ಕೆಲಸದ ಒತ್ತಡದಲ್ಲಿ ವೈವಾಹಿಕ ಜೀವನವನ್ನು ಪಕ್ಕಕ್ಕಿಡುತ್ತಿದ್ದೀರಾ..? ಸಮಸ್ಯೆಗಳು, ಪರಿಹಾರಗಳನ್ನು ತಿಳಿದುಕೊಳ್ಳಿ..!

ಶರಣ್ಯಾ, ಪ್ರದೀಪ್ ಮದುವೆಯಾಗಿ ಆರು ತಿಂಗಳಾಗಿದೆ. ಸ್ಪರ್ಧಾ ಜಗತ್ತಿನಲ್ಲಿ ಕಷ್ಟಪಡದಿದ್ದರೆ ತಪ್ಪಿದ್ದಲ್ಲ ಎಂಬ ತತ್ವ. ಮನೆಗೆ ಬಂದರೂ ಕಚೇರಿ ಕೆಲಸದಲ್ಲಿ ಮುಳುಗುವ ಪ್ರದೀಪ್…ಪ್ರತಿಫಲವಾಗಿ ವಿಚ್ಛೇದನ…ಇದು ಕೇವಲ ಶರಣ್ಯಾ, ಪ್ರದೀಪ್ ಅವರ ಸಮಸ್ಯೆಯಷ್ಟೇ ಅಲ್ಲ. ಉದ್ಯೋಗ ಮಾಡುತ್ತಿರುವ ದಂಪತಿಗಳು ಕೆಲಸದ ಒತ್ತಡದ ಕಾರಣ ಅವರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಕಡೆಗೆ ವಿಚ್ಛೇದನಕ್ಕೆ ದಾರಿಯಾಗುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ… ಹಾಗಿದ್ದರೆ ಇದಕ್ಕೆ ಪರಿಹಾರ ಇಲ್ಲವೇ…ಸಮಸ್ಯೆ ಎಲ್ಲಿ ಆರಂಭವಾಗುತ್ತದೋ ಗುರುತಿಸುವುದು ಮುಖ್ಯ.. ನೀವು ನಿಮ್ಮ ಉದ್ಯೋಗನ್ನು ಪ್ರೀತಿಸುತ್ತಾ ತುಂಬಾ ಚೆನ್ನಾಗಿ ಕೆಲಸ ಮಾಡಬಹುದು. ಆದರೆ ನಿಮ್ಮ ಮನೆಯಲ್ಲಿ ಪ್ರೀತಿಸುವವರನ್ನು ನಿರ್ಲಕ್ಷ್ಯ ಮಾಡಿದರೆ, ಅದು ಅಪಾರ್ಥಕ್ಕೆ ಕಾರಣವಾಗುತ್ತದೆ. ಇಲ್ಲಿವೆ ನೋಡಿ ನಿಮ್ಮ ಉದ್ಯೋಗ ನಿಮ್ಮ ವೈಯಕ್ತಿಕ ಜೀವನಕ್ಕೆ ಅಡ್ಡಿಯಾಗುತ್ತಿದೆ ಎಂಬುದಕ್ಕೆ ಸಂಕೇತಗಳು.

ಕಚೇರಿಯಲ್ಲಿ ಮಾಡಬೇಕಾದ ಕೆಲಸ, ಈ ನಡುವೆ ಎಲ್ಲರೂ ಅಷ್ಟೋ ಇಷ್ಟೋ ಕೆಲಸವನ್ನು ಮನೆಗೂ ಕೊಂಡೊಯ್ಯುತ್ತಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಆದರೆ ಜೀವನ ಸಂಗಾತಿ ನೀವು ಮನೆಗೆ ಬಂದ ಕೂಡಲೆ ತನ್ನೊಂದಿಗೆ ಕಳೆಯಬೇಕೆಂದು ಬಯಸಬಹುದು.. ಆಗಲೂ ನೀವು ಆಫೀಸು ಕೆಲಸ ಮುಂದಿಟ್ಟುಕೊಂಡರೆ ಏನು ಪರಿಸ್ಥಿತಿ.
ನಿಮ್ಮ ಜೀವನ ಸಂಗಾತಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದು, ನಿಮ್ಮೊಂದಿಗೆ ದೈಹಿಕವಾಗಿ ಸ್ವಲ್ಪ ಸಮಯ ಕಳೆಯಬೇಕೆಂದಿದ್ದರೆ, ನಿಮ್ಮ ಲ್ಯಾಪ್‍ಟಾಪನ್ನು ಬೆಡ್‌ರೂಂಗೆ ತಂದು ಆಕೆ ಅಥವಾ ಆತ ಕಾಯುತ್ತಿದ್ದರೆ…ನಿಮ್ಮ ಸಂಗಾತಿ ಡಿಸ್ಟರ್ಬ್ ಆಗಿ ನಿದ್ದೆಗೆ ಜಾರಬಹುದು..ಅದು ನಿಮ್ಮ ಬಂಧವನ್ನು ಇನ್ನಷ್ಟು ದೂರ ಮಾಡುತ್ತದೆ.
ನೀವು ಕೆಲಸ ಮಾಡುವ ಕಡೆ ಏನೋ ತಪ್ಪಾಗಿ, ಮನೆಗೆ ಬಂದಾಗ ಸಹ ನಿಮ್ಮ ಸಂಗಾತಿ ಮೇಲೆ ಅಕಾರಣವಾಗಿ ಕಿರುಚಾಡುತ್ತಿದ್ದೀರಾ? ಇದು ತುಂಬಾ ತುಂಬಾ ತಪ್ಪು. ಆಫೀಸಿನ ಗಲಾಟೆಯನ್ನು ಆಫೀಸಿಗೇ ಮೀಸಲಿಡಿ…ಅದನ್ನು ಮನೆವರೆಗೂ ತಂದು…ನೀವೊಂದು ಮಾತು…ಅವರೊಂದು ಮಾತು ಆಡಿ ಮಾತಿಗೆ ಮಾತು ಬೆಳೆದು ವಿರಸಕ್ಕೆ ಕಾರಣವಾಗುವ ಸನ್ನಿವೇಶ ತಂದುಕೊಳ್ಳಬೇಡಿ.

