಹೊರಬರುವ ದುರ್ಗಂಧವನ್ನು ಭರಿಸಲಾಗದೆ ಶವ ಪರೀಕ್ಷೆಗೆ ಮುನ್ನ ವೈದ್ಯರ ಅನುಮತಿಯನ್ನು ಪಡೆದು ಆಲ್ಕಹಾಲ್ ತೆಗೆದುಕೊಳ್ಳುತ್ತಿದ್ದೆ.ಚಿಕ್ಕ ಮಕ್ಕಳಿಗೆ ಪೋಸ್ಟ್ ಮಾರ್ಟಂ ಮಾಡುವ ಸಮಯದಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿರುತ್ತದೆ, ಮನಸ್ಸು ಕರಗಿ ಕಣ್ಣಲ್ಲಿ ನೀರು ಬಂದು ಬಿಡುತ್ತದೆ ಎಂದು ಹೇಳುತ್ತಾರೆ.

2006 ರಲ್ಲಿ ಥಾನೆ ಮುನಿಸಿಪಲ್ ಕಾರ್ಪೊರೇಷನ್ ಬಸ್ ದುರಂತದಲ್ಲಿ 32 ಮಂದಿ ಮೃತರಾದರು.  ಅಂತಹ ಸಮಯದಲ್ಲೇ ಮೇಲಾಧಿಕಾರಿಗಳು ಮುಖ್ಯವಾದ ಕೆಲಸಕ್ಕೆ ಕರೆಯುತ್ತಾರೆಂದು, ಹಗಲು ರಾತ್ರಿ ಕಷ್ಟಪಟ್ಟು 32 ಮೃತದೇಹಗಳಿಗೆ ಪೋಸ್ಟ್ ಮಾರ್ಟಂ ನಿರ್ವಹಿಸಿದ ನಂತರ ಮೃತದೇಹವನ್ನು ಅವರ ಕುಟುಂಬಗಳಿಗೆ ಒಪ್ಪಿಸುತ್ತೇವೆ ಎಂದು ನೆನೆಸಿಕೊಂಡರು. ಶ್ಯಾಮ್ ಲಾಲ್ ರವರ ಹೆಂಡತಿ ಕೂಡಾ ಥಾನೆ ಆಸ್ಪತ್ರೆಯಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಾಳೆ. ಕೆಲವು ಸಂದರ್ಭಗಳಲ್ಲಿ ಆಕೆ ತನಗೆ ಧೈರ್ಯ ಹೇಳುತ್ತಾ ತನ್ನ ಸಮಸ್ಯೆಗಳಲ್ಲಿ ತಾನೂ ಭಾಗಿಯಾಗುತ್ತಾಳೆ ಎಂದು ತಿಳಿಸಿದರು. ಅವರ ಮಕ್ಕಳು ಸಹಾ ಆಗಾಗ ಮಾರ್ಚುರಿಗೆ ಬಂದು ಹೋಗುತ್ತಾರೆ ಎಂದು….ಆ ಸಮಯದಲ್ಲಿ ಅವರೂ ಬೇಸರ ಪಡುತ್ತಾರೆಂದು ತಿಳಿಸಿದ್ದಾರೆ.


Click Here To Download Kannada AP2TG App From PlayStore!