ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ…ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ.

ಇಷ್ಟವಾದ ಬಣ್ಣವನ್ನು ಅವಲಂಭಿಸಿ ನಿಮ್ಮ ಮನಸ್ಥಿತಿಯನ್ನು ಹೇಳುವ ಮೆಜರ್‌ಮೆಂಟ್ಸ್ ಸಾಕಷ್ಟು ಸಂಖ್ಯೆಯಲ್ಲಿವೆ…ನಿಮಗೆ ಇಷ್ಟವಾಗುವ ಸಿನಿಮಾ, ನೀವು ಇಷ್ಟಪಡುವ ಪ್ರದೇಶವನ್ನು ಅವಲಂಭಿಸಿಯೂ ನಿಮ್ಮ ಬಿಹೇವಿಯರನ್ನು ಅಂದಾಜು ಮಾಡುವ ಅಂಜನಗಳು ಸಾಕಷ್ಟು ಕಾಣಿಸುತ್ತವೆ. ಇದು ಶೇ.100ರಷ್ಟು ಸತ್ಯವೇ ಎಂದರೆ ಹೇಳಲು ಸಾಧ್ಯವಿಲ್ಲ. ಅಷ್ಟೋ ಇಷ್ಟು ನಮ್ಮ ಟೇಸ್ಟ್‌ಗೆ ನಮ್ಮ ವ್ಯಕ್ತಿತ್ವಕ್ಕೆ ಸಮೀಪ ಇರುತ್ತವೆ ಎಂಬುದು ಮಾತ್ರ ನಿಜ. ಇದೀಗ ಹೊಸ ಸಂಶೋಧನೆ ಎಲ್ಲರನ್ನೂ ಆಕರ್ಷಿಸುತ್ತಿದೆ. ರಕ್ತದ ಗುಂಪನ್ನು ಅವಲಂಭಿಸಿ ನಿಮ್ಮ ಬಿಹೇವಿಯರನ್ನು ಹೇಳುವ ಹೊಸ ರೀಸರ್ಚ್ ಇದು…ನೀವೂ ಟ್ರೈ ಮಾಡಿ ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿದುಕೊಳ್ಳಿ…!!

ಎ ಪಾಸಿಟೀವ್ (A+). ನಿಮ್ಮಲ್ಲಿ ಪ್ರವಹಿಸುತ್ತಿರುವುದು ಈ ರಕ್ತದ ಗುಂಪಾದರೆ ನೀವು ಒಳ್ಳೆಯ ನಾಯಕತ್ವ ಗುಣವನ್ನು ಹೊಂದಿರುತ್ತೀರಿ. ಎಲ್ಲರನ್ನೂ ಹಾಗೆಯೇ ತಮ್ಮ ಕಡೆಗೆ ಸೆಳೆದುಕೊಳ್ಳುವ ವ್ಯಕ್ತಿತ್ವ ಇವರದು. ಹಾಗೆ ಎಂದುಕೊಂಡು ಮುಂಬರುವ ಚುನಾವಣೆಗೆ ಯಾವುದಾದರೂ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಬೇಕೆ ಎಂದು ಮಾತ್ರ ನಮ್ಮನ್ನು ಕೇಳಬೇಡಿ.

ಎ ನೆಗಟೀವ್ (A-). ನಿಮ್ಮದು ಈ ಬ್ಲಡ್ ಗ್ರೂಪೇ…ಆದರೆ ಬೆಟ್ಟವವನ್ನೇ ಹಿಂಡಿ ಹಿಪ್ಪೆ ಮಾಡುವಷ್ಟು ಕಷ್ಟಪಡುವಂತವರು. ಕಷ್ಟವನ್ನೇ ನಂಬಿಕೊಂಡಂತ ನೇಚರ್ ನಿಮ್ಮದು.

ಬಿ ಪಾಸಿಟೀವ್ (B+). ಈ ವರ್ಗದವರಾದರೆ, ಸ್ಯಾಕ್ರಿಫೈಜ್ ಮಾಡುವುದರಲ್ಲಿ ಮುಂದಿರುತ್ತಾರೆ. ತ್ಯಾಗಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ, ಶಿಬಿ ಚಕ್ರವರ್ತಿಗೆ ಜೆರಾಕ್ಸ್ ಕಾಪಿ ತರಹ ಇರುತ್ತದೆ ಇವರ ಸ್ವಭಾವ.