ನಿಮ್ಮ ಸಂಗಾತಿ ನಿಮ್ಮೊಂದಿಗೆ ಬೆಡ್ ಮೇಲೆ ಇದ್ದಾಗ ನೀವು ಕಚೇರಿ ಸಂಗತಿಗಳನ್ನೇ ಆಲೋಚಿಸುತ್ತಾ ಬಹಳ ನೀರಸವಾಗಿ ಇದ್ದು, ಬೆಡ್ ಮೇಲೆ ಬಿದ್ದು ಸಹಕರಿಸದೆ ನಿದ್ದೆ ಹೋದರೆ, ಮಟಾಷ್… ಈ ಒಂದು ಕಾರಣ ಸಾಕು…. ನೀವು ವಿಚ್ಛೇದನದ ತನಕ ಹೋಗಲು.. ಆ ರೀತಿ ಅಲ್ಲದೆ ನಿಮ್ಮ ಪರಿಸ್ಥಿತಿಯನ್ನು ನಿಮ್ಮ ಪಾರ್ಟನರ್‌ಗೆ ಹೇಳಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲು ಹೇಳಿ. ನೀವೂ ಅಷ್ಟೇ ಲವಲವಿಕೆಯಿಂದ ಇರಲು ಪ್ರಯತ್ನಿಸಿ.
ನೀವು ನಿತ್ಯ ಆಫೀಸು ಕೆಲಸದ ಮೇಲೆ ಬೇರೆ ಊರಿಗೆ ಹೋಗುತ್ತಿದ್ದರೆ..ಮನೆ ಬಳಿ ಇರುವ ಸಮಯ ತುಂಬಾ ಕಡಿಮೆಯಾಗಿ ಅದು ನಿಮ್ಮ ಬಂಧನವನ್ನು ಇನ್ನಷ್ಟು ದೂರ ಮಾಡುತ್ತದೆ. ಆದಕಾರಣ ಯಾವಗಲೂ ಅಲ್ಲದಿದ್ದರೂ ಆಗಾಗ ಕಚೇರಿ ಕೆಲಸದ ಮೇಲೆ ಹೋಗುವ ಟ್ರಿಪ್ಸ್‌ಗೆ ನಿಮ್ಮ ಸಂಗಾತಿಯನ್ನು ಕರೆದೊಯ್ದರೆ ಬಂಧ ಇನ್ನಷ್ಟು ಬಲಗೊಳ್ಳುತ್ತದೆ. ನೀವು ದೂರ ಹೋಗುವುದು ಕೆಲಸದ ನಿಮಿತ್ತ ಎಂದು ತಿಳಿಸಿದಂತಾಗುತ್ತದೆ.
ಬಹಳಷ್ಟು ಮಂದಿ ಮಾಡುವ ತಪ್ಪೆಂದರೆ…. ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗುವುದು, ಅವರ ಹುಟ್ಟುಹಬ್ಬದ ದಿನವೂ ವಿಶ್ ಮಾಡುವುದನ್ನು ಮರೆಯುತ್ತಾರೆ. ಇದಿಷ್ಟೇ ಅಲ್ಲದೆ ಎಲ್ಲಾ ಮುಖ್ಯವಾದ ದಿನಗಳನ್ನೂ ಮರೆಯುತ್ತಾರೆ. ಆ ರೀತಿ ಅಲ್ಲದೆ ಮುಖ್ಯವಾದ ದಿನಗಳನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡು ವಿಶ್ ಮಾಡಿದರೆ… ನೀವು ಮಾಡುವ ಒಂದು ಸಣ್ಣ ವಿಶ್ ಅವರಿಗೆ ಎವರೆಸ್ಟ್ ಹತ್ತಿದಷ್ಟು ಸಂತೋಷ ನೀಡುತ್ತದೆ.
ಲಾಸ್ಟ್ ಅಂಡ್ ಫೈನಲ್ ಯಾವುದೇ ಒಂದು ಸಣ್ಣ ಗಲಾಟೆಯಾದರೂ ಕೂಡಲೆ ನಿಮಗೆ ಬರುವ ಆಲೋಚನೆ ಅನಗತ್ಯವಾಗಿ ಮದುವೆ ಮಾಡಿಕೊಂಡೆ ಎಂದು… ಆ ಕ್ಷಣಕ್ಕೆ ಕೋಪದಿಂದ ಆ ರೀತಿ ಅನ್ನಿಸಬಹುದು…. ಆದರೆ ನಿಮ್ಮ ಮನಸ್ಸಲ್ಲಿನ ಆ ಮಾತು ಹೊರಗೆ ಬಂದರೆ ವೈವಾಹಿಕ ಜೀವನವನ್ನು ಗಾಯಗೊಳಿಸಿದಂತೆ..ಸೋ..ಸ್ವಲ್ಪ ಶಾಂತವಾಗಿ ಆಲೋಚಿಸಿದರೆ ಪ್ರತಿ ಸಮಸ್ಯೆಗೂ ಪರಿಹಾರ ಸಿಗುತ್ತದೆ.


Click Here To Download Kannada AP2TG App From PlayStore!