ಯುದ್ಧದಲ್ಲಿ ವೀರ ಮರಣ ಹೊಂದಿದ ಭಾರತ ಸೇನಾಧಿಕಾರಿಯೊಬ್ಬರ ಪತ್ನಿಯ ರಿಯಲ್ ಸ್ಟೋರಿ..!

“ಆಗ ನನ್ನ ವಯಸ್ಸು 19 ವರ್ಷ. ಆ ಏಜ್‌ನಲ್ಲಿ ನನಗೆ ಮದುವೆಯಾಯಿತು. ಅದೂ…ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಜತೆಗೆ. ಅವರ ಹೆಸರು ಕ್ಯಾಪ್ಟನ್ ಷಫೀಕ್ ಘೋರಿ. ಮದುವೆ ಬಳಿಕ ಬೇರೆ ಸಂಸಾರ ಮಾಡಿದೆವು. ಆದರೆ ಅವರು ಹೆಚ್ಚಾಗಿ ದೇಶದ ಗಡಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚು ದಿನಗಳ ಕಾಲ ಬಾರ್ಡರ್‌ನಲ್ಲೇ ಇರುತ್ತಿದ್ದರು. ಮನೆಗೆ ಬಂದು ಸಮಯ ಖರ್ಚು ಮಾಡುತ್ತಿದ್ದದ್ದು ತುಂಬಾ ಕಡಿಮೆ. ಹಾಗಾಗಿ ಮನೆ ಬಳಿ ನಾನೊಬ್ಬಳೇ ಇರಬೇಕಾಗಿತ್ತು. ಈಗಿನಂತೆ ಆಗ ಮೊಬೈಲ್ ಫೋನ್‌ಗಳು ಇರಲಿಲ್ಲ. ಲ್ಯಾಂಡ್ ಲೈನ್ ಫೋನ್‌ಗಳೇ ಗತಿ. ಅವರು ಫೋನ್ ಮಾಡಬೇಕೆಂದರೆ ಆರ್ಮಿ ಬೇಸ್‌ಗೆ ಬಂದರಷ್ಟೇ ಸಾಧ್ಯವಾಗುತ್ತಿತ್ತು. ಮನೆ ಬಳಿ ಒಬ್ಬಳೇ ಇದ್ದ ನನಗೆ ತುಂಬಾ ಸಮಸ್ಯೆಗಳಾಗುತ್ತಿತ್ತು. ಆದರೆ ನನ್ನ ಗಂಡ ಘೋರಿ ಒಮ್ಮೆ ರಜೆಯಲ್ಲಿ ಬಂದು ನನಗೆ ಧೈರ್ಯ ತುಂಬಿದರು. ಆರ್ಮಿ ಅಧಿಕಾರಿಗಳು, ಸೈನಿಕರ ಪತ್ನಿಯರು, ಕುಟುಂಬ ಸದಸ್ಯರು ಹೇಗಿರುತ್ತಾರೆ ಎಂದು ಹೇಳಿದರು. ಆಗಿನಿಂದ ತುಂಬಾ ಧೈರ್ಯವಾಗಿರಲು ಆರಂಭಿಸಿದೆ”

ಹಾಗೆಯೇ ವರ್ಷಗಳು ಉರುಳಿದವು. ನಮ್ಮ ಜೀವನದಲ್ಲಿ ಇಬ್ಬರು ಮಕ್ಕಳೂ ಬಂದರು. ಅದು 1999ನೇ ವರ್ಷ. ನನ್ನ ಗಂಡ ಷಫೀಕ್‌ಗೆ ಶ್ರೀನಗರ್‌ಗೆ ವರ್ಗಾವಣೆಯಾಯಿತು. ಅಲ್ಲಿಗೆ ಆರ್ಮಿಯವರ ಕುಟುಂಬಗಳಿಗೆ ಅನುಮತಿ ಇಲ್ಲ. ಕೇವಲ ಸೈನಿಕರು, ಅಧಿಕಾರಿಗಳು ಮಾತ್ರ ಇರುವ ಅತ್ಯಂತ ಗಲಭೆ ಪೀಡಿತ ಪ್ರದೇಶ. ಹಾಗಾಗಿ ನಾನು ನನ್ನ ಮಕ್ಕಳು ಅಲ್ಲಿಗೆ ಹೋಗಲಿಲ್ಲ. ಆ ಸಮಯದಲ್ಲೇ ನಾನು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನಲ್ಲಿರುವ ನನ್ನ ಹುಟ್ಟಿದ ಮನೆಗೆ ಹೋದೆ. ಅದು ಜೂನ್ 28, 2001ನೇ ವರ್ಷ. ನನಗೆ ನನ್ನ ಗಂಡನಿಂದ ಫೋನ್ ಬಂತು. ಮಿಲಿಟರಿ ಕಾರ್ಯಾಚರಣೆ ಭಾಗವಾಗಿ ದಟ್ಟವಾದ ಕಾಡಿನಲ್ಲಿದ್ದಾರಂತೆ. ಏನು ನಡೆದರೂ, ಯಾವುದೇ ರೀತಿಯ ಸುದ್ದಿ ಬಂದರೂ ಧೈರ್ಯವಾಗಿರಬೇಕೆಂದು ಅವರು ಫೋನ್‌ನಲ್ಲಿ ಹೇಳಿದರು.

