ಭವಿಷ್ಯದ ಪ್ರಧಾನಮಂತ್ರಿ ನಾನೇ ಎಂದು ಹೇಳುತ್ತಾನೆ 13 ವರ್ಷಗಳ ಅಮನ್.!

ಸಾಮಾನ್ಯವಾಗಿ 13 ವರ್ಷ ವಯಸ್ಸಿನ ಬಾಲಕನ ಮನಸ್ಥಿತಿ ಹೇಗಿರುತ್ತದೆ? ಓದುವುದು, ಹೋಂ ವರ್ಕ್, ಆಟೋಟ, ಟಿವಿ, ಸಿನಿಮಾ. ಇಷ್ಟೇ ಅಲ್ಲವೇ ಆತನ ಪ್ರಪಂಚ. ಇಷ್ಟನ್ನು ಹೊರತು ಪಡಿಸಿ ಇನ್ನೇನಿರಲು ಸಾಧ್ಯ? ಆದರೆ, ಈ ಹುಡುಗ ಎಲ್ಲರಂತವನಲ್ಲ. ಆತನ ಆಲೋಚನಾ ಶೈಲಿಯೇ ವಿಭಿನ್ನ. ವ್ಯವಹರಿಸುವ ರೀತಿಯೇ ಬೇೆರೆ. ಆತನಲ್ಲಿ ಒಬ್ಬ ಫಿಲಾಸಫರ್ ಇದ್ದಾನೆ. ಒಬ್ಬ ಶಿಕ್ಷಕನಿದ್ದಾನೆ. ಒಬ್ಬ ಟೀಂ ಮ್ಯಾನೇಜರ್ ಇದ್ದಾನೆ. ಇವೆಲ್ಲಕ್ಕೂ ಹೊರತಾಗಿ ಆತನಲ್ಲಿ ಒಬ್ಬ ಉತ್ತಮ ನಾಯಕನಿದ್ದಾನೆ.
ಸಾಮಾನ್ಯವಾಗಿ 13 ವರ್ಷ ಹುಡುನಲ್ಲಿ, ನೀನು ಭವಿಷ್ಯದಲ್ಲಿ ಏನಾಗ ಬಯಸುತ್ತೀಯ ಎಂದು ಯಾರಾದರೂ ಕೇಳಿದರೆ- ಡಾಕ್ಟರ್ ಅಥವಾ ಇಂಜಿನಿಯರ್ ಎಂಬ ಉತ್ತರ ಥಟ್ಟನೆ ಬರುತ್ತದೆ. ಆದರೆ, ಅಮನ್ ನನ್ನು ಕೇಳಿದರೆ…ನಾನು ಭಾರತದ ಪ್ರಧಾನಮಂತ್ರಿ ಆಗುತ್ತೇನೆ ಎನ್ನುತ್ತಾನೆ! ಪ್ರಶ್ನೆ ಕೇಳುವವರೂ ಸಹ ಇಂತಹ ಉತ್ತರವನ್ನು ಆತನಿಂದ ನಿರೀಕ್ಷಿಸಿರಲಾರರು.! ಈ ಮಾತನ್ನು ಹೇಳುವ ಆತನ ಧೈರ್ಯಕ್ಕೆ ಹಾಗೂ ಆತನಲ್ಲಿರುವ ಆತ್ಮ ವಿಶ್ವಾಸವನ್ನು ಮೆಚ್ಚಲೇ ಬೇಕು.


