ಈ 5 ಗಿಡಗಳಲ್ಲಿ ಯಾವುದಾದರೂ ಒಂದನ್ನು ಮನೆಯಲ್ಲಿ ಇಟ್ಟುಕೊಂಡರೆ ಸಾಕು. ಸೊಳ್ಳೆಗಳು ಪರಾರಿಯಾಗುತ್ತವೆ ಗೊತ್ತಾ..!

ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳು ನಮ್ಮ ಮೇಲೆ ದಾಳಿ ಮಾಡಲು ಸಿದ್ಧವಾಗಿ ಇರುತ್ತವೆ. ಸಾವಿರ, ಲಕ್ಷಗಳ ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತಾ ಅವುಗಳ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಾ ನಮ್ಮ ಮೇಲೆ ದಾಳಿ ಮಾಡುತ್ತವೆ. ಇವುಗಳಿಂದ ನಾವು ಡೆಂಗ್ಯೂ, ಟೈಫಾಯಿಡ್, ಮಲೇರಿಯಾದಂತಹ ವಿಷಮ ಜ್ವರಗಳಿಂದ ನರಳಬೇಕಾಗುತ್ತದೆ. ಆದರೆ ಈ ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದಲೇ ಬಳಷ್ಟು ಮಂದಿ ಮಸ್ಕಿಟೋ ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಕೆಲವರು ಸೊಳ್ಳೆ ಪರದೆ ಬಳಸುತ್ತಾರೆ. ಇವಲ್ಲದೆ ಕೆಳಗೆ ಕೊಟ್ಟಿರುವ ಹಲವು ಗಿಡಗಳನ್ನು ಮನೆನ್ಯಲ್ಲಿ ಬೆಳೆಸಿಕೊಂಡರೆ ಸೊಳ್ಳೆಗಳನ್ನು ಓಡಿಸಬಹುದು. ಯಾಕೆಂದರೆ ಈ ಗಿಡಗಳಿಗೆ ಬಿಡುವ ಹೂಗಳು ನಿಮ್ಮ ಮನೆಯೊಳಕ್ಕೆ ಸೊಳ್ಳೆಗಳು ಬರದಂತೆ ತಡೆಯುತ್ತವೆ. ಸೊಳ್ಳೆಗಳನ್ನು ನಿವಾರಿಸುತ್ತವೆ. ಹಾಗಾಗಿ ಆ ಗಿಡಗಳು ಏನು ಎಂದು ಈಗ ತಿಳಿದುಕೊಳ್ಳೋಣ.

1. ದಿ ಫೋರ್ ಓ ಕ್ಲಾಕ್ ಫ್ಲವರ್ (The four O’ clock flower)
ಇದನ್ನೇ Mirabilis jalapa ಎಂದು ವೈಜ್ಞಾನಿಕ ಹೆಸರಿನಿಂದ ಕರೆಯುತ್ತಾರೆ. ಇದು ಪೆರೂ ದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಅನೇಕ ನರ್ಸರಿಗಳಲ್ಲಿ ಇದನ್ನು ಮಾರುತ್ತಾರೆ. ಇದು ಮಧ್ಯಾಹ್ನದ ಹೊತ್ತು, ಸಂಜೆ 4 ಗಂಟೆ ಸಮಯದಲ್ಲಿ ಹೂವನ್ನು ಬಿಡುತ್ತದೆ. ಹಾಗಾಗಿ ಇದಕ್ಕೆ ಆ ಹೆಸರು ಬಂದಿದೆ. ಆದರೆ ಈ ಗಿಡದ ಹೂಗಳು ಸೊಳ್ಳೆಗಳನ್ನಷ್ಟೇ ಅಲ್ಲದೆ, ಸೊಳ್ಳೆಗಳ ಲಾರ್ವಾವನ್ನು ನಾಶ ಮಾಡುತ್ತವೆ. ಆದಕಾರಣ ಈ ಗಿಡವನ್ನು ಮನೆಯ ದ್ವಾರ, ಬಾಗಿಲಿನ ಬಳಿ ಬೆಳೆಸಿಕೊಂಡರೆ ಉತ್ತಮ. ಸೊಳ್ಳೆಗಳಿಂದ ರಕ್ಷಣೆ ಸಿಗುತ್ತದೆ.

2. ತುಳಸಿ
ಈ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಯಾಕೆಂದರೆ ಇದರಲ್ಲಿರುವ ಔಷಧಿ ಗುಣಗಳು ವರ್ಣಿಸಲಸಾಧ್ಯ. ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ತುಳಸಿಗೆ ಇದೆ. ಆದರೆ ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಸಹ ತುಳಸಿಗೆ ಇದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ. ಆದಕಾರಣ ತುಳಸಿ ಗಿಡಗಳನ್ನು ಬೆಳೆಸಿಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು.

3. ಲವಂಗ ಗಿಡ
ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಆದಕಾರಣ ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಉಪಯುಕ್ತ. ಆದರೆ ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.

4. ಚಂಡು ಹೂವು
ಇದನ್ನು ನಮ್ಮ ದೇಶದಲ್ಲಿ ಬಹಳಷ್ಟು ಮಂದಿ ಅಲಂಕಾರಕ್ಕಾಗಿ ಬಳಸುತ್ತಾರೆ. ಚಂಡು ಹೂವನ್ನು ಮಾಲೆಯಾಗಿ ಕಟ್ಟಿ ಆಯಾ ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಾರೆ. ಆದರೆ ಈ ಹೂಗಳು ಸೊಳ್ಳೆಗಳನ್ನು ಓಡಿಸುತ್ತವೆ ಕೂಡ. ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಇರುತ್ತವೆ.

5. ಗೆರಾನಿಯಂ (Geranium) ಈ ಗಿಡದ ಹೂಗಳಿಂದ ಬರುವ ವಾಸನೆ ನಿಂಬೆಹಣ್ಣಿನ ವಾಸನೆ ಹೋಲುತ್ತದೆ. ಆದರೆ ಈ ವಾಸನೆ ಸೊಳ್ಳೆಗಳನ್ನು ಓಡಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸಾಕು ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು.


Click Here To Download Kannada AP2TG App From PlayStore!