ಆಗ ನನಗೂ ಸ್ವಲ್ಪ ಭಯ ಅನ್ನಿಸಿತು. ಮಕ್ಕಳ ಜತೆಗೆ ಮಾತನಾಡಬೇಕೆಂದು ಅವರು ಹೇಳಿದರು. ಅವರು ಹೊರಗೆ ಹೋಗಿದ್ದಾರೆ. ಬಂದ ಬಳಿಕ ಕರೆ ಮಾಡುತ್ತೇನೆಂದು ಹೇಳಿದೆ. ಬಳಿಕ ಎರಡು ದಿನಗಳು ಅಂದರೆ…ಜುಲೈ 1ರಂದು ನಮ್ಮ ಮನೆಗೆ ಕೆಲವು ಆರ್ಮಿ ಅಧಿಕಾರಿಗಳು ಬಂದರು. ನನ್ನ ಗಂಡ ಸತ್ತು ಹೋದ ಎಂದು ತಿಳಿಸಿದರು. ಇದರಿಂದ ಶಾಕ್ ಆಗಿ ತಲೆಸುತ್ತಿ ಬಿದ್ದುಬಿಟ್ಟೆ. ಬಳಿಕ ಹೇಗೋ ಎದ್ದು ಚೇತರಿಸಿಕೊಂಡೆ. ನನಗೆ ಗೊತ್ತಿತ್ತು, ಈ ರೀತಿಯ ಪರಿಸ್ಥಿತಿ ಎಂದೋ ಒಂದು ಬರುತ್ತದೆಂದು. ನನ್ನ ಗಂಡ ಮೊದಲೇ ಹೇಳಿದನಲ್ಲವೇ, ಏನು ನಡೆದರೂ ಧೈರ್ಯವಾಗಿ ಇರಬೇಕೆಂದು, ಅವರು ಹೇಳಿದಂತೆ ಧೈರ್ಯವಾಗಿದ್ದೇನೆ. ದೇಶ ರಕ್ಷಣೆಗಾಗಿ ಅವರು ಹುತಾತ್ಮರಾಗಿದ್ದು ಹೆಮ್ಮೆ ಅನ್ನಿಸುತ್ತದೆ.

ನನ್ನ ಗಂಡನ ಮೃತದೇಹದ ಜತೆಗೆ ಅವರ ಬಟ್ಟೆ, ವಸ್ತುಗಳನ್ನು ಅಧಿಕಾರಿಗಳು ತಂದುಕೊಟ್ಟರು. ಡ್ರೆಸ್‌ನಲ್ಲಿ ಒಂದು ಪತ್ರವೂ ಇತ್ತು. ಅವರು ಕಾಡಿಗೆ ಹೊರಡುವ ಮುನ್ನ ಬರೆದ ಲೆಟರ್ ಅದು. ಅದನ್ನು ಈಗಲೂ ಓದುತ್ತಾ, ಅದನ್ನು ಓದುವಾಗ ಅವರು ನನ್ನ ಪಕ್ಕದಲ್ಲೇ ಇದ್ದಂಗೆ ಭಾಸವಾತ್ತದೆ. ಅವರ ಡ್ರೆಸನ್ನು ನಿತ್ಯ ಪಕ್ಕದಲ್ಲೇ ಇಟ್ಟುಕೊಂಡು ಕೂರುತ್ತೇನೆ. ಅವರು ನನ್ನ ಬಳಿಯೇ ಇದ್ದಂಗೆ ಇರುತ್ತದೆ. ಆ ಡ್ರೆಸ್‌ನಲ್ಲಿ ಅವರ ಪರ್ಸ್, ಹಣ ಈಗಲೂ ಹಾಗೆಯೇ ಇದೆ. ಅವರು ಹೋದಮೇಲೆ ಬಹಳಷ್ಟು ಮಂದಿ ಮದುವೆ ಮಾಡಿಕೋ ಎಂದರು. ನಾನೇ ಬೇಡ ಅಂದೆ. ಅವರ ನೆನಪಿನಲ್ಲಿ ಹಾಗೆಯೇ ಬದುಕುತ್ತೇನೆ ಎಂದೆ..!”

— ಯುದ್ಧದಲ್ಲಿ ವೀರಮರಣ ಹೊಂದಿದ ಭಾರತ ಆರ್ಮಿ ಅಧಿಕಾರಿ ಕ್ಯಾಪ್ಟನ್ ಷಫೀಕ್ ಘೋರಿ ಪತ್ನಿ ಸಲ್ಮಾ ಘೋರಿ ಜೀವನಗಾಥೆ ಇದು..! ರಿಯಲ್ ಸ್ಟೋರಿ..!

 


Click Here To Download Kannada AP2TG App From PlayStore!