ಟಾಪ್ 10 ರ್ಯಾಂಕ್ ಗಳಲ್ಲಿ ಈತನೂ ಒಬ್ಬ . ಬಿಎಂಸಿ (ಬ್ರಿಹಾನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್) ಸ್ಕಾಲರ್ ಶಿಪ್ ಪಡೆಯುವುದೆಂದರೆ, ಹುಡುಗಾಟದ ಮಾತಲ್ಲ. ಮಹಾರಾಷ್ಟ್ರದ ಟಾಪ್ 10 ರ್ಯಾಂಕ್ ಗಳಲ್ಲಿ ಈತನೂ ಒಬ್ಬ. ಹಾಗೆಂದು ಈತನ ಬಳಿ ವಿದ್ಯೆಯೊಂದೇ ಅಲ್ಲ ಸಾಮಾನ್ಯ ಜ್ಞಾನವೂ ಇದೆ. ಶಾಲೆ ಮುಗಿದ ತಕ್ಷಣ ಎಲ್ಲ ಮಕ್ಕಳಂತೆ ಅಮನ್ ಆಡಲು ಹೋಗುವುದಿಲ್ಲ. ಪುಸ್ತಕಗಳೊಂದಿಗೆ ಸಹ ವಿದ್ಯಾರ್ಥಿಗಳ ಬಳಿಗೆ ಹೋಗುತ್ತಾನೆ. ಶಿಕ್ಷಕನ ಅವತಾರ ತಾಳಿ, ಓದುವುದರಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಪಾಠಮಾಡುತ್ತಾನೆ. ಈತನ ಕುಟುಂಬದ ಹಿನ್ನೆಲೆ ಹೇಳಿಕೊಳ್ಳುವಂತೇನೂ ಇಲ್ಲ. ತಂದೆ ಬೋರಿವಿಲಿಯಲ್ಲಿ ಖಾದಿ ವ್ಯಾಪಾರ ಮಾಡುತ್ತಾರೆ. ಸಾಧಾರಣ ಮಧ್ಯ ತರಗತಿ ಕುಟುಂಬ. ವರ್ಷಕ್ಕೆ ಎರಡು ಸಲ ಮಾತ್ರ ಅಮ್ಮನನ್ನು ನೋಡಲು ಹೋಗುತ್ತಿರುತ್ತಾನೆ.
ಲರ್ನಿಂಗ್ ಸರ್ಕಲ್ ಹೀಗೆ ಪ್ರಾರಂಭವಾಯಿತು.
ಹಿಸ್ಟರಿ ಫಾಕಲ್ಟಿ ಆಗಿರುವ ಮೋಹಿನೀ ಪಾಂಡೇ 2015 ರಲ್ಲಿ ಫೆಲೋಷಿಪ್ ಪೂರ್ಣಗೊಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೋರಿವಿಲಿಯಲ್ಲಿರುವ ‘ಎಕ್ಸರ್ ತಲಾವೋ’ ಮುನಿಸಿಪಲ್ ಶಾಲೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೇವಲ ವೇತನ ಪಡೆದುಕೊಳ್ಳುವುದಕ್ಕಾಗಿ ಪಾಠ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ವಿದ್ಯಾವ್ಯವಸ್ಥೆಯಲ್ಲಿ ಅಸಮಾನತೆಗಳಿವೆ, ಬಹಳಷ್ಟು ನೂನ್ಯತೆಗಳಿವೆ. ಪ್ರತೀ ವರ್ಷ 6 ರಿಂದ 14 ವರ್ಷ ವಯಸ್ಸಿನ ಶಾಲೆಗೆ ಸೇರುವ ಹುಡುಗ ಹುಡುಗಿಯರು ಸಂಖ್ಯೆ ಶೇ.96 ಹೆಚ್ಚುತ್ತಲೇಯಿದೆ. 2010,2012 ಇಸವಿಗಳನ್ನು ಹೊರತು ಪಡಿಸಿದರೆ, 5 ನೇ ತರಗತಿಯ ಮಕ್ಕಳು ಸರಕಾರಿ ಶಾಲೆಗಳಿಗಿಂತಲೂ, ಖಾಸಗಿ ಶಾಲೆಗಳಲ್ಲೇ ಹೆಚ್ಚಾಗಿದ್ದಾರೆ. ಈ ವ್ಯತ್ಯಾಸ ಪ್ರತೀ ವ್ರಷ ಏರುತ್ತಲೇಯಿದೆ. ಈರೀತಿ ಯಾಗುವುದು ಭವಿಷ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕೆಲವು ಬದಲಾವಣೆಗಳು ಆಗ ಬೇಕೆಂದು ಮೋಹಿನೀ ಪಾಂಡೇ ಭಾವಿಸುತ್ತಾರೆ.
ಅಮನ್ ಹಾಗೂ ಕೆಲವು ವಿದ್ಯಾರ್ಥಿಗಳೊಂದಿಗೆ ಇದೇ ವಿಷಯವಾಗಿ ಮೋಹಿನಿ ಚರ್ಚಿಸಿದರು.
ಆ ಚರ್ಚೆಯ ಫಲವೇ ‘ಲರ್ನಿಂಗ್ ಸ್ಕೂಲ್’. ಇದರ ಕಾನ್ಸೆಪ್ಟ್ ಏನೆಂದರೆ, ವಿದ್ಯಾರ್ಥಿಗಳೇ ಇತರ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಅದೇ ರೀತಿ ಶಾಲೆಗೆ ಹೋಗಲಾಗದ ಚಿಕ್ಕ ಮಕ್ಕಳಿಗೆ ಕೂಡಾ ಪಾಠ ಹೇಳಿಕೊಡುತ್ತಾರೆ. ಹೀಗೆ ಪಾಠ ಹೇಳಿಕೊಡುವುದನ್ನು ಅಮನ್ ನಿಂದಲೇ ಮೋಹಿನಿ ಟೀಚರ್ ಪ್ರಾರಂಭಿಸಿದರು.
ಓದಿನಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಯನ್ನು ಮೇಲೆತ್ತುವುದು ಬಹಳ ಕಷ್ಟಸಾಧ್ಯ. ಅಂತಹವರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕಾಗಿರುತ್ತದೆ. ಶಾಲೆಯಲ್ಲಿರುವ ಪ್ರತೀ ವಿದ್ಯಾರ್ಥಿಯ ಮೇಲೂ ಗಮನವಿರಿಸುವುದು ಶಿಕ್ಷಕರಿಗೆ ಕಷ್ಟದ ಕೆಲಸ. ಆದುದರಿಂದಲೇ ಮೋಹಿನೀ ಮೇಡಂ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದರು.