ಬಿ ನೆಗಟೀವ್ (B-). ನಿಮ್ಮ ಬ್ಲಡ್ ಗ್ರೂಪ್ ಇದಾದರೆ…ನಿಮ್ಮಲ್ಲಿ ನೆಗಟೀವ್ ಆಲೋಚನೆಗಳು ಹೆಚ್ಚು, ಸೆಲ್ಪಿಜಂ ಇರುತ್ತದೆ, ಕೋಪ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಸೋ ಅವುಗಳನ್ನು ನಿಯಂತ್ರಿಸಿಕೊಳ್ಳಬೇಕಾದ ಅಗತ್ಯವಿದೆ.

ಓ ಪಾಸಿಟೀವ್ (O+). ನೀವು ಐನ್‌ಸ್ಟೀನ್‌ಗೆ ವಾರಸ್ದಾರರಿದ್ದಂತೆ, ನಿಮ್ಮ ಮೈಂಡ್ ಶಂಕರ್ ರೋಬೋಗಿಂತಲೂ ಸ್ಪೀಡು…ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

ಓ ನೆಗಟೀವ್ O-). ಮಾತಿಲ್ಲ ಕಥೆಯಿಲ್ಲ ಅಂತಾರಲ್ಲ ಆ ರೀತಿಯ ಟೈಪ್ ರಕ್ತದ ವರ್ಗದವರು. ಯಾವಾಗಲೂ ರಿಸರ್ವ್ ಆಗಿರುತ್ತಾರೆ. ಕವನ ಗೀಚುತ್ತಾ, ಬಾತ್ ರೂಮಲ್ಲಿ ಹಾಡು ಗುನುಗುತ್ತಾ, ತಮ್ಮಲ್ಲಿ ತಾವೇ ಗೊಣಗಿಕೊಳ್ಳುವ ಪೈಕಿ ಇವರು.

ಎಬಿ ಪಾಸಿಟೀವ್ (AB+). ಇತರರಿಗೆ ಸಹಾಯ ಮಾಡುತ್ತೇನೆ ಎಂಬ ಬೋರ್ಡ್ ಕತ್ತಿಗೆ ತಗಲಾಕಿಕೊಂಡಿರಲ್ಲ ಅಷ್ಟೆ. ಆದರೆ ಅದಕ್ಕಿಂತಲೂ ಹೆಚ್ಚಾಗಿಯೇ ಸಹಾಯ ಮಾಡುತ್ತಾರೆ. ಹೆಲ್ಪ್ ಮಾಡಲು ಸ್ಪರ್ಧೆಗೆ ಬೀಳುವ ಮನಸ್ತತ್ವ ಇವರದು.

ಎಬಿ ನೆಗಟೀವ್ (AB-). ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸುತ್ತಾರೆ…ಲಾಭ ಇಲ್ಲದೆ ಹುಲ್ಲುಕಡ್ಡಿಯನ್ನೂ ಪಕ್ಕಕ್ಕಿಡಲ್ಲ ಈ ಬ್ಲಡ್ ಗ್ರೂಪ್‍ನವರು.

ಕೇವಲ ಕೆಲವು ಮಂದಿಯನ್ನು ಗಣನೆಗೆ ತೆಗೆದುಕೊಂಡು ಮಾಡಿದ ಸಂಶೋಧನೆ ಮಾತ್ರ ಇದು ಎಂಬುದನ್ನು ಗಮನಿಸಬೇಕು. ಎಲ್ಲರ ಸ್ವಭಾಗಳೂ ಅಚ್ಚಿಳಿಸಿದಂತೆ ಹೀಗೆ ಇರಬೇಕು ಎಂಬ ರೂಲ್ ಏನೂ ಇಲ್ಲ, ಆದರೆ ಬಹಳಷ್ಟು ಮಂದಿ ಇವರದು. ಈ ರೀತಿ ಇರಬಹುದು.

 


Click Here To Download Kannada AP2TG App From PlayStore!