ಭಯಕ್ಕೇ ಭಯ ತರಿಸುವ 9 ಮಂದಿ ಡೈನಮಿಕ್ ಲೇಡಿ ಐಪಿಎಸ್ ಆಫೀಸರ್‌ಗಳು ಇವರು..!

ಇಂಡಿಯನ್ ಪೊಲೀಸ್ ಸರ್ವಿಸ್ (ಐಪಿಎಸ್). ಭಾರತ ಸರಕಾರದ ಈ ಇಲಾಖೆಯಲ್ಲಿ ಕೆಲಸ ಮಾಡುವುದೆಂದರೆ ಅದು ಮಾಮೂಲಿ ಸಂಗತಿ ಅಲ್ಲ. ನಿತ್ಯ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಣ್ಣಪುಟ್ಟ ಪುಢಾರಿಗಳಿಂದ ಹಿಡಿದು ದೊಡ್ಡ ಮುಖಂಡರು, ರೌಡಿಗಳವರೆಗೆ ಬಹಳಷ್ಟು ಮಂದಿಯ ಬೆದರಿಕೆ, ಶಿಫಾರಸುಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಮಹಿಳೆಯರ ಪಾಲಿಗೆ ಈ ಉದ್ಯೋಗ ನಿಜಕ್ಕೂ ತುಂಬಾ ಕಷ್ಟದ ಕೆಲಸ. ಆದರೂ ಕೆಲವು ಮಹಿಳೆಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಸಾಕಷ್ಟು ಹೆಸರು ಮಾಡಿದ್ದಾರೆ. ಅಂತಹವರ ಬಗ್ಗೆ ಈಗ ತಿಳಿದುಕೊಳ್ಳೋಣ.

1. ಮೆರಿನ್ ಜೋಸೆಫ್
2012ರಲ್ಲಿ ಯುಪಿಎಸ್‍ಸಿ ಪರೀಕ್ಷೆ ಪಾಸಾದ ಮೆರಿನ್ ಜೋಸೆಫ್ ಕೇರಳ ಕ್ಯಾಡರ್‌ನ ಯಂಗ್ ಆಫೀಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ತನ್ನ 25ನೇ ವಯಸ್ಸಿನಲ್ಲೇ ಮೊದಲ ಪ್ರಯತ್ನದಲ್ಲೇ ಸಿವಿಲ್ಸ್ ಪರೀಕ್ಷೆ ಪಾಸಾಗಿದ್ದು ಗಮನಾರ್ಹ.

2. ಕಿರಣ್ ಬೇಡಿ
ಇವರ ಬಗ್ಗೆ ಎಲ್ಲರಿಗೂ ಗೊತ್ತು. ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ. 1972ರಲ್ಲಿ ಐಪಿಎಸ್ ಆಫೀಸರ್ ಆದ ಮೊದಲ ಮಹಿಳೆ ಇವರು. ಆ ಬಳಿಕ ಪೊಲೀಸ್ ಅಧಿಕಾರಿಯಾಗಿ ಸಾಕಷ್ಟು ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ. 1982ರಲ್ಲಿ ಇವರು ಟ್ರಾಫಿಕ್ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಯಮಗಳನ್ನು ಗಾಳಿಗೆ ತೂರಿದ ಎಂಪಿಗಳು, ಎಂಎಲ್‍ಎಗಳ ಕಾರುಗಳನ್ನು ಟ್ರಕ್‌ನಲ್ಲಿ ಎತ್ತಾಕಿಕೊಂಡು ಹೋಗಿದ್ದರು. ಆಗ ಇವರ ಹೆಸರು ದೇಶದಾದ್ಯಂತ ಕೇಳಿಬಂದಿತ್ತು.

3. ಸಂಗೀತ ಕಾಲಿಯಾ
ಇವರದು ಹರಿಯಾಣದಲ್ಲಿನ ಫತೇಹಾಬಾದ್ ಜಿಲ್ಲೆ. 2009ರ ಬ್ಯಾಚ್ ಐಪಿಎಸ್ ಅಧಿಕಾರಿ. ಈಕೆ ತಂದೆ ಸಹ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2015ರಲಿ ಫತೇಹಬಾದ್‌ನಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್ ಜತೆಗೆ ಗಲಾಟೆ ಮಾಡಿಕೊಂಡಿದ್ದರು. ಸಭೆಗೆ ತೊಂದರೆ ಮಾಡುತ್ತಿದ್ದಾರೆಂದು ಅಲ್ಲಿಂದ ಹೊರಡಬೇಕೆಂದು ಅವರು ಹೇಳಿದ್ದರು. ಆದರೂ ಅವರು ಪ್ರತಿಕ್ರಿಯಿಸಿರಲಿಲ್ಲ. ಸಚಿವರ ಮೇಲೆ ಕ್ರಮಕ್ಕೆ ಮುಂದಾಗಿದ್ದ ಕಾರಣ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು.

4. ಅಪರಾಜಿತ ರಾಯ್
ಸಿಕ್ಕಿಂನಿಂದ ಬಂದ ಮೊದಲ ಗೋರ್ಕಾ ಐಪಿಎಸ್ ಅಧಿಕಾರಿಯಾಗಿ ಇವರು ಹೆಸರು ಮಾಡಿದ್ದಾರೆ. ಸದ್ಯಕ್ಕೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2012 ಬ್ಯಾಚ್ ಐಪಿಎಸ್ ಅಧಿಕಾರಿ ಈಕೆ. ಐಪಿಎಸ್ ಅಧಿಕಾರಿಯಾಗಿ Trophy for the best Lady Outdoor Probationer, Umesh Chandra Trophy for Field Combat, Senior Course Officers Trophy ನಂತಹ ಪ್ರಶಸ್ತಿಗಳನ್ನು ಪಡೆದಿದ್ದಾರೆ.