ವಿದ್ಯಾರ್ಥಿಗಳಿಂದಲೇ ನಾಯಕರು.
ಈ ಐಡಿಯಾ ಬಹಳ ಚೆನ್ನಾಗಿ ಕೆಲಸ ಮಾಡಿತು. ಈಗ ಮಕ್ಕಳು ಇಂಗ್ಲಿಶ್ ನಲ್ಲಿ ಮಾತನಾಡುತ್ತಾರೆ. ಅವರ ಆಲೋಚನಾ ಶಕ್ತಿ ವಿಸ್ತಾರಗೊಂಡಿದೆ. 6 ತಿಂಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲದಿರುವುದನ್ನು ಮೋಹಿನೀ ಟೀಚರ್ ಗಮನಿಸಿದರು.
ವಿದ್ಯಾರ್ಥಿ ನಾಯಕರು ಸಹ ಈ ವಿಷಯವನ್ನು ಗಮನಿಸಿದ್ದಾರೆ. ಆರಂಭಿಕವಾಗಿ ಈ ಪ್ರಾಜೆಕ್ಟ್ ವಿಜಯವಂತವಾಯಿತು. ಪ್ರತೀ ದಿನ ಶಾಲೆ ಮುಗಿದನಂತರ ಒಂದೂವರೆ ಗಂಟೆ ಸಮಯ ‘ಲರ್ನಿಂಗ್ ಸರ್ಕಲ್’ ತರಗತಿ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಲೀಡರ್ ಬಳಿಹೋಗುತ್ತಾರೆ. ಒಂದು ವೇಳೆ ಲೀಡರ್ ಇಲ್ಲದಿದ್ದ ಪಕ್ಷದಲ್ಲಿ ಆ ಗುಂಪಿನ ಇತರೆ ಸದಸ್ಯನ ಮನೆಗೆ ಹೋಗಿ ಓದಲು ಪ್ರಾರಂಭಿಸುತ್ತಾರೆ.ಯಾವುದೇ ಕಾರಣಕ್ಕೂ ‘ಲರ್ನಿಂಗ್ ಸ್ಕೂಲ್’ ತರಗತಿಗಳು ನಿಲ್ಲುವುದಿಲ್ಲ.

 


Click Here To Download Kannada AP2TG App From PlayStore!