5. ಸಂಯುಕ್ತಾ ಪರಾಶರ್
2006ರ ಐಪಿಎಸ್ ಬ್ಯಾಚ್‌ ಸಂಯುಕ್ತಾ ಪರಾಶರ ಸದ್ಯಕ್ಕೆ ಸೋನಿತ್‍ಪೂರ್ ಪೊಲೀಸ್ ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಕೆ 1979 ಅಕ್ಟೋಬರ್ 3ರಂದು ಜನಿಸಿದರು. ಅಸ್ಸಾಂನ ಮೊದಲ ಐಪಿಎಸ್ ಅಧಿಕಾರಿ ಎಂದು ಖ್ಯಾತರಾಗಿದ್ದಾರೆ. ಅಷ್ಟೇ ಅಲ್ಲದೆ ಅಸ್ಸಾಂನ ಬೋಡೋ ಉಗ್ರರ ವಿರುದ್ಧ ಹೋರಾಡಿದ ವೀರ ವನಿತೆ ಈಕೆ. ಕೇವಲ 15 ತಿಂಗಳಲ್ಲಿ 64 ಮಂದಿ ಉಗ್ರರನ್ನು ಫಿನಿಶ್ ಮಾಡಿದ್ದರು.

6. ಮೀರಾ ಬೋರ್ವಾಂಕರ್
ಪಂಜಾಬ್ ರಾಜ್ಯದ ಫಜಿಕಾ ಪ್ರದೇಶದಕ್ಕೆ ಸೇರಿದ ಮೀರಾ ಬೋರ್ವಾಂಕರ್ ಜಲಂಧರ್‌ನಲ್ಲಿ ಪದವಿಯನ್ನು ಪೂರೈಸಿದ್ದಾರೆ. ಮಹಾರಾಷ್ಟ್ರದ ಮೊದಲ ಐಪಿಎಸ್ ಅಧಿಕಾರಿಯಾಗಿ ಇವರು ದಾಖಲೆ ಸೃಷ್ಟಿಸಿದ್ದಾರೆ. 1981ರ ಬ್ಯಾಚ್‍ನ ಐಪಿಎಸ್ ಅಧಿಕಾರಿ ಇವರು. ‘ಮರ್ದಾನಿ’ ಎಂಬ ಹಿಂದಿ ಸಿನಿಮಾಗೆ ಇವರ ಜೀವನಗಾಥೆಯೇ ಆಧಾರ. ಜಿಲ್ಗಾವ್ ಸೆಕ್ಸ್ ಸ್ಕ್ಯಾಂಡಲ್, ಅಬು ಸಲೇಂ ಪ್ರಕರಣ, ಇಕ್ಬಾಲ್ ಮಿರ್ಚಿ ಪ್ರಕರಣಗಳನ್ನು ಇವರು ಬೇಧಿಸಿದರು. 1997ರಲ್ಲಿ ಈಕೆ ಪ್ರೆಸಿಡೆಂಟ್ ಮೆಡಲ್ ಪಡೆದಿದ್ದಾರೆ.

7. ರುವೇದಾ ಸಲಾಮ್
2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಈಕೆ. ಜಮ್ಮು ಕಾಶ್ಮೀರದ ನಿವಾಸಿ. ಐಪಿಎಸ್‌ಗೂ ಮುನ್ನ ಈಕೆ ಒಬ್ಬ ಡಾಕ್ಟರ್. ಕಾಶ್ಮೀರದಿಂದ ಮೊದಲ ಸಲ ಐಪಿಎಸ್‌ಗೆ ಆಯ್ಕೆಯಾದ ಮಹಿಳಾ ಅಧಿಕಾರಿಯಾಗಿ ಈಕೆ ಹೆಸರು ಮಾಡಿದ್ದಾರೆ. ಸದ್ಯಕ್ಕೆ ಚೆನ್ನೈ ಎಸಿಪಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

8.ಸೋನಿಯಾ ನಾರಂಗ್
2002ರ ಬ್ಯಾಚ್ ಐಪಿಎಸ್ ಅಧಿಕಾರಿ ಇವರು. ಸದ್ಯಕ್ಕೆ ಬೆಂಗಳೂರು ಡಿಸಿಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು 2006ರಲ್ಲಿ ನಡೆದ ಗಲಭೆಯಲ್ಲಿ ಕರ್ನಾಟಕದ ಶಾಸಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು. ಬಳಿಕ ಅದು ದೊಡ್ಡ ಸುದ್ದಿಯಾಗಿತ್ತು. ಯಾರೇ ಆಗಲಿ ಧೈರ್ಯವಾಗಿ ಮುನ್ನುಗ್ಗುತ್ತಾರೆ ಇವರು.

9. ಸೌಮ್ಯಾ ಸಾಂಬಶಿವನ್
2009ರ ಬ್ಯಾಚ್ ಐಪಿಎಸ್ ಅಧಿಕಾರಿ ಇವರು. ಹಿಮಾಚಲ್ ಪ್ರದೇಶದ ಸಿರ್‌ಮೋರಾ ಎಸ್‍ಪಿಯಾಗಿ ಕೆಲಸ ಮಾಡಿದ್ದಾರೆ. ಅಪರಾಧಿಗಳ ಪಾಲಿಗೆ ಸಿಂಹ ಸ್ವಪ್ನ ಎನ್ನಿಸಿಕೊಂಡಿದ್ದಾರೆ.

 


Click Here To Download Kannada AP2TG App From PlayStore!